ತಿರುಪತಿ, ಡಿ 24 - ವಿಶ್ವ ಪ್ರಸಿದ್ಧ ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಹಲವು ದಶಕಗಳಿಂದ ಪರಿಣಾಕಾರಿಯಾಗಿ ಮುಂದುವರಿಸಿಕೊಂಡು ಬರುತ್ತಿರುವ ವಿವಿಧ ಯೋಜನೆಗಳು, ಆಡಳಿತ, ಭದ್ರತೆ ಹಾಗೂ ಸಂಪ್ರದಾಯಗಳನ್ನು ಅಧ್ಯಯನ ನಡೆಸಲು ಕೇರಳದ ತ್ರಿಶ್ಯೂರಿನ ಗುರುವಾಯೂರಪ್ಪನ್ ದೇಗುಲ ಮಂಡಳಿ ತಂಡ ತೀವ್ರ ಆಸಕ್ತಿ ವಹಿಸಿದೆ.
ತ್ರಿಶ್ಯೂರ್ ದೇಗುಲ ಮಂಡಳಿಯ ಅಧ್ಯಕ್ಷ ಕೆ.ಬಿ. ಮೋಹನ್ ದಾಸ್ ನೇತೃತ್ವದ ಅಧ್ಯಯನ ತಂಡ ಮಂಗಳವಾರ ಟಿಟಿಡಿ ಜಂಟಿ ಕಾರ್ಯನಿರ್ವಾಹಕ ಅಧಿಕಾರಿ ಪಿ. ಬಸಂತ್ ಕುಮಾರ್ ಅವರನ್ನು, ತಿರುಪತಿ ತಿರುಮಲ ದೇವಾಸ್ಥನಂ ಆಡಳಿತ ಮಂಡಳಿ ಕಛೇರಿಯಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿತು.
ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಭಕ್ತಾದಿಗಳ ದರ್ಶನಕ್ಕಾಗಿ ಆಯೋಜಿಸಲಾಗಿರುವ ಕ್ಯೂ ವ್ಯವಸ್ಥೆ, ಅನ್ನ ಪ್ರಸಾದಂ, ಸ್ವಚ್ಚತೆ, ಭದ್ರತೆ, ಮಾಹಿತಿ ತಂತ್ರಜ್ಞಾನ ಹಾಗೂ ಹಣಕಾಸು ಆಡಳಿತ, ಧರ್ಮ ಪ್ರಚಾರ ಮತ್ತಿತರ ಯೋಜನೆಗಳ ಕುರಿತು ಪಿ. ಬಸಂತ್ ಕುಮಾರ್, ಕೇರಳದ ಗುರುವಾಯೂರಪ್ಪ ದೇಗಲ ಮಂಡಳಿ ನಿಯೋಗಕ್ಕೆ ಪವರ್ ಪಾಯಿಂಟ್ ಮೂಲಕ ವಿವರಿಸಿದರು.
ಈ ಸಂದರ್ಭದಲ್ಲಿ ಟಿಟಿಡಿ ವಿಶೇಷ ಆಹ್ವಾನಿತ ಗೋವಿಂದ್ ಹರಿ, ತ್ರಿಶ್ಯೂರಿನ ಡಾ. ರಾಮನಾಥನ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.