ಜ.02ರಿಂದ ಹಜರತ್ ಲಾಡ್ಲೇ ಮಶ್ಯಾಕ್ ದರ್ಗಾ ಜಾತ್ರಾ ಮಹೋತ್ಸವ
ತಾಳಿಕೋಟೆ 29: ಹಜರತ್ ಅಲ್ಲಾವುದ್ದಿನ್ ಅನ್ಸಾರಿ ಉರ್ಫ ಲಾಡ್ಲೇ ಮಶ್ಯಾಕ್ ದರ್ಗಾ ಜಾತ್ರಾ ಮಹೋತ್ಸವ ಕಾರ್ಯಕ್ರಮವು ಇದೇ ಜ.02 ರಿಂದ ಆರಂಭಗೊಂಡಿದ್ದು ಜ.07 ರವರೆಗೆ ಜರುಗಲಿದೆ. ಜ.02ರಂದು ದರ್ಗಾಕ್ಕೆ ಸುಣ್ಣ ಏರುವುದು. ಜ.03 ರಂದು ರಾತ್ರಿ 11.00
.00ಗಂಟೆಯಿಂದ ಮೂಕಿಹಾಳದ ಬುಡ್ಡಾಸಾಹೇಬ ಬಾಬುಪಟೇಲ ಬಿರಾದಾರ(ಕುದರಿ ಗೌಡ) ಅವರಿಂದ ಕುದುರೆ ಕುಣಿತದೊಂದಿಗೆ ಗಂಧ ಹೊರಟು ಮುಂಜಾನೆ 5.00 ಗಂಟೆಗೆ ದರ್ಗಾಕ್ಕೆ ತಲುಪುವುದು. ರಾತ್ರಿ 9.30 ಕ್ಕೆ ರಿವಾಯತ ಪದಗಳು, ಜ. 04 ಮತ್ತು 05 ರಂದು ಪುರುಷರ ಕಬಡ್ಡಿ ಪಂಧ್ಯಾವಳಿ ಜರುಗಲಿದ್ದು ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಉದ್ಘಾಟಿಸುವರು. ಪ್ರಥಮ ಹ್ಘ್ಧಿ.50100, ದ್ವಿತೀಯ-ರೂ.30100, ತೃತೀಯ-ರೂ.20100, ಚಥುರ್ಥ-ರೂ.10100, ಬಹುಮಾನ ನೀಡಲಾಗುವುದು ವಿವರಕ್ಕೆ 9164928699, 9113862775, 7090515345, 6362986233 ಸಂಪರ್ಕಿಸುವುದುಜ. 04 ರಂದು ಉರುಸು, ಸಾಯಂಕಾಲ 6.00 ಗಂಟೆಗೆ 31ನೆಯ ವರ್ಷದ ಮಾನವ ಏಕತಾ ಶಾಂತಿ ಸಮಾವೇಶ : ರಾತ್ರಿ 9.30 ಕ್ಕೆ ವೀರೇಶ್ವರ ನಾಟ್ಯ ಸಂಘ ನಾಲತವಾಡ ಅವರಿಂದ ‘ಮಗ ಹೋದರೂ ಮಾಂಗಲ್ಯ ಬೇಕು’ ನಾಟಕ ಅಭಿನಯಿಸುವರು.
ಜ.05ರಂದು ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ: ವಿಜಯಪುರ ನಗರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಡಾ.ಪ್ರಭುಗೌಡ ಬಿ.ಎಲ್.(ಚಬನೂರ) ಹಾಗೂ ಇತರ ತಜ್ಞ ನೇತ್ರವೈದ್ಯರು ಭಾಗವಹಿಸುವರು. ರಾತ್ರಿ 09.30ಕ್ಕೆ ಕೊತಬಾಳ ಅರುಣೋದಯ ಜಾನಪದ ಕಲಾ ತಂಡದಿಂದ ಜಾನಪದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರುಗುವುದು. ಜ.06ರಂದು ಮಧ್ಯಾಹ್ನ 3.00 ಗಂಟೆಗೆ ಟಗರಿನ ಕಾಳಗ ಜರುಗುವುದು. ಪ್ರಥಮ-ರೂ.11101, ದ್ವಿತೀಯ-ರೂ.5501, ತೃತೀಯ-ರೂ.2501 ರಾತ್ರಿ 09.30ಕ್ಕೆ ಜಮಖಂಡಿ ತಾಲ್ಲೂಕು ಬಂಡಿಗನೂರನ ಬಸವೇಶ್ವರ ನಾಟ್ಯ ಸಂಘದ ವತಿಯಿಂದ ‘ದೇಸಾಯರ ದರ್ಬಾರು’ ನಾಟಕ ಜರುಗುವುದು.ದನಗಳ ಜಾತ್ರೆ:ಜ.03ರಿಂದ ಜ.07ರವರೆಗೆ ದನಗಳ ಜಾತ್ರೆ ಜರುಗಲಿದ್ದು ಕೊನೆಯ ದಿನ ಜ.07 ರಂದು ಬಹುಮಾನ ವಿತರಣಾ ಸಮಾರಂಭ ಜರುಗುವುದು. ಎಂದು ಜಾತ್ರಾ ಸಮಿತಿಯ ಅಧ್ಯಕ್ಷ ಕೆ.ಎಚ್.ಪಾಟೀಲ ತಿಳಿಸಿದ್ದಾರೆ.