ಗಂಗಾವತಿ ನಗರದಲ್ಲಿ ಕಡ್ಡಾಯವಾಗಿ ವಾಡರ್್ಗಳಿಗೆ ತೆರಳಿ ಸಗಟು ಮಾರಾಟ ಮಾಡಿ

ಕೊಪ್ಪಳ 17: ಗಂಗಾವತಿ ನಗರದ ಮಾರುಕಟ್ಟೆಯಲ್ಲಿ ಇರುವ ತರಕಾರಿ ವರ್ತಕರು ತಮ್ಮ ಅಂಗಡಿಯನ್ನು ಎ.ಪಿ.ಎಂ.ಸಿ ಯಾಡರ್್ನಲ್ಲಿ ಸ್ಥಳಾಂತರಿಸಬೇಕು. ತಮ್ಮಲ್ಲಿರುವ ತರಕಾರಿಯನ್ನು ಈಗಾಗಲೆ ಗುರುತಿಸಿರುವ 17 ನೋಂದಾಯಿತ ಸಗಟು ಮಾರಾಟಗಾರರಿಗೆ ಹಾಗೂ ತಾಲೂಕು ಕ್ರೀಡಾಂಗಣದಲ್ಲಿ ನೋಂದಾಯಿಸಿದ 9 ಜನ ಸೊಪ್ಪು, ಕರಿಬೇವು, ಕೊತ್ತಂಬರಿ ಸಗಟು ಮಾರಾಟಗಾರರಿಗೆ ಮಾರಾಟ ಮಾಡಬೇಕು ಮತ್ತು ಸಗಟು ಮಾರಾಟಗಾರರು ತಮಗೆ ನಿಗದಿಪಡಿಸಿದ ದರದಲ್ಲಿಯೇ ಕಡ್ಡಾಯವಾಗಿ ತಮಗೆ ಹಂಚಿಕೆ ಮಾಡಿರುವ ವಾಡರ್್ಗಳಿಗೆ ಹೋಗಿ ಮಾರಾಟ ಮಾಡಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ಕುಮಾರ್ ತಿಳಿಸಿದ್ದಾರೆ.

ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮನೆ ಮನೆಗಳಿಗೆ ತರಕಾರಿ ವಿತರಿಸಬೇಕು. ಸಾರ್ವಜನಿಕರು ಇನ್ನು ಮುಂದೆ ಮಾರುಕಟ್ಟೆಗೆ ಬರುವಂತಿಲ್ಲ. ಗಂಗಾವತಿ ನಗರಸಭೆ ಪೌರಾಯುಕ್ತರು ತರಕಾರಿ ಸರಿಯಾಗಿ ವರ್ತಕರಿಗೆ ಹಂಚಿಕೆ ಮಾಡುವ ಬಗ್ಗೆ ಸ್ಥಾನಿಕವಾಗಿ ಪರಿಶೀಲನೆ ಮಾಡುವುದರ ಜೊತೆಗೆ ಯಾವುದೇ ಕಾರ್ಯದಲ್ಲಿ ಗೊಂದಲ ಆಗದಂತೆ ಕ್ರಮ ವಹಿಸಿ, ಪೌರಕಾಮರ್ಿಕರಿಂದ ಪ್ರತಿ ದಿನ ಎ.ಪಿ.ಎಂ.ಸಿ ಮಾರುಕಟ್ಟೆಯನ್ನು ಸ್ವಚ್ಚತೆ ಮಾಡಿಸಬೇಕು.

ಈ ಕಾರ್ಯದಲ್ಲಿ ಸಾಮಾಜಿಕ ಅಂತರ, ಸ್ಯಾನಿಟೈಜರ್ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲು ವರ್ತಕರಿಗೆ ಸೂಚಿಸಬೇಕು. ಎ.ಪಿ.ಎಂ.ಸಿ ಯಾಡರ್್ ಹಾಗೂ ತಾಲ್ಲೂಕು ಕ್ರೀಡಾಂಗಣದಲ್ಲಿ ಸ್ಥಳಾಂತರಿಸಬೇಕು. ಪೋಲಿಸ್  ಅಧಿಕಾರಿಗಳು ಸಗಟು ಮಾರಾಟಗಾರರ, ಸಗಟು ವ್ಯಾಪಾರಸ್ಥರ, ರೈತರ ಹಾಗೂ ಉತ್ಪಾದಕರ ಮಧ್ಯೆ ಜನ ಜಂಗುಳಿಯಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಕೊಪ್ಪಳ ತೋಟಗಾರಿಕೆ ಇಲಾಖೆಯ ಉಪನಿದರ್ೇಶಕರು ತರಕಾರಿಯನ್ನು ರೈತರಿಂದ ಮಾರುಕಟ್ಟೆಗೆ ಸರಬರಾಜು ಮಾಡುವ ಕುರಿತು ಮೇಲ್ವಿಚಾರಣೆ ಮಾಡಬೇಕು. 

ಸಾರ್ವಜನಿಕರು ಪಾಸ್ಗಳನ್ನು ಹಿಡಿದುಕೊಂಡು ಅನಗತ್ಯವಾಗಿ, ಅನ್ಯ ಉದ್ದೇಶಗಳಿಗಾಗಿ ಬಳಸಿಕೊಂಡು ಅಡ್ದಾಡುವುದು, ಪೋಲಿಸರೊಂದಿಗೆ ವಾಗ್ವಾದ ಮಾಡುವುದು, ವೃಥಾ ಬೇಕಾಬಿಟ್ಟಿಯಾಗಿ ತಿರುಗಾಡುವುದು ಕಂಡುಬಂದಲ್ಲಿ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು. ಈಗಾಗಲೇ ನಡೆಯುತ್ತಿರುವ ಸಗಟು ಮಾರುಕಟ್ಟೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ರದ್ದುಗೊಳಿಸಿ ಕೂಡಲೇ ವರ್ತಕರು ಎ.ಪಿ.ಎಂಸಿ ಯಾಡರ್್ ಹಾಗೂ ತಾಲೂಕು ಕ್ರೀಡಾಂಗಣಕ್ಕೆ ಇಂದೇ ಸ್ಥಳಾಂತರಿಸಬೇಕು. ಈ ಆದೇಶಕ್ಕೆ ಎಲ್ಲ ವ್ಯಾಪರಸ್ಥರು, ಸಗಟು ಮಾರಾಟಗಾರರು, ಸಾರ್ವಜನಿಕರು ಸಹಕರಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.