ಮಹಾಮನೆ ಕಾರ್ಯಕ್ರಮ ವಚನ ಸಾಹಿತ್ಯದಲ್ಲಿ ಮೌಲ್ಯಗಳು ಕುರಿತು ವಿಶೇಷ ಉಪನ್ಯಾಸ

ಲೋಕದರ್ಶನ ವರದಿ

ಕಂಪ್ಲಿ 1:ನಗರದ ಓದ್ಸೋ ಜಡೆಮ್ಮ ಗುರುಸಿದ್ದಯ್ಯನವರ ಪ್ರೌಢಶಾಲೆ ಆವರಣದಲ್ಲಿ ಸೋಮವಾರ ಕಂಪ್ಲಿ ಶರಣ ಸಾಹಿತ್ಯ ಪರಿಷತ್ತು ಕಂಪ್ಲಿ ತಾಲೂಕು ಘಟಕ ಮಹಾಮನೆ ಕಾರ್ಯಕ್ರಮ ಜರುಗಿತು. 

ರಾಮಸಾಗರದ ಸಕರ್ಾರಿ ಪ್ರೌಢಶಾಲೆ ಮುಖ್ಯಗುರು ಡಾ.ಅಕ್ಕಮಹಾದೇವಿ 'ವಚನ ಸಾಹಿತ್ಯದಲ್ಲಿ ಮೌಲ್ಯಗಳು' ಕುರಿತು ವಿಶೇಷ ಉಪನ್ಯಾಸ ನೀಡಿ, ಜೀವನದಲ್ಲಿ ಮೌಲ್ಯಗಳು ಮುಖ್ಯ. ವರ್ಗ, ವರ್ಣರಹಿತ ಸಮಾಜ ನಿಮರ್ಿಸುವಲ್ಲಿ ಶರಣರು ಪ್ರಮುಖ ಪಾತ್ರವಹಿಸಿದ್ದಾರೆ. ಸ್ತ್ರೀಯರಿಗೆ ಸಮಾಜದಲ್ಲಿ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಶರಣರು ಶ್ರಮಿಸಿದ್ದಲ್ಲದೆ, ಆಥರ್ಿಕ ಸಮಾನತೆಗೆ ಕಾಯಕ, ದಾಸೋಹಗಳನ್ನು ಶಿವಶರಣರು ಪರಿಚಯಿಸಿದರು. ಕೇವಲ ಹೆಚ್ಚು ಅಂಕಗಳಿಕೆಗೆ ಆಧ್ಯತೆ ನೀಡದೆ ಶಿಕ್ಷಣದ ಅಂತರಾರ್ಥವನ್ನು ಮನನ ಮಾಡಿಕೊಳ್ಳುವ ಅಗತ್ಯತೆ ಇದೆ ಎಂದು ಹೇಳಿದರು. 

ಎಪಿಎಂಸಿ ನಾಮನಿದರ್ೇಶನ ಸದಸ್ಯ ಎಸ್.ಎಂ.ನಾಗರಾಜ ಮಾತನಾಡಿ, ವಚನಗಳನ್ನು ನಿತ್ಯ ಓದುವ ಹಾಗೂ ಕಂಠಪಾಠ ಮೂಲಕ ವಚನ ಸಂಪತ್ತನ್ನು ಗ್ರಹಿಸಿ, ಪೋಷಿಸಬೇಕು. ವಚನಗಳಲ್ಲಿನ ಮೌಲ್ಯಗಳನ್ನು ಸ್ವತಹ ಅರಿವಿಗೆ ತಂದುಕೊಂಡಾಗ ಬಾಳಿನಲ್ಲಿ ಬೆಳಕು ಮೂಡಲು ಸಾಧ್ಯ ಎಂದು ಹೇಳಿದರು. 

ವೀರಶೈವ ಸಂಘದ ಪದಾಧಿಕಾರಿ ಕೆ.ಎಂ.ವಾಗೀಶ್, ನಿದರ್ೇಶಕ ಎಸ್.ಡಿ.ಬಸವರಾಜ್, ಸಹ ಕಾರ್ಯದಶರ್ಿ ಕಾಮಗಂಡಿ ವಿರುಪಾಕ್ಷಪ್ಪ ಮಾತನಾಡಿದರು. ಚೈತ್ರಾ ತಂಡದವರು ಪ್ರಾಥರ್ಿಸಿದರು, ಓದ್ಸೋ ಜಡೆಮ್ಮ ಗುರುಸಿದ್ದಯ್ಯನವರ ಪ್ರೌಢಶಾಲೆ ಮುಖ್ಯಗುರು ಕೆ.ತಿಪ್ಪಣ್ಣ ವಂದಿಸಿದರು. ಶರಣ ಸಾಹಿತ್ಯ ಪರಿಷತ್ತಿನ ಕಾಯರ್ಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ ಸ್ವಾಗತಿಸಿ, ನಿರೂಪಿಸಿದರು. ದೈಹಿಕ ಶಿಕ್ಷಕ ಶಂಭುಲಿಂಗ, ವಿಶ್ವಮತಿ, ರೇಣುಕಾ ಪಾಟೀಲ್ ಸೇರಿ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾಥರ್ಿಗಳು ಉಪಸ್ಥಿತರಿದ್ದರು.