ಪ್ರಧಾನ ಅಂಚೆ ಕಚೇರಿ ಪೋಸ್ಟ್ ಫೋರಂ ಸಭೆ
ಸಿರುಗುಪ್ಪ 15: ಪ್ರಧಾನ ಅಂಚೆ ಕಚೇರಿ ಪೋಸ್ಟ್ ಫೋರಂ ಸಭೆ ಬಳ್ಳಾರಿ ವಿಜಯನಗರ ಜಿಲ್ಲೆಗಳ ಅಂಚೆ ಕಚೇರಿಗಳಲ್ಲಿ ಸ್ಥಗಿತ ಗೊಂಡ ರೈಲ್ವೆ ಟಿಕೆಟ್ ಬುಕಿಂಗ್ ಕೌಂಟರ್ ಪುನಃ ಆರಂಭಿಸಿಸಿರುಗುಪ್ಪ -ಭಾರತೀಯ ಅಂಚೆ ಇಲಾಖೆ ಸರ್ಕಾರದ ವಿವಿಧ ಯೋಜನೆಗಳನ್ನು ಸಾರ್ವಜನಿಕರ ಫಲಾನುಭವಿಗಳಿಗೆ ತಲುಪಿಸುವುದು ಸೇರಿ ಅನೇಕ ಸೇವೆಗಳನ್ನು ಪ್ರಾಮಾಣಿಕವಾಗಿ ನೀಡುತ್ತಿದೆ ಎಂದು ಮುಖ್ಯ ಅಂಚೆ ಕಚೇರಿ ಸಂಚಾಲಕರು ಮತ್ತು ಗ್ರೇಡ್ -2 ಪೋಸ್ಟ್ ಮಾಸ್ಟರ್ ಕೆ ಎಲ್ ರಾಮಕೃಷ್ಣ ಅವರು ಹೇಳಿದರು ಸಿರುಗುಪ್ಪ ನಗರದ ಪ್ರಧಾನ ಪೋಸ್ಟ್ ಆಫೀಸ್ ನಲ್ಲಿ ಪೋಸ್ಟ್ ಫೋರಂ ಮೀಟಿಂಗ್ ನ ನೇತೃತ್ವ ವಹಿಸಿ ಅವರು ಮಾತನಾಡಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಬಳ್ಳಾರಿ ಕಂಪ್ಲಿ ಕುರುಗೋಡು ಸಂಡೂರು ವಿಜಯನಗರ ಜಿಲ್ಲೆಯ ಹೊಸಪೇಟೆ ಕೂಡ್ಲಿಗಿ ಕೊಟ್ಟೂರು ಕೂಡ್ಲಿಗಿ ಹಗರಿಬೊಮ್ಮನಹಳ್ಳಿ ಹಡಗಲಿ ಹರಪನಹಳ್ಳಿ ಎರಡು ಜಿಲ್ಲೆಗಳ ಅಂಚೆ ಕಚೇರಿಗಳಲ್ಲಿ ರೈಲ್ವೆ ಟಿಕೆಟ್ ಬುಕ್ಕಿಂಗ್ ಕೌಂಟರ್ ಗಳು ಸ್ಥಗಿತಗೊಂಡಿದ್ದು ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.
ಪುನಹ ಸ್ಥಗಿತಗೊಂಡ ರೈಲ್ವೆ ಟಿಕೆಟ್ ಬುಕ್ಕಿಂಗ್ ಕೌಂಟರ್ ಆರಂಭಿಸುವಂತೆ ಪತ್ರ ಬರೆದಿರುವುದಾಗಿ ಸಭೆಗೆ ತಿಳಿಸಿದರು ಮುಖ್ಯ ಅಂಚೆ ಕಚೇರಿಯ ಎಲ್ ಎಸ್ ಜಿ ಪಿಎ ಎಂ ಮಂಜುನಾಥ ಶೆಟ್ಟಿ ಅವರು ಮಾತನಾಡಿ ಅಂಚೆ ಕಚೇರಿಯ ಕೆಲಸ ಒಂದು ಲಭ್ಯವಿರುವ ಸಾರ್ವಜನಿಕ ಅಭಿಮಾನಿಗಳು ಹ್ಯಾವಲ್ಸ್ ವಾಲ್ ಫ್ಯಾನ್ ಗಳು ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿದೆ ಮತ್ತು ಎರಡು ಕೌಂಟರ್ ಗಳನ್ನು ಎಸ್ ಬಿ ಕೌಂಟರ್ ಮತ್ತು ಎಂಪಿಸಿಎಂ ಕೌಂಟರ್ ಗಳು ಕವರ್ ಮಾಡಲು ಇನ್ನೂ ಒಂದು ಸಾರ್ವಜನಿಕ ಹೊಸ ವಾಲ್ ಫ್ಯಾನ್ ಅಗತ್ಯವಿದೆ ಮುಂಬರುವ ಬೇಸಿಗೆ ಕಾಲ ಎಂದು ಅವರು ವಿವರಿಸಿ ಮಾತನಾಡಿ ಅಂಚೆ ಇಲಾಖೆ ಯಾವುದೇ ಆಸೆಗಳಿಲ್ಲದೆ ಪ್ರಾಮಾಣಿಕ ಸೇವೆ ನೀಡುತ್ತಾ ಬಂದಿದೆ ನೋಂದಣಿ ಪ್ಯಾನ್ ಕಾರ್ಡ್ ವಿತರಣೆ ಉಳಿತಾಯ ಯೋಜನೆ ಠೇವಣಿ ಸೇವೆ ಇನ್ನಿತರ ಎಂದು ವಿವರಿಸಿ ಮಾತನಾಡಿದರು ಸಮಾಜ ಸುಧಾರಕ ಎಂಡಿಜಿಎಸ್‌ಜಿಪಿ ಪೋಸ್ಟ್ ಫೋರಂ ಸದಸ್ಯರಾದ ಎ ಅಬ್ದುಲ್ ನಬಿ ಅವರು ಮಾತನಾಡಿ ಭಾರತ ದೇಶದ ಎಲ್ಲಾ ಇಲಾಖೆಗಳಿಗಿಂತ ನಿಸ್ವಾರ್ಥ ಸೇವೆ ಹಾಗೂ ಪ್ರಾಮಾಣಿಕತೆಗೆ ಉಳಿದುಕೊಂಡ ಏಕೈಕ ಇಲಾಖೆ ಎಂದರೆ ಅದು ಇಂಡಿಯ ಪೋಸ್ಟ್ ಸಿಬ್ಬಂದಿ ವರ್ಗದವರ ಪ್ರಾಮಾಣಿಕ ಸೇವೆಗೆ ಶ್ಲಾಘಿಸಿದ ಅವರು ಪೆನ್ಷನ್ ದಾರರಿಗೆ ಓಎಪಿ ಪಿ ಎಚ್ ಪಿ ಡಿ ಡಬ್ಲ್ಯೂ ಪಿ ಪಿಂಚಣಿ ಪಾವತಿ ಕೌಂಟರ್ ಕೆಲಸಕ್ಕಾಗಿ ಶ್ರಮಿಸುತ್ತಿರುವುದು.
ಅಂಚೆ ಇಲಾಖೆಯ ಅತ್ಯಂತ ಹಳೆಯದು ಪತ್ರಗಳು ಸಂದೇಶಗಳನ್ನು ರವಾನಿಸುವ ಲೈಫ್ ಸರ್ಟಿಫಿಕೇಟ್ ಇಂದು ಡಿಜಿಟಲ್ ಹಣಕಾಸು ವ್ಯವಹಾರ ನಿರ್ವಹಿಸುತ್ತಿರುವದು ಅಭಿವೃದ್ಧಿ ಹೊಂದುತ್ತಾ ಉನ್ನತ ಸೇವೆಗಳನ್ನು ನೀಡುತ್ತಿದೆ ಎಂದರು ಮತ್ತೊಬ್ಬ ಸದಸ್ಯರಾದ ಜೈ ಸಿಂಗ್ ಅಲ್ವರಿ ಅವರು ಮಾತನಾಡಿ ಅಂಚೆ ಇಲಾಖೆ ಸಿಬ್ಬಂದಿ ಗ್ರಾಹಕರೊಡನೆ ವ್ಯವಹರಿಸುವಾಗ ಗೌರವದಿಂದ ವರ್ತಿಸುತ್ತಾರೆ ಇದು ಬೇರೆ ಇಲಾಖೆಗಳಲ್ಲಿ ಕಾಣಸಿಗುವುದಿಲ್ಲ ಅಂಚೆ ಕಚೇರಿಯಲ್ಲಿ ಪ್ರತಿ ವಾರ ಶ್ರಮದಾನ ನಡೆಸುವ ಮೂಲಕ ಸ್ವಚ್ಛವಾಗಿ ಅಚ್ಚುಕಟ್ಟಾಗಿ ಇರಿಸಿ ಕೊಂಡಿದ್ದಕ್ಕೆ ಶ್ಲಾಘಿಸಿ ಭಾರತೀಯ ವಿಶಿಷ್ಟ ಗುರುತಿನ ಆಧಾರ್ ಕಾರ್ಡ್ ದಾರರು ತಮ್ಮ ಹೆಸರು ವಿಳಾಸ ಜನ್ಮ ದಿನಾಂಕ ಮುಂತಾದ ವಿವರಗಳನ್ನು ಬದಲಾವಣೆ ಮಾಡಿಸಬಹುದು ಎಂಬುದು ಕಾರ್ಯ ತುಂಬಾ ಮೆಚ್ಚುಗೆ ವ್ಯಕ್ತಪಡಿಸಿ ನವೀಕರಣವನ್ನು ತುಂಬಾ ಪ್ರಶಂಸಿದರು ಸಾಮಾಜಿಕ ಕಾರ್ಯಕರ್ತ ಎ ಮೊಹಮ್ಮದ್ ನೌಶಾದ್ ಅಲಿ ಅಂಚೆ ಕಚೇರಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು ಮುಖ್ಯ ಅಂಚೆ ಕಚೇರಿಯ ಪಿ ಎ ಎಸ್‌ಎಂ ಕುಮಾರ್ ಸ್ವಾಮಿ ಅವರು ಸರ್ವ ಸದಸ್ಯರನ್ನು ಸ್ವಾಗತ ಬಯಸಿದರು ಹಾಗೂ ವಂದಿಸಿದರು .