ಲೋಕದರ್ಶನ ವರದಿ
ಬ್ಯಾಡಗಿ27: ಪಟ್ಟಣದ ಸಾಯಿಬಾಬಾ ಮಂದಿರಕ್ಕೆ ಶುಕ್ರವಾರ ಜನಸಾಗರವೇ ಹರಿದು ಬಂದಿತು, ಗುರು ಪೌಣರ್ಿಮೆ ನಿಮಿತ್ಯ ಬಾಬಾರ ದರ್ಶನ ಪಡೆದ ಸಾವಿರಾರು ಸಂಖ್ಯೆಯ ಭಕ್ತರು ಪುನೀತರಾದರು.
ಗುರು ಪೌಣರ್ಿಮೆಯಾದ್ದರಿಂದ ಪ್ರತಿಯೊಬ್ಬರು ತಮ್ಮ ನೆಚ್ಚಿನ ಗುರುಗಳನ್ನು ನೆನೆಯುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ, ಅಂತೆಯೇ ಪಟ್ಟಣದ ಗುರು ಸಾಯಿಬಾಬಾರ ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿ ದರ್ಶನ ಪಡೆದುಕೊಂಡರು.
ಬೆಳಿಗ್ಗೆಯಿಂದಲೇ ಜನರು:ಗುರುಪೌಣರ್ಿಮೆ ಅಂಗವಾಗಿ ಸಾಯಿಬಾಬಾ ಮೂತರ್ಿಗೆ ಅಭಿಷೇಕವನ್ನು ಹಮ್ಮಿಕೊಳ್ಳಲಾಗಿತ್ತು ಸುಮಾರು 250ಕ್ಕೂ ಹೆಚ್ಚು ಕುಟುಂಬಗಳು ಅಭಿಷೇಕ ಕಾರ್ಯಕ್ರಮದಲ್ಲಿ ದಂಪತಿಗಳೊಂದಿಗೆ ಪಾಲ್ಗೊಂಡಿದ್ದರು, ಸುಮಾರು 2 ತಾಸುಗಳಿಗೂ ಹೆಚ್ಚು ಕಾಲ ನಡೆದ ಕಾರ್ಯಕ್ರಮದಲ್ಲಿ ವಿವಿಧ ಮಂತ್ರ ವೇದಘೋಷಗಳು ಮೊಳಗಿದವು..
ಸಾವಿರಾರು ಜನರು ಸರತಿಯಲ್ಲಿ: ಪಟ್ಟಣ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಸಂಖ್ಯೆಯ ಜನರು ದರ್ಶನ ಪಡೆಯಲು ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಒಬ್ಬೊಬ್ಬರಾಗಿ ದರ್ಶನ ಪಡೆದರು. ಸುಮಾರು 200 ಮೀಟರ್ ಹೆಚ್ಚು ದೂರದಷ್ಟು ಜನರು ಸರತಿಯಲ್ಲಿ ನಿಂತಿದ್ದರು.
ಸತ್ಯನಾರಾಯಣ ಪೂಜೆ: ದೇವಾಲಯದ ಬಲಭಾಗದಲ್ಲಿ ಸತ್ಯನಾರಾಯಣ ಪೂಜೆಯನ್ನು ಆಯೋಜಿಸಾಗಿದ್ದು ಆಗಮಿಸಿದ್ದ ಸಾವಿರಾರು ಸಂಖ್ಯೆಯ ಮಹಿಳೆಯರು ಆರತಿ ಬೆಳಗುವ ಮೂಲಕ ಸತ್ಯನಾರಾಯಣ ಪೂಜೆಯ ಸೇವೆಯಲ್ಲಿ ಪಾಲ್ಗೊಂಡಿದ್ದ ದೃಶ್ಯಗಳು ಕಂಡು ಬಂದವು..
ಗೋಧಿ ಹುಗ್ಗಿ ಸವಿದ ಭಕ್ತರು:ದರ್ಶನಕ್ಕೆ ಆಗಮಿಸಿದ್ದ ಭಕ್ತರಿಗಾಗಿ ಸಂಘಟಿಕರು ಸ್ವಾದಿಷ್ಟವಾದ ಪ್ರಸಾದ ಸೇವೆಯನ್ನು ಆಯೋಜಿಸಿದ್ದರು, ಆಗಮಿಸಿದ್ದ ಎಲ್ಲ ಭಕ್ತರಿಗೆ ಸ್ವಾದಿಷ್ಟವಾದ ಗೋಧಿಹುಗ್ಗಿ, ಮುಳಗಾಯಿ ಪಲ್ಯ ಸೇರಿದಂತೆ ಅನ್ನ ಸಾಂಬಾರು ಕುಡಿಯಲು ಮಿನರಲ್ ವಾಟರ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.