ಹಳೆಯ ವಿದ್ಯಾಥರ್ಿಗಳಿಂದ ಶಿಕ್ಷಕರಿಗೆ ಗುರುಗೌರವಾರ್ಪಣೆ ಶ್ಲಾಘನೀಯ: ಯತೀಶ್ವರನಾಂದಶ್ರೀ

ಕಾಗವಾಡ 14: ಅಂತರ-ರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ 12 ಪ್ರಶಸ್ತಿಗಳನ್ನು ಪಡೆದ ಶಿರಗುಪ್ಪಿ ಗ್ರಾಮ ಆದರ್ಶ ಗ್ರಾಮವಾಗಿದೆ. ಈ ಗ್ರಾಮದ ಯುವಕರು ಹಿರಿಯರಿಗೆ ಜನ್ಮ ನೀಡಿದ ತಾಯಿತಂದೆಯನ್ನು ಆದರ್ಶದಿಂದ ಕಾಣುತ್ತಾರೆ. ಅದರ ದ್ಯೋತಕವಾಗಿ ಸನ್ 1989 ರಿಂದ 1992, 30 ವರ್ಷಗಳ ಹಳೆಯ ಮಾಜಿ ವಿದ್ಯಾಥರ್ಿಗಳು ಅವರಿಗೆ ಬೋಧನೆ ಮಾಡಿರುವ ಶಿಕ್ಷಕರಿಗೆ "ಗುರುಗೌರವ" ಅಪರ್ಿಸಿ, ಸಿದ್ಧೇಶ್ವರ ಸ್ವಾಮೀಜಿಗಳ ಹೆಸರಿನಿಂದ ಪ್ರಾರಂಭಿಸಿದ ಈ ಶಿಕ್ಷಣ ಸಂಸ್ಥೆಗುರು ಕಾರುಣ್ಯವೇ ಸದಾಚಾರ ಎಂದಂತೆ ಆದರ್ಶ ಗ್ರಾಮದ ಮತ್ತೊಂದು ದಾಖಲೆ ನೀಡಿದ್ದಾರೆ ಎಂದು ಕಾಗವಾಡ ಗುರುದೇವಾಶ್ರಮದ ಯತೀಶ್ವರನಾಂದ ಸ್ವಾಮೀಜಿಗಳು ಹೇಳಿದರು.

ರವಿವಾರ ದಿ. 13ರಂದು ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ಸಿದ್ಧೇಶ್ವರ ಶಿಕ್ಷಣ ಸಂಸ್ಥೆಯ ಸನ್ 1989 ರಿಂದ 1992 ವರ್ಷದ ಮಾಜಿ ವಿದ್ಯಾಥರ್ಿಗಳು ತಮ್ಮ ಗುರುಗಳಿಗೆ, ಸ್ನೇಹಿತರಿಗೆ ಗುರು ಗೌರವ ಮತ್ತು ಸ್ನೇಹಿತರ ಸಮ್ಮೇಳನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಯತೀಶ್ವರಾನಂದ ಸ್ವಾಮೀಜಿ ಸಾನಿಧ್ಯ ವಹಿಸಿ ವಿಚಾರ ವ್ಯಕ್ತಪಡಿಸಿದರು. 

30 ವರ್ಷದ ಹಳೆಯ ನೆನಪು ಅದರಲ್ಲಿ ಶಿಕ್ಷಕರು ಬೋಧಿಸಿದ ಜ್ಞಾನದ ಭಂಡಾರ ತೆಗೆದುಕೊಂಡು ಜೀವನದಲ್ಲಿ ಸಾರ್ಥಕರಾಗಿದ್ದೇವೆ ಎಂದು ಮಾಜಿ ವಿದ್ಯಾಥರ್ಿಗಳು ತಮ್ಮ ಗುರುಗಳಿಗೆ ಸ್ವಾಮೀಜಿಗಳಿಂದ ಸನ್ಮಾನಿಸಿ, ವಂದನೆ ಅಪರ್ಿಸಿದರು.

ನಿವೃತ್ತ ಗುರುಗಳಾದ ಪಿ.ಎ.ಬಿಳ್ಳೂರ, ಡಿ.ಆರ್.ನಾಯಿಕ, ಎಸ್.ಐ.ಮಾಳಿ, ಎಂ.ಬಿ.ಕೊರಬು, ಆರ್.ಎನ್.ಚೌಗುಲೆ, ಎಂ.ಟಿ.ಬಡಿಗೇರ, ಎಸ್.ಎ.ಪಾಟೀಲ, ಎ.ಬಿ.ಶಹಾಪುರೆ, ಎ.ಬಿ.ಬೆಳಗಲಿ, ಎ.ಬಿ.ಹರೋಲಗೆ, ಪಿ.ಆರ್.ಗುಡ್ಡಡಗಿ, ಆರ್.ಎ.ಕುಂಬಾರ, ಆರ್.ಬಿ.ಪಾಟೀಲ, ಎಂ.ಜಿ.ಮಡಿವಾಳ, ಬಿ.ಆರ್.ತಾರದಾಳೆ, ಟಿ.ಎಲ್.ಬೇನಾಡೆ, ಶಿಕ್ಷಣ ಸಂಸ್ಥೆಯ ಹಾಲಿ ಮುಖ್ಯಾಧ್ಯಾಪಕ ಎಸ್.ಬಿ.ಬುವಾ ದಂಪತಿಗಳ ಸಮೇತ ಸ್ವಾಮೀಜಿಗಳಿಂದ ಉಡುಗರೆ ನೀಡಿ, ಸನ್ಮಾನಿಸಿ ಅವರಿಗೆ ಸಿಹಿ ಭೋಜನ ನೀಡುವದೊಂದಿಗೆ ಅವರ ಆರೋಗ್ಯದ ವಿಚಾರಣೆ ಮಾಡಿದ ಆದರ್ಶ ವಿದ್ಯಾಥರ್ಿಗಳು ಶಿರಗುಪ್ಪಿ ಗ್ರಾಮದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 

ಅಧ್ಯಕ್ಷತೆ ಖ್ಯಾತ ವೈದ್ಯರಾದ ಡಾ. ಬಿ.ಎ.ಪಾಟೀಲ ವಹಿಸಿದರು. ಮುಖ್ಯ ಅತಿಥಿಗಳಾಗಿ ಆದರ್ಶ ಗುರುಗಳಾದ ಕೆ.ಎಸ್.ಗುರವ್, ಸಂಸ್ಥೆಯ ಆಧ್ಯಕ್ಷ ಸಾತಗೌಡಾ ಪಾಟೀಲ, ಶಿರಗುಪ್ಪಿ ಗ್ರಾಪಂ ಅಧ್ಯಕ್ಷ ಇಕಬಾಲ ಕನವಾಡೆ, ಉಪಾಧ್ಯಕ್ಷೆ ಸುನಂದಾ ನಾಂದಣಿ, ನಿದರ್ೇಶಕರಾದ ಐ.ಎ.ಪಾಟೀಲ, ಆರ್.ಎಸ್.ಪಾಟೀಲ, ಸುಭಾಷ ಪಾಟೀಲ, ರಾಜು ಕಾಟಕರ, ಶಿವಾನಂದ ಪಾಟೀಲ, ಸಹಿತ ಅನೇಕ ಗಣ್ಯರು ಪಾಲ್ಗೊಂಡಿದ್ದರು.

ಆಗಿನ ಆದರ್ಶ ವಿದ್ಯಾಥರ್ಿಗಳಾದ ಡಾ. ವಿರೇಶ ಬಡಿಗೇರ, ಶೀತಲ ಚೌಗುಲೆ, ಸುನೀಲ ಸುಳಕುಡೆ, ಪೋಪಟ ಪಾಟೀಲ, ಬಿ.ಕೆ.ತಳವಾರ, ಅಣ್ಣಾಸಾಹೇಬ ಪಾಟೀಲ, ಸುಭಾಷ ನಿಜವನಕರ, ಸೇರಿದಂತೆ ವಿದ್ಯಾಥರ್ಿ ಮಿತ್ರರು ಕಾರ್ಯಕ್ರಮ ಯಶಸ್ವಿಗೊಳಿಸಿದರು.