ಜಿಎಚ್‌ಪಿಎಸ್ ಶಾಲೆಗೆ ಗ್ರೈಂಡರ್ ಮತ್ತು ಇಡ್ಲಿ ಕುಕ್ಕರ್ ತಂಬ್ರಳ್ಳಿ ದೇವಣಿಗೆ
ಕೊಪ್ಪಳ 24: ಜಿ ಹೆಚ್ ಪಿ ಎಸ್ ಶಾಲೆಗೆ ತಮ್ಮ ವೈಯಕ್ತಿಕ ಹಣಕಾಸಿನ ನೆರವಿನಿಂದ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ ಅವರು ವಿದ್ಯಾರ್ಥಿಗಳ ಅನ್ನ ದಾಸೋಹ ಕಾರ್ಯಕ್ಕೆ ಅನುಕೂಲವಾಗಲು ಮತ್ತು ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಿಸಿ ಊಟ ದೊರೆಯಲು ಮತ್ತು ವಿದ್ಯಾರ್ಥಿಗಳು ಉತ್ತಮ ಅಭ್ಯಾಸ ಮಾಡಿ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಗ್ರೈಂಡರ್ ಮಷೀನ್ ಹಾಗೂ ಕ್ಲಬ್ಬಿನ ಹಣಕಾಸಿನ ನೆರವಿನಿಂದ ಇಡ್ಲಿ ಕುಕ್ಕರ್ ಎರಡು ಸಾಮಾಗ್ರಿಯ ಒಟ್ಟು 15000 ರೂ. ವೆಚ್ಚದಲ್ಲಿ ಗ್ರೈಂಡರ್ ಮತ್ತು ಕುಕ್ಕರ್‌ನ್ನು ದೇವಣಿಗೆಯಾಗಿ ನೀಡಿದ್ದಾರೆ. ಇದನ್ನು ಇನ್ನರ್ ವೀಲ್ ಕ್ಲಬ್ಬಿನ ಜಿಲ್ಲಾ ಚೇರ್ಮನ್‌ರಾದ ಸುಷ್ಮಾ ಪತಂಗೆ ಕ್ಲಬ್ ಪರವಾಗಿ ಶಾಲೆಗೆ ವಿತರಣೆ ಮಾಡಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಕ್ಲಬ್ಬಿನ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ, ಉಪಾಧ್ಯಕ್ಷರಾದ ಮಧು ಶೆಟ್ಟರ್ ,ಕಾರ್ಯದರ್ಶಿ ಮೀನಾಕ್ಷಿ ಬಣ್ಣದ ಬಾವಿ ,ಖಜಾಂಚಿ ಆಶಾ ಕವಲೂರ್, ಎಡಿಟರ್ ನಾಗವೇಣಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ, ರಾಧಾ ಕುಲಕರ್ಣಿ ಮತ್ತು ಸುಜಾತ ಪಟ್ಟಣಶೆಟ್ಟಿ ಸೇರಿದಂತೆ ಮಹಿಳೆಯರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಅಲ್ಲದೆ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.