ಲೋಕದರ್ಶನವರದಿ
ಬ್ಯಾಡಗಿ04: ಪಾಲಕರು ಮಾಡಿದ ತಪ್ಪಿಗೆ ಅವರ ಮಕ್ಕಳು ಎಚ್ಐವಿ ಸೋಂಕಿತರಾಗಿದ್ದಾರೆ, ತಮ್ಮದಲ್ಲದ ತಪ್ಪಿಗೆ ಚಿಕ್ಕವಯಸಿನಲ್ಲೇ ಮಕ್ಕಳು ಬದುಕು ಕತ್ತಲೆಯಂತಾಗಿದ್ದು ಜೀವನವಿಡಿ ಅನುಭವಿಸಬೇಕಾಗಿದೆ, ಇದೊಂದು ಆಂತರಿಕ ದೌರ್ಜನ್ಯದ ಪ್ರತಿರೂಪವಾಗಿದೆ ಎಂದು ಫಾದರ್ ಫಾಲಿಕ್ಸ್ ಪಿಂಟೋ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಸ್ನೇಹ ಸದನ ಸಮಗ್ರ ಸಮಾಜಕಾರ್ಯ ನಿರ್ವಹಣಾ ಕೇಂದ್ರದಲ್ಲಿ ಹಾವೇರಿ ರಕ್ಷಿತಾ ನೆಟವರ್ಕ ಆಫ್ ಪಾಸಿಟಿವ್ ಪೀಪಲ್ ಸಂಸ್ಥೆ ಇವರ ಸಹಯೋಗದೊಂದಿಗೆ ಹೆಚ್ಐವಿ (ಏಡ್ಸ್) ಸೋಂಕಿತ ಮಕ್ಕಳಿಗೆ ಆಯೋಜಿಸಿದ್ದ 3 ದಿನಗಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸರ್ವರಲ್ಲಿಯೂ ಕಾಣಿಸಿಕೊಳ್ಳುತ್ತಿರುವ ಮಧುಮೇಹ, ರಕ್ತದೊತ್ತಡ, ಇನ್ನಿತರ ರೋಗಗಳಿಗೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳದೇ ಅಥವಾ ಅವುಗಳ ನಿಗಾವಹಿಸದೇ ಇರುವುದರಿಂದ ಅವರಿಗೆ ಜನಿಸಿದ ಮಕ್ಕಳಲ್ಲಿ ರೋಗಗಳು ಕಾಣಿಸಿಕೊಳ್ಳುತ್ತಿವೆ, ಅದೇ ಮಾದರಿಯಲ್ಲಿ ಲೈಂಗಿಕ ತೃಷೆಗಾಗಿ ತಪ್ಪು ಮಾಡಿದ ಪಾಲಕರಿಂದ ಅವರ ಮಕ್ಕಳು ಜೀವನವಿಡೀ ಆರೋಗ್ಯದ ಸಮಸ್ಯೆಯಲ್ಲಿ ಬಳಲುವಂತಾಗಿರುವುದು ಖೇದಕರ ಸಂಗತಿ ಎಂದರು.
ಮಕ್ಕಳು ಭೂಮಿಯ ಆಸ್ತಿ: ಮಕ್ಕಳು ಈ ಭೂಮಿಯ ಬಹುದೊಡ್ಡ ಆಸ್ತಿ ಅವರು ಆರೋಗ್ಯವಾಗಿ ಬದುಕಿದ್ದರೇ ಮಾತ್ರ ಕುಟುಂಬ ಸಮಾಜ, ದೇಶವನ್ನು ನಿರ್ವಹಣೆ ಮಾಡಲು ಸಾಧ್ಯ, ಆದರೆ ಮಕ್ಕಳು ಮತ್ತು ವಯೋವೃದ್ದರಿಗೆ ಆರೋಗ್ಯವನ್ನು ಕಾಪಾಡಿಕೊಳ್ಳುವಂತಹ ಯಾವುದೇ ಮಾಹಿತಿ ಕ್ರಮಗಳನ್ನು ಮನೆ, ಶಾಲೆ, ಸಮಾಜ ಶಿಕ್ಷಕರಿಂದಲೂ ಸಿಗದಿದ್ದರೇ ಏಡ್ಸ್ನಂತಹ ರೋಗಗಳು ಇನ್ನಷ್ಟು ಹೆಚ್ಚಾಗಬಹುದು ಪ್ರತಿಯೊಬ್ಬ ಪಾಲಕರು ಮಕ್ಕಳ ಭವಿಷ್ಯದ ದೃಷ್ಟಿಯಿಂದ ತಮ್ಮ ಆರೋಗ್ಯದ ಬಗ್ಗೆ ತೀವ್ರ ನಿಗಾ ವಹಿಸುವಂತೆ ಮನವಿ ಮಾಡಿದರು.
ಆರೋಗ್ಯವನ್ನಾಧರಿಸಿ ಅಂಕ ಕೊಡಿ: ತಾಲೂಕಾ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ರಾಜಶೇಖರ್ ಮಾತನಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಹಂತದಿಂದಲೇ ಆರೋಗ್ಯ ವಿಜ್ಞಾನ ಎಂಬ ವಿಷಯವನ್ನು ಪಠ್ಯಗಳಲ್ಲಿ ಸೇರ್ಪಡೆ ಮಾಡುವ ಮೂಲಕ ಮಕ್ಕಳ ದೈಹಿಕ ಪರೀಕ್ಷೆ ನಡೆಸಿ ಆರೋಗ್ಯದ ಆಧಾರದ ಮೇಲೆ ಅಂಕಗಳನ್ನು ನೀಡುವಂತಾಗಬೇಕು ಅಂದಾಗ ಮಾತ್ರ ಮುಂದಿನ ದಿನಗಳಲ್ಲಿ ಆರೋಗ್ಯವಂತ ಸಮಾಜ ಕಾಣಲು ಸಾಧ್ಯವೆಂದರು.
ವೈದ್ಯರ ಬಳಿ ಅಂಗಲಾಚುವುದನ್ನು ಬಿಡಿ:ಫಾದರ್ ಪ್ರಮೋದ ದಳಬಂಜನ್ ಮಾತನಾಡಿ, ದುಶ್ಚಟಗಳ ದಾಸರಾದಾಗ ತಿದ್ದಿಬುದ್ದಿ ಹೇಳಲಾಗದ ಬಹುತೇಕ ಪಾಲಕರು, ರೋಗಕ್ಕೆ ತುತ್ತಾಗಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುವ ಸಂದರ್ಭದಲ್ಲಿ 'ಹಣ ಖಚರ್ಾದರೂ ಪರವಾಗಿಲ್ಲ ನಮ್ಮ ಮಗನನ್ನು ಬದುಕಿಸಿಕೊಡಿ ಎಂದು ವೈದ್ಯರ ಬಳಿ ಅಂಗಲಾಚುವ ದೃಶ್ಯಗಳು ಸಾಮಾನ್ಯವಾಗಿವೆ, ಇನ್ನಾದರೂ ಪಾಲಕರು ಮಕ್ಕಳ ಆರೋಗ್ಯದ ಬಗ್ಗೆ ತೀವ್ರ ನಿಗಾವಹಿಸುವ ಮೂಲಕ ಆರೋಗ್ಯದ ಕಡೆಗೆ ಲಕ್ಷ್ಯ ನೀಡುವಂತೆ ಮನವಿ ಮಾಡಿದರು.
ಚಿತ್ರಮಂದಿರಗಳಾಗುತ್ತಿವೆ ಆಸ್ಪತ್ರೆಗಳು: ಜಿಲ್ಲಾ ಸಾರ್ವಜನಿಕ ಆಸ್ಪತ್ರೆ, ಕಾನೂನು ಸಲಹೆಗಾರರು ಹಾಗೂ ನ್ಯಾಯವಾದಿ ಎಸ್.ಸಿ.ಪಾಟೀಲ್ ಮಾತನಾಡಿ, ಸಮಾಜದಲ್ಲಿರುವ ಶೇ.40 ಕ್ಕೂ ಹೆಚ್ಚು ಜನರು ಒಂದಿಲ್ಲೊಂದು ರೋಗಗಳಿಂದ ಬಳಲುತ್ತಿದ್ದಾರೆ, ಆರೋಗ್ಯವನ್ನು ಕಾಪಾಡಿಕೊಳ್ಳುವಂತಹ ವೈಜ್ಞಾನಿಕ ಪದ್ಧತಿಯ ಅರಿವಿಲ್ಲದಿರುವುದೇ ಇದಕ್ಕೆ ಪ್ರಮುಖ ಕಾರಣ, ಈ ಹಿಂದೆ ಚಲನ ಚಿತ್ರಮಂದಿರಗಳಲ್ಲಿ ಜನರಿಂದ ನೂಕು ನುಗ್ಗಲಾಗುವುದನ್ನು ಕಾಣುತ್ತಿದ್ದೆವು, ಇತ್ತೀಚೆಗೆ ರೋಗಿಗಳಿಂದ ತುಂಬಿಕೊಂಡಿರುವ ಆಸ್ಪತ್ರೆಗಳಲ್ಲಿ ನೂಕು ನುಗ್ಗಲಾಗುತ್ತಿದೆ ಎಂದು ಮಾಮರ್ಿಕವಾಗಿ ಮಾತನಾಡಿದರು.
ಹಿರಿಯ ಆರೋಗ್ಯ ಸಹಾಯಕ ವೈ.ಮ್.ಹಿರಿಯಕ್ಕನವರ, ಹೋಲಿ ಕ್ರಾಸ್ ನರ್ಸರಿ ಮುಖ್ಯಶಿಕ್ಷಕಿ ಸಿಸ್ಟರ್ ಆಗ್ನೇಸ್ ಕ್ಲಾರ್, ಸಿಸ್ಟರ್ ಐರಿಸ್, ಮಂಜುನಾಥ, ಗ್ಲೋರಿಯಾ ತೆರೆಸಿಟಾ, ಸಿಸ್ಟರ್ ಮಾರಿಯಾ ತೆರೆಸಿಟಾ, ಪ್ರೇಮಾ, ಬಸವರಾಜ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಸ್ನೇಹ ಸದನ ಸಂಯೋಜಕರಾದ ಸುವರ್ಣ ಸ್ವಾಗತಿಸಿದರು, ಅರುಣ್ಕುಮಾರ ವಂದಿಸಿದರು.