ಮಹಾನ್ ಕ್ರಾಂತಿಕಾರಿ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಶ್ವಾಕುಲ್ಲಾ ಖಾನ್ 97ನೇ ಹುತಾತ್ಮ ದಿನ!
ಬಳ್ಳಾರಿ 19: ಡಿಸೆಂಬರ್ 19, 1927 ಸ್ವಾತಂತ್ರ ಸಂಗ್ರಾಮದ ಮಹಾನ್ ಕ್ರಾಂತಿಕಾರಿಗಳಾದ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಶ್ಫಾಕುಲ್ಲಾ ಖಾನ್ ಅವರನ್ನು ಬ್ರಿಟಿಷರು ಗಲ್ಲಿಗೇರಿಸಿದರು. ಎಐಡಿಎಸ್‌ಓ ಬಳ್ಳಾರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬಳ್ಳಾರಿಯ ಬಿಮ್ಸ್ ಮೈದಾನದಲ್ಲಿ 97ನೇ ಹುತಾತ್ಮ ದಿನವನ್ನು ಸ್ಪೂರ್ತಿಯಿಂದ ಆಚರಿಸಲಾಯಿತು.
ಂಋಖಓ ಜಿಲ್ಲಾ ಅಧ್ಯಕ್ಷರಾದ ಕೆ. ಈರಣ್ಣ ವತಿಯಿಂದ ಪರಮ ದೈವ ಭಕ್ತ ಹಿಂದೂ ರಾಮ್ ಪ್ರಸಾದ್ ಮತ್ತು ಇಸ್ಲಾಮನ್ನು ಶ್ರದ್ಧೆಯಿಂದ ಪಾಲಿಸುತ್ತಿದ್ದ ಅಶ್ಫಾಕ್ ಒಟ್ಟಿಗೇ ಗಲ್ಲಿಗೇರಿದಾಗ, ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್, “ ಈ ಐಕ್ಯತೆಯೇ ನಮ್ಮ ದೇಶದ ಸ್ವಾತಂತ್ರ ಸಂಗ್ರಾಮದ ಸ್ಫೂರ್ತಿಯಾಗಬೇಕು, ಪ್ರತೀಕವಾಗಬೇಕು..” ಎಂದು ಹೇಳಿದರು.
ಈ ದಿನವನ್ನು “ಕೋಮು ಸೌಹಾರ್ದತೆ ಬಲಪಡಿಸುವ ದಿನ” ವನ್ನಾಗಿ ಆಚರಿಸಲಾಯಿತು. ಆಳುವ ಸರ್ಕಾರಗಳು, ಜನರು ಅನುಭವಿಸುತ್ತಿರುವ ಮೂಲಭೂತ ಸಮಸ್ಯೆಗಳ ವಿರುದ್ಧ ಅವರು ಬೆಳೆಸುವ ಒಗ್ಗಟ್ಟಿನ ಹೋರಾಟಗಳನ್ನು ಮುರಿಯಲು, ಅವರ ನಡುವೆ ಕೋಮು ವೈಷಮ್ಯ ಹರಡುತ್ತಿರುವ ಈ ಪ್ರಕ್ಷುಬ್ಧ ಪರಿಸ್ಥಿತಿಯ ನಡುವೆ, ಂಋಖಓ ವತಿಯಿಂದ, ಬ್ರಿಟಿಷರು ತಮ್ಮ ಒಡೆದು ಆಳುವ ನೀತಿಯ ಮೂಲಕ ಶತಾಯ ಗತಾಯ ಪ್ರಯತ್ನ ಪಟ್ಟರೂ ಬೇರಿ್ಡಸಲಾಗದ ಬಾಂಧವ್ಯ ಬಿಸ್ಮಿಲ್ ಹಾಗೂ ಅಶ್ಫಾಕ್ ರವರ ಜೀವನ ಸಂದೇಶವನ್ನು ವಿದ್ಯಾರ್ಥಿಗಳ ನಡುವೆ ಕೊಂಡೊಯ್ಯಲಾಯಿತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ನಾಗರಿಕರು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ವೀರೇಶ್, ರವಿ ಮತ್ತು ಇತರರು ಭಾಗವಹಿಸಿದ್ದರು.