ಗೋಕಾಕ 11: ಕನರ್ಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕಾ ಘಟಕದ ಕಾರ್ಯಕರ್ತರು ಶುಕ್ರವಾರದಂದು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ಸತ್ಯಾಗ್ರಹ ನಡೆಸಿದರು.
ತಾಲೂಕಿನ ಕೊಳವಿ, ಕೈತನಾಳ, ಖನಗಾಂವ ಭಾಗದಲ್ಲಿ ಬರುವ ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಅಪಾರವಾಗಿದ್ದು ಅದನ್ನು ಕೂಡಲೇ ಪರಿಹರಿಸಬೇಕು. ಹಗಲು 12 ಗಂಟೆಗಳ ಕಾಲ ರೈತರ ಪಂಪಸೆಟ್ಗಳಿಗೆ ತ್ರೀಪೇಸ್ ವಿದ್ಯುತ್ ಪೂರೈಸಬೇಕು. ದೇವಸ್ಥಾನ ಹಾಗೂ ಶಾಲೆಗಳಿಗೆ ವಿದ್ಯುತ್ ಸಂಪರ್ಕಗಳನ್ನು ಒದಗಿಸಬೇಕು. ತಾಲೂಕಿನಾಧ್ಯಂತ ಎಲ್ಲ ಗ್ರಾಮಗಳಿಗೆ ನಿರಂತರ ಜ್ಯೋತಿ ಯೋಜನೆಯನ್ನು ಕಾರ್ಯಗತಗೊಳಿಸಬೇಕೆಂದು ಧರಣಿ ನಿರತ ರೈತರು ಆಗ್ರಹಿಸಿದರು. ಇದ್ದಕ್ಕೆ ಪ್ರತಿಕ್ರೀಯಿಸಿದ ಹೆಸ್ಕಾಂನ ಸಹಾಯಕ ಕಾರ್ಯನಿವರ್ಾಹಕ ಅಭಿಯಂತರ ಎಸ್.ಪಿ.ವರಾಳೆ ಒಂದು ವಾರದಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಬಗೆ ಹರಿಸುದಾಗಿ ತಿಳಿಸಿದ ಮೇಲೆ ಪ್ರತಿಭಟನೆಯನ್ನು ರೈತರು ಹಿಂಪಡೆದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಮುಖಂಡರಾದ ಸತ್ತೆಪ್ಪ ಮಲ್ಲಾಪೂರೆ, ಬರಮಣ್ಣ ಖೇಮಲಾಪೂರೆ, ಗೋಪಾಲ ಕುಕನೂರ, ತಾಲೂಕಾಧ್ಯಕ್ಷ ರಾಜು ಹೂಲಿಕಟ್ಟಿ, ಕಾಯರ್ಾಧ್ಯಕ್ಷ ಮಂಜುನಾಥ ಪೂಜೇರಿ, ಮಾರುತಿ ನಾಯಿಕ, ಯಲ್ಲಪ್ಪ ತಿಗಡಿ, ಪ್ರದೀಪ ಪೂಜಾರಿ, ಪುಂಡಲೀಕ ನಿಡಸೋಶಿ, ಸತ್ತೆವ್ವ ಕಟ್ನಾಳ, ಗಂಗುಬಾಯಿ ಖನಗಾಂವ, ಮಹಾದೇವಿ ಖನಗಾಂವ ಸೇರಿದಂತೆ ಅನೇಕರು ಇದ್ದರು.