ಸಾರಿಗೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಗ್ರಾಪಂ ಸದಸ್ಯರ ಆಕ್ರೋಶ

ಶಶಿಧರ ಶಿರಸಂಗಿ

ಶಿರಹಟ್ಟಿ 11: ತಾಲೂಕಿನಲ್ಲಿಯೇ ಬೆಳ್ಳಟ್ಟಿ ಗ್ರಾಮವೊಂದು ತೀಕ್ಷ್ಣವಾಗಿ ಬೆಳೆಯುತ್ತಿರುವ ದೊಡ್ಡ ಗ್ರಾಮವೆಂಬ ಖ್ಯಾತಿಗೆ ಹೆಸರುವಾಸಿಯಾಗತೊಡಗಿದೆ. ಇಲ್ಲಿ ಒಂದು ಸುಸಜ್ಜಿತ ಬಸ್ ನಿಲ್ದಾಣವಿದೆ. ಇಲ್ಲಿ ನಿತ್ಯ ನೂರಾರು ಬಸ್ಸುಗಳು, ಸಾವಿರಾರು ಪ್ರಯಾಣಿಕರು ದೂರದ ಹಳ್ಳಿಗಳಿಂದ ಬೆಳ್ಳಟ್ಟಿಗೆ ತಮ್ಮ ವ್ಯಾಪಾರ ವಹಿವಾಟಿಗಾಗಿ ಪ್ರಯಾಣ ಬೆಳೆಸುತ್ತಾರೆ. 

ಆದರೆ, ಪ್ರತಿನಿತ್ಯ ಪ್ರಯಾಣಿಕರು ಬೆಳ್ಳಟ್ಟಿ ಬಸ್ ನಿಲ್ದಾಣಕ್ಕೆ ಬಂದಕೂಡಲೇ ತಮ್ಮ ಮೂಗನ್ನು ಗಟ್ಟಿಯಾದ ಬಟ್ಟೆಯಿಂದ ಉಸಿರುಗಟ್ಟಿಸಿಕೊಳ್ಳುವ ರೀತಿಯಲ್ಲಿ ಮೂಗನ್ನು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಉಂಟಾಗಿದೆ. ಇದಕ್ಕೆ ಕಾರಣ ಹಲವಾರು ತಿಂಗಳುಗಳಿಂದ ಮೂತ್ರವಿಸರ್ಜನೆ ಹಾಗೂ ಶೌಚಾಲಯ ಪೈಪಲೈನ್ ಒಡೆದು ಹೋಗಿದ್ದರ ಪರಿಣಾಮ ಪೈಪ್ಗಳು ಬ್ಲಾಕ್ ಆಗಿ ಮಲ-ಮೂತ್ರವು ರಸ್ತೆಯುದ್ದಕ್ಕೂ ಹರಿದಾಡುತ್ತಿದ್ದರೂ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಸ್ಪಂದಿಸದೇ ಇರುವುದಕ್ಕೆ ಗ್ರಾಮ ಪಂಚಾಯತಿಯ ಸದಸ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಲಕ್ಷ್ಮೇಶ್ವರವು ಶಿರಹಟ್ಟಿ ತಾಲೂಕಿನಿಂದ ಬೇರ್ಪಟ್ಟ ನಂತರದ ದಿನಗಳಲ್ಲಿ ಶಿರಹಟ್ಟಿ ತಾಲೂಕಿನಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ಗ್ರಾಮಗಳಲ್ಲಿ ಒಂದಾದಂತಹ ಬೆಳ್ಳಟ್ಟಿ ಗ್ರಾಮವು ಸುಮಾರು 10ಸಾವಿರ ಜನಸಂಖ್ಯೆಯನ್ನು ಹೊಂದಿದ ಗ್ರಾಮವಾಗಿದೆ. ದಿನದಿಂದ ದಿನಕ್ಕೆ ವ್ಯಾಪಾರು-ವಹಿವಾಟು ಸ್ಥಾನವಾಗಿ ಹೊರಹೊಮ್ಮುತ್ತಿದೆ. ಆದರೆ ಇತ್ತೀಚೆಗೆ ಕೆಲವು ದಿನಗಳಿಂದ ಬಸ್ ನಿಲ್ದಾಣದಲ್ಲಿ ನಿಮರ್ಾಣವಾದ ಗಲೀಜು ಗ್ರಾಮಸ್ಥರ ನಿದ್ದೆಗೆಡಸಿದೆ.

ಗಲೀಜು ತುಳಿಯಲೇ ಬೇಕಾದ ಅನಿವಾರ್ಯತೆ: ಗ್ರಾಮದ ಕೇಂದ್ರ ಸ್ಥಳದಲ್ಲಿ ಬಸ್ ನಿಲ್ದಾಣವಿದ್ದುದರಿಂದ ಸುತ್ತಮುತ್ತಲಿನ 30-35 ಗ್ರಾಮಗಳ ಸಾರ್ವಜನಿಕರು ನಿತ್ಯವೂ ಇಲ್ಲಿ ತಮ್ಮ ವ್ಯಾಪಾರ-ವಹಿವಾಟು ಹಾಗೂ ದೈನಂದಿನ ಕೆಲಸ ಕಾರ್ಯಗಳಿಗೆ ಇಲ್ಲಿಗೆ ಆಗಮಿಸುತ್ತಾರೆ. ಬಸ್ ಇಳಿದ ತಕ್ಷಣವೇ ಗ್ರಾಮ ಪಂಚಾಯತಗೆ ತೆರಳಬೇಕಾದರೆ, ಶಾಲಾ ವಿದ್ಯಾಥರ್ಿಗಳು ತಮ್ಮ ಶಾಲೆಗಳಿಗೆ ತೆರಳಬೇಕಾದರೆ, ವಾಹನ ಸವಾರರು ಶಿರಹಟ್ಟಿ ತಾಲೂಕಾ ಕೇಂದ್ರಕ್ಕೆ ಬರಬೇಕಾದರೆ ಈ ರಸ್ತೆಯಲ್ಲಿ ಹರಿಯುತ್ತಿರುವ ಗಲೀಜನ್ನು ತುಳಿದೇ ಬರಬೇಕಾದ ಅನಿವಾರ್ಯತೆ ಬಂದಿರುವದರಿಂದ ಮೂಗು ಮುಚ್ಚಿಕೊಂಡು ಅಧಿಕಾರಿಗಳಿಗೆ ಶಾಪ ಹಾಕುತ್ತಾ ಸಂಚಾರ ಮಾಡುತ್ತಿದ್ದಾರೆ. 

ಕ್ಯಾರೆ ಎನ್ನದ ಅಧಿಕಾರಿಗಳು: ಮೂತ್ರವಿಸರ್ಜನೆ ಪೈಪಲೈನ್ ದುರಸ್ತಿಗೊಳಿಸಿ ಶುಚಿತ್ವ ಕಾಪಾಡುವಂತೆ ಸಾರಿಗೆ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಹಲವಾರು ಬಾರಿ ವಿನಂತಿಸಿದರೂ ಯಾವುದೇ ಪ್ರಯೋಜನ ಆಗಿರುವದಿಲ್ಲಾ, ಅಧಿಕಾರಿಗಳು ತಮ್ಮ ಮೊಬೈಲ್ನ್ನು ತಮ್ಮ ಸಿಬ್ಬಂದಿ ಕೈಯಲ್ಲಿ ನೀಡಿ ಬೇಜವಾಬ್ದಾರಿತನದಿಂದ ವತರ್ಿಸುತ್ತಿದ್ದಾರೆ. ಆದ್ದರಿಂದ ಈ ಕೂಡಲೇ ಇದನ್ನು ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು. ಇಲ್ಲದೇ ಹೋದಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಗ್ರಾಪಂ ಸದಸ್ಯರು ಹೇಳುತ್ತಿದ್ದಾರೆ. 

ಸಾರಿಗೆ ಸಂಸ್ಥೆ ಎಚ್ಚೆತ್ತುಕೊಳ್ಳುವುದು ಅವಶ್ಯ:  ಸದ್ಯ ಮುಂಗಾರು ಮಳೆ ಪ್ರವೇಶವಾಗಿದ್ದರಿಂದ ಆಗಾಗ್ಗೆ ಮಳೆಯು ಬರುತ್ತಿರುವದರಿಂದ, ರಸ್ತೆಯುದ್ದಕ್ಕೂ ಈ ಗಲೀಜು ನೀರು ಹರಿದುಕೊಂಡು ಹೋಗುತ್ತಿರುವ ಪರಿಣಾಮ ಸಾರ್ವಜನಿಕರ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿಗೆ ಇದ್ದು, ಇದನ್ನು ನಿರ್ಲಕ್ಷಿಸದೇ ಗಂಭಿರವಾಗಿ ಪರಿಗಣಿಸಿ ಪೈಪಲೈನ್ ದುರಸ್ತಿಗೆ ಸಾರಿಗೆ ಸಂಸ್ಥೆ ಎಚ್ಚೆತ್ತುಕೊಳ್ಳುವುದು ಅವಶ್ಯ.