ಗ್ರಾಮದೇವಿ ಜಾತ್ರಾ ಮಹೋತ್ಸವ
ಹಾನಗಲ್ 10: ಪ್ರತಿ 4ವರ್ಷಗಳಿಗೊಮ್ಮೆ ಇಲ್ಲಿ ನಡೆಯಲಿರುವ ಗ್ರಾಮದೇವಿ ಜಾತ್ರಾ ಮಹೋತ್ಸವವನ್ನು ಮಾ. 18 ರಿಂದ 26 ರ ವರೆಗೆ ಆಯೋಜಿಸಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶಾಸಕ ಶ್ರೀನಿವಾಸ ಮಾನೆ ನೇತೃತ್ವದಲ್ಲಿ ಜಾತ್ರಾ ಮಹೋತ್ಸವ ಸಮಿತಿಯ ಪ್ರಮುಖರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಹಾನಗಲ್ ಗ್ರಾಮದೇವಿ ಜಾತ್ರಾ ಮಹೋತ್ಸವಕ್ಕೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಇದೆ. ಉತ್ತರ ಕರ್ನಾಟಕದ ದೊಡ್ಡ ಜಾತ್ರೆಗಳಲ್ಲಿ ಒಂದು ಎನ್ನುವ ಹಿರಿಮೆಗೂ ಪಾತ್ರವಾಗಿದೆ. ಹಾಗಾಗಿ ಎಲ್ಲ ಸಿದ್ಧತೆಗಳೂ ಸಹ ಅಚ್ಚುಕಟ್ಟಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ರಚಿಸಲಾಗಿರುವ ನಾನಾ ಸಮಿತಿಗಳ ಸದಸ್ಯರು ಆಗಾಗ ಸಭೆ ಸೇರಿ ಚರ್ಚೆ ಕೈಗೊಳ್ಳಬೇಕು. ಲಕ್ಷಾಂತರ ಭಕ್ತರು ಪಾಲ್ಗೊಳ್ಳಲಿರುವ ಹಿನ್ನೆಲೆಯಲ್ಲಿ ಗೊಂದಲಗಳಿಗೆ ಅವಕಾಶ ನೀಡಬಾರದು.
ಭದ್ರತೆ, ಟ್ರಾಫಿಕ್ ನಿಯಂತ್ರಣದ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗುವುದು. ಪ್ರಮುಖ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ, ಅವರಿಗೂ ಜವಾಬ್ದಾರಿ ನೀಡಲಾಗುವುದು. ಜಾತ್ರಾ ಮಹೋತ್ಸವ ಸಮಿತಿಯ ಕಚೇರಿ ಉದ್ಘಾಟನೆಗೊಂಡ ಬಳಿ ತಾವೂ ಸಹ ನಗರದಲ್ಲಿದ್ದಾಗ ಒಂದು ಗಂಟೆ ಕುಳಿತು ಸಿದ್ಧತೆಗಳನ್ನು ಪರೀಶೀಲಿಸುವುದಾಗಿ ತಿಳಿಸಿದ ಅವರು ಶ್ರದ್ಧೆ ಮತ್ತು ಭಕ್ತಿಯಿಂದ ಎಲ್ಲರೂ ಜೊತೆಸೇರಿ ಜಾತ್ರಾ ಮಹೋತ್ಸವ ಆಚರಿಸೋಣ ಎಂದರು.
ಪ್ರಮುಖರಾದ ಗುರುರಾಜ್ ನಿಂಗೋಜಿ,ಆದರ್ಶ ಶೆಟ್ಟಿ,ಶಂಕರಭಟ್ ಜೋಶಿ, ಮಂಜಣ್ಣ ನಾಗಜ್ಜನವರ, ರಾಜೂ ಗೌಳಿ, ತಮ್ಮಣ್ಣ ಆರೆಗೊಪ್ಪ, ಸುರೇಶ ನಿಂಗೋಜಿ, ವಿರುಪಾಕ್ಷಪ್ಪ ಕಡಬಗೇರಿ, ರಾಜಕುಮಾರ ಶಿರಪಂತಿ, ಗಣೇಶ ಮೂಡ್ಲಿಯವರ, ನಾಗೇಂದ್ರ್ಪ ಬಮ್ಮನಹಳ್ಳಿ, ರವಿಚಂದ್ರ ಪುರೋಹಿತ್, ಯಲ್ಲಪ್ಪ ಶೇರಖಾನಿ, ಪರಶುರಾಮ ಖಂಡೂನವರ, ದಯಾನಂದ ನಾಗಜ್ಜನವರ ಇದ್ದರು.