ಗೋಕರ್ಣದಲ್ಲಿ ಆತ್ಮ ಲಿಂಗಕ್ಕೆ ಬುಧುವಾರ ಗೃಹ ಸಚಿವಪೂಜೆ
ಕಾರವಾರ 26 : ಗೋಕರ್ಣದಲ್ಲಿ ಆತ್ಮ ಲಿಂಗಕ್ಕೆ ಬುಧುವಾರ ಗೃಹ ಸಚಿವಪೂಜೆ ಸಲ್ಲಿಸಿದರು. ಇದೇ ವೇಳೆ 28 ವರ್ಷದ ಹಿಂದೆ ಗೋಕರ್ಣ ಕ್ಕೆ ಬಂದ ನೆನಪು ಮಾಡಿಕೊಂಡರು.ಗೃಹ ಸಚಿವರಿಗೆ ಮಂಕಾಳು ವೈದ್ಯ ಹಾಗೂ ಮಾರ್ಗರೆಟ್ ಪುತ್ರ ನಿವೇದಿತ್ ಸಾಥ್ ನೀಡಿದರು. ಈ ವೇಳೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಚಿವ ರಾಜಣ್ಣ ನನಗೆ ಕೊಟ್ಟದ್ದು ದೂರಲ್ಲ. ಅದು ಮನವಿ ಗೃಹ ಸಚಿವರಿಗೆ ದೂರು ಕೊಡಲು ಬರಲ್ಲ. ಅದಕ್ಕೆ ಅವಕಾಶ ಇಲ್ಲ. ಸಚಿವ ರಾಜಣ್ಣ ಕೊಟ್ಟದ್ದು ಮನವಿ .ಅದನ್ನ ನಾನು ಕಾನೂನು ಚೌಕಟ್ಟಲ್ಲಿ ಪರೀಶೀಲನೆ ಮಾಡುವಂತೆ ಹಿರಿಯ ಪೊಲೀಸ್ ಅಧಿಕಾರಿಗೆ ಕ್ರಮಕ್ಕೆ ಸೂಚಿಸಿದ್ದೇನೆ ಎಂದರು.ದೇವಸ್ಥಾನದಲ್ಲಿ ರಾಜಕೀಯ ಮಾತಾಡಬಾರದು. ಆದರೂ ನೀವು ಕೇಳಿದ್ದೀರಿ ಎಂದು ಉತ್ತರಿಸುವೆ.ಸ್ಪೀಕರ್ ನನ್ನು ಹಿಟ್ಲರ್ ಎಂದು ವಿರೋಧ ಪಕ್ಷದವರು ಟೀಕಿಸಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರುಸದನದ ನಡೆಸುವ ನಿಯಂತ್ರಣ ಮಾಡುವ ಅಧಿಕಾರ ಸ್ಪೀಕರ್ ಅವರದ್ದು ನಿರ್ಧಾರ ಪ್ರಶ್ನಿಸಲು ಯಾರಿಗೂ ಅಧಿಕಾರ ಇಲ್ಲ. ಸದನಕ್ಕೆ ಅವರು ಸ್ಪೀಕರ್ ಸುಪ್ರಿಂ. ಸದಸ್ಯರು ಸಹ ನೀತಿ ನಿಯಮ ಪಾಲಿಸಬೇಕು ಎಂದರು. ಮಧ್ಯಾಹ್ನ ನಂತರ ಕಾರವಾರಕ್ಕೆ ತೆರಳಿ ಉತ್ತರ ಕನ್ನಡದ ಪೊಲೀಸ್ ಇಲಾಖೆಯ ಪ್ರಗತಿ ಪರೀಶೀಲನೆ ಮಾಡುವೆ. ಇಲಾಖೆಗೆ ಹಲವು ವಾಹನಗಳ ಅರೆ್ಣ ಮಾಡಲಿದ್ದೇನೆ ಹಾಗೂ ಎಸ್ಪಿ ಕಚೇರಿ ನವೀಕರಣ ಉದ್ಘಾಟನೆ ಮಾಡಲಿದ್ದೇನೆ ಎಂದು ಗೃಹ ಸಚಿವ ಪರಮೇಶ್ವರ ಹೇಳಿದರು.