ಹೇಮರಡ್ಡಿ ಮಲ್ಲಮ್ಮ ಜಯಂತಿ

ಧಾರವಾಡ 10: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಮರೆಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಪುಷ್ಪ ಗೌರವ ಸಲ್ಲಿಸಿದರು. ಆರತಿ ಪಾಟೀಲ ಹೇಮರೆಡ್ಡಿ ಮಲ್ಲಮ್ಮನವರ ಜೀವನ ಸಾಧನೆ ಕುರಿತ ಗೀತೆಯನ್ನು ಪ್ರಸ್ತುತಪಡಿಸಿದರು. ಹುಬ್ಬಳ್ಳಿ-ಧಾರವಾಡ ಪೊಲೀಸ ಆಯುಕ್ತ ಎಂ.ಎನ್. ನಾಗರಾಜ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ಡಾ:ಬಿ.ಸಿ. ಸತೀಶ್, ಅಪರ ಜಿಲ್ಲಾಧಿಕಾರಿ ಡಾ.ಸುರೇಶ್ ಇಟ್ನಾಳ, ಸಹಾಯಕ ಪೊಲೀಸ್ ಆಯುಕ್ತ ಎಂ.ಎನ್. ರುದ್ರಪ್ಪ, ರಂಗಾಯಣ ಆಡಳಿತಾಧಿಕಾರಿ ಕೆ.ಹೆಚ್. ಚನ್ನೂರ, ಮುಖಂಡರಾದ ವೈ.ಬಿ. ರಾಯರೆಡ್ಡಿ, ಡಾ.ವಿ.ಎಸ್. ದೊಡ್ಡಮನಿ, ಡಾ. ಟಿ.ಡಿ. ಭರಮಗೌಡ್ರ, ಶ್ರೀಧರ ರೆಡ್ಡಿ, ವೀರಣ್ಣ ಕರಡ್ಡಿ, ಬಸವರೆಡ್ಡಿ ಮೂಗನೂರ, ಸುನೀಲ್ ಕುರಹಟ್ಟಿ, ರಘುನಾಥ ಲಕ್ಕಣ್ಣವರ, ಪಾಂಡುರಂಗ ಕಿರೇಸೂರ, ಹೇಮರೆಡ್ಡಿ ಜಕರೆಡ್ಡಿ, ನಿಂಗರೆಡ್ಡಿ ತಾರಿಕೊಪ್ಪ ಮತ್ತಿತರರು ಇದ್ದರು.