ಕುಮಾರಸ್ವಾಮಿಯವರು ಅಲ್ಪಸಂಖ್ಯಾತರ ಹಿಂದುಳಿದವರ ಸಮಾನತೆಗಾಗಿ ದುಡಿದಂತಹ ಮಹಾ ನಾಯಕರು : ಶಿವಣ್ಣನವರ

Great leaders like Kumaraswamy who worked for the equality of the backward minorities: Sivannavara

ಕುಮಾರಸ್ವಾಮಿಯವರು ಅಲ್ಪಸಂಖ್ಯಾತರ ಹಿಂದುಳಿದವರ ಸಮಾನತೆಗಾಗಿ ದುಡಿದಂತಹ ಮಹಾ ನಾಯಕರು : ಶಿವಣ್ಣನವರ 

ರಾಣೇಬೆನ್ನೂರ  28:  ಜೆಡಿಎಸ್ ಪಕ್ಷಕ್ಕೆ ರಾಜಕೀಯದ ಬಹುದೊಡ್ಡ ಇತಿಹಾಸವಿದೆ. ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ನಾಡಿನ, ಬಡವರ, ದೀನದಲಿತರ, ಅಲ್ಪಸಂಖ್ಯಾತರ ಹಿಂದುಳಿದವರ ಸಮಾನತೆಗಾಗಿ ದುಡಿದಂತಹ ಮಹಾ ನಾಯಕರು ಅವರಾಗಿದ್ದಾರೆ.  ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥಗೌಡ ಶಿವಣ್ಣನವರ ಹೇಳಿದರು.ಅವರು, ಹಾವೇರಿ, ರಾಣೆಬೆನ್ನೂರು, ಸವಣೊರು ಜಿಲ್ಲೆಯ ಮತ್ತಿತರ ತಾಲೂಕ ಘಟಕಗಳಿಗೆ ನೂತನ ಪದಾಧಿಕಾರಿಗಳ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.    ಬಿಜೆಪಿ ಮತ್ತು ಕಾಂಗ್ರೆಸ್ ಆಡಳಿತ ಕಂಡಿರುವ ರಾಜ್ಯದ ಜನತೆ ಬೇಸದ್ದು ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ  ಮತದಾರರು ಪುನಹ ಜೆಡಿಎಸ್ ಪಕ್ಷದ ಅಧಿಕಾರವನ್ನು ಚುನಾಯಿಸಲು  ಬಯಸುತ್ತಿದ್ದಾರೆ ಎಂದರು.    

 ಜೆಡಿಎಸ್ ಪಕ್ಷವನ್ನು ಬೇರು ಮಟ್ಟದಲ್ಲಿ ಸಂಘಟಿಸಬೇಕಾಗಿದೆ ಅದಕ್ಕಾಗಿ ತಾವು ಪಕ್ಷದ ರಾಜ್ಯಾಧ್ಯಕ್ಷರ ಆಸೆ, ಅಭಿಲಾಷೆಯಂತೆ ಗ್ರಾಮೀಣ, ನಗರ ಮತ್ತು ತಾಲೂಕ ಕೇಂದ್ರಗಳಲ್ಲಿ ಪಕ್ಷದ ಅಧ್ಯಕ್ಷ ಪದಾಧಿಕಾರಿಗಳನ್ನು ನೇಮಕಾತಿಗೊಳಿಸಲು ಮುಂದಾಗಿದ್ದೇವೆ ಎಂದರು. ಹಾವೇರಿ, ಸವಣೂರು ತಾಲೂಕು ಸೇರಿದಂತೆ ಮತ್ತಿತರೆ ತಾಲೂಕುಗಳ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರವೀಂದ್ರ ಕುಮಾರ್ ಎಂ ಅಂಗಡಿ, ಎಸ್‌.ರಾಮಚಂದ್ರರಾವ್ ಆಯ್ಕೆಗೊಂಡರು. ಕಾರ್ಯಕ್ರಮದಲ್ಲಿ ಪಕ್ಷದ ಮಾಧ್ಯಮ ವಕ್ತಾರ ಮಹೇಶ್ ಗೌಡ, ರಾಜ್ಯ ಉಪಾಧ್ಯಕ್ಷ ಕೆ. ಎಸ್‌. ಸಿದ್ದಬಸಪ್ಪ ಯಾದವ್, ಜಿಲ್ಲಾ ಉಪಾಧ್ಯಕ್ಷ ಅಮಿರ್ಜಾನ್ ಬೇಪಾರಿ, ಮೂಕಪ್ಪ ಪಡೆಪ್ಪನವರ್, ಜಿಲ್ಲಾ ಮುಖಂಡ ಎಸ್ ಎಲ್ ಕಾಡದೇವರಮಠ, ತಾಲೂಕ ಅಧ್ಯಕ್ಷ ಈರಣ್ಣ ನವಲಗುಂದ, ರಾಮನಗೌಡ ಪಾಟೀಲ್, ರಮೇಶ್ ಮಾಕನೂರು, ವಿಠ್ಠಲ್ ಸುಣಗಾರ, ಚನ್ನವೀರ​‍್ಪ ಬಡಿಗೇರ, ವೀರಭದ್ರಯ್ಯ ಹಿರೇಮಠ, ಅಬ್ದುಲ್ ಖಾದರಸಾಬ್,  ಸಲೀಂ ಹಾನಗಲ್, ಶಂಕರಗೌಡ ಮಣಕಟ್ಟಿ, ಸಿದ್ದು ಪಟ್ಟಣಶೆಟ್ಟಿ, ರಜಾಕ್ ಕೊಕ್ಕರಗುಂದಿ ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಇದ್ದರು