ಹೊನ್ನವ್ವ ಗಣಪತಿ ಯಲ್ಲೂರಕರ್ ರವರಿಗೆ ವಾತ್ಸಲ್ಯ ಮನೆ ಹಸ್ತಾಂತರ
ಬೆಳಗಾವಿ, 26; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಖಾಸಬಾಗ ಯೋಜನಾ ಕಚೇರಿಯ ಮಾಸ್ತಮಾರ್ಡಿ ವಲಯದ ಶಗನಮಟ್ಟಿ ಕಾರ್ಯಕ್ಷೇತ್ರ ದಲ್ಲಿ ಮಾಸಾಶನ ಫಲಾನುಭವಿ ಹೊನ್ನವ್ವ ಗಣಪತಿ ಯಲ್ಲೂರಕರ್ ಅವರ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮವನ್ನು ಧಾರವಾಡ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ನಿರ್ದೇಶಕರಾದ ದಯಾಶೀಲ ರವರು ಯೋಜನೆಯ ಮೂಲಕ ನಿರ್ಮಿಸಿ ಕೊಡಲಾದ ವಾತ್ಸಲ್ಯ ಮನೆಯನ್ನು ಹಸ್ತಾಂತರ ಮಾಡಿ ಮಾತನಾಡಿದರು.
ಸಮಾಜ ಬದಲಾವಣೆಯಾಗಬೇಕಾದರೆ ಬದುಕಿಗೆ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಮನೆಯು ಪ್ರಮುಖವಾಗಿದೆ. ಜೀವನ ನಡೆಸಲು ಅತಿ ಮುಖ್ಯವಾದದ್ದು ಸೂರು. ಧರ್ಮಸ್ಥಳದ ಪರಮ ಪೂಜ್ಯರು ಬಡವರಿಗೆ ವಾತ್ಸಲ್ಯ ಮನೆ ನಿರ್ಮಾಣ ಮಾಡಿ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಜನಕಲ್ಯಾಣ ಕಾರ್ಯ ಮಾಡುತ್ತಿದ್ದಾರೆ. ಈ ಮನೆಗೆ ವಾತ್ಸಲ್ಯ ಮನೆಯೆಂದು ನಾಮಕರಣ ಮಾಡಿ ಕಡಿಮೆ ಖರ್ಚಿನಲ್ಲಿ ಮನೆ ನಿರ್ಮಿಸಿಕೊಟ್ಟು ಬಡವರ ಬಾಳಲ್ಲಿ ಬೆಳಕಾಗಿದೆ. ಈ ಮಹತ್ಕಾರ್ಯಗಳನ್ನು ರಾಜ್ಯ ವ್ಯಾಪ್ತಿಯಲ್ಲಿ ಮಾಡುತ್ತಿದ್ದೇವೆ. ಗ್ರಾಮದ ಮಹಿಳೆಯರ ಸಬಲೀಕರಣಕ್ಕೆ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಯೋಜನೆಯ ಪಾತ್ರ ಬಹುದೊಡ್ಡದಾಗಿದೆ.
ಗ್ರಾಮದ ಹೆಣ್ಣು ಮಕ್ಕಳಿಗೆ ಯಾವುದೇ ಅಡಮಾನಗಳಿಲ್ಲದೆ ಒಂದು ಲಕ್ಷ ರೂಪಾಯಿ ವರೆಗೂ ಸಾಲ ಸಿಗುತ್ತಿದ್ದು ಕುಟುಂಬ ಅಭಿವೃದ್ಧಿಗಾಗಿ ಗ್ರಾಮಸ್ಥರ ಸ್ವಾವಲಂಬನೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಬಹುದೊಡ್ಡ ಸಹಕಾರಿಯಾಗಿದೆ ಎಂದರು. ಪೂಜ್ಯ ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದಲ್ಲಿದ್ದು ಕೂಡ ರಾಜ್ಯದ ಗಡಿಭಾಗದಲ್ಲಿರುವ ಪ್ರತಿ ಗ್ರಾಮಕ್ಕೂ ಕೂಡ ಅಭಿವೃದ್ಧಿಯ ಆಶಾ ಭಾವನೆ ತಲುಪಿದ್ದು ಅವರ ಸವಾಂರ್ಗಿಣ ಅಭಿವೃದ್ಧಿಯ ಹಲವು ಕೈಂಕರ್ಯಗಳು ನಾಡಿನ ಕಲ್ಯಾಣಕ್ಕೆ ಸಾಕ್ಷಿಯಾಗಿವೆ. ಇಳಿ ವಯಸ್ಸಿನಲ್ಲಿ ಕುಟುಂಬಕ್ಕೆ ನೆಮ್ಮದಿ ಆಗಬೇಕಾದ ಸೂರನ್ನು ನಿರ್ಮಿಸುವುದು ಅತ್ಯ ಗತ್ಯವಾಗಿದ್ದು ಯೋಜನೆಯಿಂದ ನೆರವು ಪಡೆದುಕೊಂಡ ಫಲಾನುಭವಿ ನಿಜಕ್ಕೂ ಧನ್ಯಳು. ಈ ಕಾರ್ಯಕ್ರಮವು ಅಸಹಾಯಕರಿಗೆ, ನಿರ್ಗತಿಕರಿಗೆ ಸೂರು ಒದಗಿಸುವ ಕಾರ್ಯಕ್ರಮವಾಗಿದೆ.ಬಸ್ ಸ್ಟ್ಯಾಂಡ್, ದೇವಸ್ಥಾನ ಗಳಲ್ಲಿ ಮಲಗುವ ಮಾಶಾಸನ ಫಲಾನುಭವಿಗಳಿಗೆ ಮನೆಯನ್ನು ನಿರ್ಮಿಸಿ ಕೊಡುವ ವಿನೂತನ ಯೋಜನೆಯಾಗಿದೆ ಎಂದು ಮಾತನಾಡಿದರು.
ಈ ಕಾರ್ಯಕ್ರಮದಲಿ ವಿಶ್ವನಾಥ್ ಕಿಳ್ಳಿ ಕೇತಾರ್ ಸದಸ್ಯರು ಗ್ರಾಮ ಪಂಚಾಯಿತಿ ಮಾಸ್ತಮಾರ್ಡಿ,ಬೆಳಗಾವಿ ಜಿಲ್ಲಾ ನಿರ್ದೇಶಕರಾದ ಸತೀಶ್ ನಾಯ್ಕ, ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಬಸವರಾಜ್ ಸೊಪ್ಪಿಮಠ, ಜಿ ಆರ್ ಸೋನೇರ್ ವಕೀಲರು, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ವಿರುಪಾಕ್ಷಿ ಇಟಗಿ, ಊರಿನ ಗಣ್ಯರಾದ ಮಹಾವೀರ ಪಾಟೀಲ ಹಾಗೂ ಪಾರಿಸ ಪಾಟೀಲ, ಒಕ್ಕೂಟದ ಅಧ್ಯಕ್ಷರಾದ ಅನಿತಾ, ಅಶ್ವಿನಿ, ಬಸವನ ಗೌಡ ಪಾಟೀಲ ರವರು ಉಪಸ್ಥಿತರಿದ್ದರು.
ತಾಲೂಕಿನ ಯೋಜನಾಧಿಕಾರಿಗಳಾದ ಸುಭಾಷ್ ಪಿಸಿ ಸ್ವಾಗತಿಸಿದರು. ಪ್ರಾದೇಶಿಕ ಕಚೇರಿಯ ಜ್ಞಾನವಿಕಾಸ ಯೋಜನಾಧಿಕಾರಿಗಳಾದ ಮಲ್ಲಿಕಾ, ಜ್ಞಾನವಿಕಾಸ ಸಮನ್ವಯಾಧಿಕಾರಿ ಮೀನಾರಾಣಿ, ವಲಯದ ಮೇಲ್ವಿಚಾರಕರಾದ ಪರಮೇಶ್ವರ್, ಸೇವಾಪ್ರತಿನಿಧಿಗಳಾದ ಭಾರತಿ, ನಾಗವ್ವ ಸಂಘದ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.