ವಿಶ್ವ ಹಿಂದೂ ಪರಿಷತ್ ಭಜರಂಗದಳದಿಂದ ಹನುಮಾನ ಮಾಲಾ ಮಹಾಪೂಜೆ
ಮುಂಡಗೋಡ 14 : ಪಟ್ಟಣದ ಕಾಳಗನಕೊಪ್ಪ ರಸ್ತೆಯ ಟಿಂಬರ್ ಡಿಪೊ ಸನಿಹದಲ್ಲಿ ಇರುವ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಶ್ರೀ ಹನುಮಾನ ಮಾಲಾ ಕಾರ್ಯಕ್ರಮದ ಪ್ರಯುಕ್ತ ವಿಶ್ವ ಹಿಂದೂ ಪರಿಷತ್ ಭಜರಂಗದಳ ಆಶ್ರಯದಲ್ಲಿ ಹನುಮಾನ ಮಾಲಾ ಕಾರ್ಯಕ್ರಮದ ವಿಶೇಷ ಮಹಾಪೂಜೆ ಹಾಗೂ ಅನ್ನ ಸಂತರೆ್ಣ ನಡೆಯಿತು. ಈ ಸಂಧರ್ಭದಲ್ಲಿ ಬಜರಂಗದಳ ತಾಲೂಕ ಸಂಚಾಲಕ ಶಂಕರ ಲಮಾಣಿ, ವಿಶ್ವಹಿಂದೂ ಪರಿಷತ್ ತಾಲೂಕಾಧ್ಯಕ್ಷ ತಂಗಮ್ ಚಿನ್ನನ್, ತಾಲೂಕು ಕಾರ್ಯದರ್ಶಿ ಅಯ್ಯಪ್ಪ ಭಜಂತ್ರಿ, ಹಿಂದೂ ಜಾಗರಣ ವೇದಿಕೆ ತಾಲೂಕು ಸಂಚಾಲಕ ಪ್ರಕಾಶ ಬಡಿಗೇರ, ಸಹ ಸಂಚಾಲಕ ವಿಶ್ವನಾಥ ನಾಯರ್, ಪ.ಪಂಚಾಯತಿ ಸದಸ್ಯ ಶೇಖರ ಲಮಾಣಿ ಸೇರಿದಂತೆ ಹಿಂದೂಪರ ಸಂಘಟನೆ ಹಾಗೂ ಕಾರ್ಯಕರ್ತರು ಇದ್ದರು.