ಗ್ರಾಮ ಪಂಚಾಯತಿ ಮರುವಿಂಗಡಣೆ: ಆಕ್ಷೇಪಣೆ ಸಲ್ಲಿಸಲು ಅವಕಾಶ
ಕಾರವಾರ 13 :-ಸರ್ಕಾರದ ನಿರ್ದೇಶನದಂತೆ ಹೊನ್ನಾವರ ತಾಲೂಕಿನ ಕೋಟಾ, ತುಂಬೆಬೀಳು, ಹೆರಾಳಿ, ಸುಳೆಬೀಳು, ಕುಚ್ಚೋಡಿ ಮತ್ತು ಸಂಪೊಳ್ಳಿ ಗ್ರಾಮಗಳನ್ನು ಒಳಗೊಂಡ ಕೋಟಾ ಗ್ರಾಮ ಪಂಚಾಯತಿ, ಹಾಗೂ ಹಡಿಕಲ್, ದಬ್ಬೋಡ, ಆಡುಕಳ, ಅಡಿಕೆಕುಳಿ ಮತ್ತು ಅಶಿಕೇರಿ ಗ್ರಾಮಗಳನ್ನು ಒಳಗೊಂಡ ಹಡಿಕಲ್ ಗ್ರಾಮ ಪಂಚಾಯತಿಯನ್ನಾಗಿಸಿ ಮರು ವಿಂಗಡಣೆ ಮಾಡುವ ಸಂಬಂಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 4(1) ಮತ್ತು (2) ಪ್ರಕಾರ ಪ್ರದತ್ತವಾದ ಅಧಿಕಾರ ಚಲಾಯಿಸಿ ಕೋಟಾ, ತುಂಬೆಬೀಳು, ಹೆರಾಳಿ, ಸುಳೆಬೀಳು, ಕುಚ್ಚೋಡಿ ಮತ್ತು ಸಂಪೊಳ್ಳಿ ಗ್ರಾಮಗಳನ್ನು ಒಳಗೊಂಡ ಕೋಟಾ ಗ್ರಾಮವನ್ನು ಗ್ರಾಮ ಪಂಚಾಯತಿಯ ಕೇಂದ್ರಸ್ಥಾನವಾಗಿ, ಹಾಗೂ ಹಡಿಕಲ್, ದಬ್ಬೋಡ, ಆಡುಕಳ, ಅಡಿಕೆಕುಳಿ ಮತ್ತು ಅಶಿಕೇರಿ ಗ್ರಾಮಗಳನ್ನು ಒಳಗೊಂಡ ಹಡಿಕಲ್ ಗ್ರಾಮವನ್ನು ಗ್ರಾಮ ಪಂಚಾಯತಿಯ ಕೇಂದ್ರಸ್ಥಾನವಾಗಿ, ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಘೋಷಿಸಿದ್ದಾರೆ.ಈ ಅಧಿಸೂಚನೆಯಿಂದ ಭಾಧಿತ ಸಾರ್ವಜನಿಕರು ಆಕ್ಷೇಪಣೆಗಳು ಮತ್ತು ಸಲಹೆ ಸೂಚನೆಗಳಿದ್ದಲ್ಲಿ ಡಿ. 16 ರಿಂದ ಜ.15 ರ ಒಳಗಾಗಿ ತಮ್ಮ ಆಕ್ಷೇಪಣೆ ದಾಖಲೆ ಸಹಿತ ಲಿಖಿತ ರೂಪದಲ್ಲಿ ಜಿಲ್ಲಾಧಿಕಾರಿ, ಉತ್ತರ ಕನ್ನಡ ಇವರಿಗೆ ಸಲ್ಲಿಸಬಹುದಾಗಿದೆ. ಸಾರ್ವಜನಿಕರಿಂದ ಬರುವ ಆಕ್ಷೇಪಣೆಗಳನ್ನು ನಿಯಮಾನುಸಾರ ಪರೀಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಜ. 15 ರ ನಂತರ ಬರುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.