ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಕೊಪ್ಪಳ ಜಿಲ್ಲಾ ಅಧ್ಯಕ್ಷರಾಗಿ ಹನುಮಂತ ಹಳ್ಳಿಕೇರಿ ಆಯ್ಕೆ
ಕೊಪ್ಪಳ 11: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೊಪ್ಪಳ ಜಿಲ್ಲಾ ಘಟಕಕ್ಕೆ ನೂತನ ಅಧ್ಯಕ್ಷರಾಗಿ ಹನುಮಂತ ಹಳ್ಳಿಕೇರಿ ಅವರು ಆಯ್ಕೆಗೊಂಡಿದ್ದಾರೆ. ಸಂಘದ ಜಿಲ್ಲಾಧ್ಯಕ್ಷರಾಗಿದ್ದ ಬಸವರಾಜ್ ಗುಡ್ಲಾನೂರ್ ರವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಸಂಘದ ಜಿಲ್ಲಾ ಕೇಂದ್ರ ಸ್ಥಾನ ದ ಉಪಾಧ್ಯಕ್ಷರಾಗಿದ್ದ ಹನುಮಂತ್ ಹಳ್ಳಿಕೇರಿ ಅವರು ಸಂಘದ ನೇಮಾವಳಿ ಪ್ರಕಾರ ಅಧ್ಯಕ್ಷರಾಗಿ ಆಯ್ಕೆಗೊಂಡರು. ಶುಕ್ರವಾರ ಬೆಳಿಗ್ಗೆ ಇಲ್ಲಿನ ಪತ್ರಿಕಾ ಭವನದಲ್ಲಿ ಜರುಗಿದ ಜಿಲ್ಲಾ ಕಾರ್ಯಕಾರಿ ಸದಸ್ಯರ ತುರ್ತು ಸಭೆ ಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾಗಿರುವ ವೈ ನಾಗರಾಜರವರು ವಿಷಯ ಮಂಡಿಸಿದಾಗ ಸಂಘದ ಜಿಲ್ಲಾ ಖಜಾಂಚಿ ಆಗಿರುವ ರಾಜು ಬಿಆರ್ ರವರು ತೆರುವುಗೊಂಡ ಅಧ್ಯಕ್ಷ ಸ್ಥಾನಕ್ಕೆ ಹನುಮಂತ ಹಳ್ಳಿಕೇರಿ ಅವರ ಹೆಸರು ಸೂಚಿಸಿದಾಗ ಸಂಘದ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯರಾದ ಎಂ ಸಾಧಿಕ ಅಲ್ಲಿ ಯವರು ಅನುಮೋದಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಇತರ ಪದಾಧಿಕಾರಿಗಳು ಮತ್ತು ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರು ಇದಕ್ಕೆ ಸರ್ವಾನು ಮತದ ಒಪ್ಪಿಗೆ ಸೂಚಿಸಿದರು, ನಂತರ ನೂತನ ಜಿಲ್ಲಾಧ್ಯಕ್ಷ ಹನುಮಂತ ಹಳ್ಳಿಕೇರಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ತುಮಕೂರು ನಲ್ಲಿ ನಡೆಯಲಿರುವ ರಾಜ್ಯ ಸಮ್ಮೇಳನ ದಲ್ಲಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರೆಲ್ಲರೂ ಪಾಲ್ಗೊಳ್ಳುವ ಬಗ್ಗೆ ಚರ್ಚಿಸಿ ನಿರ್ಣಯಿಸಲಾಯಿತು, ಸಂಘದ ಪತ್ರಿಕಾ ಭಗವಾನ್ ಕಟ್ಟಡ ಸೇರಿದಂತೆ ಇತರ ಅಭಿವೃದ್ಧಿ ಪರ ಎಲ್ಲಾ ಕೆಲಸಗಳನ್ನು ಕೂಡಲೇ ಕೈಗೊಂಡು ಪೂರ್ಣಗೊಳಿಸಲು ಚರ್ಚೆ ನಡೆಯಿತು.
ಸಭೆಯಲ್ಲಿ ನಿಕಟ ಪೂರ್ವ ಅಧ್ಯಕ್ಷ ಬಸವರಾಜ್ ಗುಡ್ಲಾನೂರ್, ರಾಜ್ಯ ಕಾರ್ಯಕಾರಣಿ ವಿಶೇಷ ಆಹ್ವಾನಿತ ಸದಸ್ಯ ಎಚ್‌ಎಸ್ ಹರೀಶ್, ರಾಷ್ಟ್ರೀಯ ಮಂಡಳಿ ಸದಸ್ಯ ಜಿಎಸ್ ಗೋನಾಳ ಗ್ರಾಮೀಣ ಉಪಾಧ್ಯಕ್ಷರಾದ ವೆಂಕಟೇಶ್ ಕುಲಕರ್ಣಿ, ಆರ್ ಬಿ ಪಾಟೀಲ್ ಪತ್ರಿಕಾ ಭವನ್ ಕನ್ನಡ ಸಮಿತಿ ಅಧ್ಯಕ್ಷ ಎನ್‌ಎಂ ದೊಡ್ಡಮನಿ, ಜಿಲ್ಲಾ ಕಾರ್ಯದರ್ಶಿಗಳಾದ ವೀರಣ್ಣ ಕಳ್ಳಿಮನಿ ಮಂಜುನಾಥ್ ಅಂಗಡಿ ಸೇರಿದಂತೆ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಮಂಜುನಾಥ್ ಕೋಳೂರು ಚಂದ್ರು ಮರಕುಂಪಿ ವಿಶ್ವನಾಥ್ ಬಳಗಲ ಮಠ, ಶಿವಪ್ಪ ನಾಯಕ್, ಮಂಜುನಾಥ್ ಕುಕನೂರ್ ,ತಾಲೂಕ ಅಧ್ಯಕ್ಷ ನಾಗರಾಜು ಇಂಗಳಗಿ, ಕುಕನೂರು ತಾಲೂಕ ಅಧ್ಯಕ್ಷ ನಾಗರಾಜ್ ಬೆಣಕಲ್ ಕುಷ್ಟಗಿ ತಾಲೂಕ ಅಧ್ಯಕ್ಷ ವೆಂಕಟೇಶ್ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಬಸವರಾಜ್ ಪಲ್ಲೆದ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು ನಂತರ ವಿವಿಧ ತಾಲೂಕ ಘಟಕದ ಪದಾಧಿಕಾರಿಗಳಿಂದ ಮತ್ತು ಜಿಲ್ಲಾ ಪದಾಧಿಕಾರಿಗಳಿಂದ ನೂತನ ಅಧ್ಯಕ್ಷ ಹನುಮಂತ ಹಳ್ಳಿಕೇರಿ ಅವರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.