ಸರಕಾರಿ ಶಾಲೆಗಳು ತಾಯಿ ಇದ್ದಂತೆ : ಮುಜಾವರ

Government schools are like mothers: Mujawara

ಸರಕಾರಿ ಶಾಲೆಗಳು ತಾಯಿ ಇದ್ದಂತೆ : ಮುಜಾವರ 

ಹಾರೂಗೇರಿ 12 :  ಸರಕಾರಿ ಶಾಲೆಗಳು ಎಂಬ ಕೀಳರಿಮೆ ಬೇಡ ಹೆಮ್ಮೆ ಇರಲಿ. ಸರಕಾರಿ ಶಾಲೆಗಳಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ಇಂದು ಸರ್ಕಾರದ ಉನ್ನತ ಹುದ್ದೆಗಳನ್ನು ಅಲಂಕರಿಸಿ ದೇಶ ಸೇವೆಯಲ್ಲಿ ತೊಡಗಿದ್ದಾರೆ. ಸರಕಾರಿ ಶಾಲೆಗಳು ತಾಯಿ ಇದ್ದಂತೆ ಎಂದು ಸಾವಿತ್ರಿಬಾಯಿ ಫುಲೆ ರಾಷ್ಟ್ರ​‍್ರಶಸ್ತಿ ಪುರಸೃತ ಶಿಕ್ಷಕಿ ಟಿ.ಜಿ.ಮುಜಾವರ ಹೇಳಿದರು.   ಪಟ್ಟಣದ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು 8ನೇ ವರ್ಗದ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸರಕಾರಿ ಶಾಲೆಗಳಲ್ಲಿ ಸೇರುವ ಮೂಲಕ ಗುಣಮಟ್ಟದ ಶಿಕ್ಷಣ ಮತ್ತು ಸರಕಾರದ ಉಚಿತ ಸೌಲಭ್ಯಗಳನ್ನು ಪಡೆದು ನಿಮ್ಮ ಪೋಷಕರಿಗೆ ಗೌರವ ತರಬೇಕು. ಸರಕಾರಿ ಶಾಲೆಗಳ ಮೇಲೆ ಪ್ರೀತಿ ಗೌರವ ನಂಬಿಕೆ ಇರಬೇಕೆಂದು ಹೇಳಿದರು. ಸಿಆರ್‌ಪಿ ಮಹಾಂತೇಶ ಮುಗಳಖೋಡ ಮಾತನಾಡಿ ಸರಕಾರಿ ಶಾಲೆಯಲ್ಲಿ ಓದಿ, ಅರಿವಿನ ಬುನಾದಿ ಹಾಕಿಕೊಂಡು, ಪರಿಶ್ರಮದಿಂದ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ನಾವೆಲ್ಲಾ ಉನ್ನತ ಮಟ್ಟ ತಲುಪಿದ್ದೇವೆ. ಜನರ ದುಡ್ಡಿನಿಂದ ಜನರಿಗಾಗಿ ಸರಕಾರಿ ಶಾಲೆಗಳಿವೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಬದುಕಿನ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.  ಈ ವೇಳೆ ಸಾವಿತ್ರಿಬಾಯಿ ಫುಲೆ ರಾಷ್ಟ್ರ​‍್ರಶಸ್ತಿ ಪುರಸೃತೆ ಟಿ.ಜಿ.ಮುಜಾವರ ಕುವೆಂಪು ವಿವಿಗೆ ಪ್ರಥಮ ರಾ​‍್ಯಂಕ್ ಮತ್ತು ಬಂಗಾರದ ಪದಕ ಪಡೆದ ಅಕ್ಷತಾ ಕಾಂಬಳೆ ಸ್ಕೌಟ್ಸ್‌ ಮತ್ತು ಗೈಡ್ಸ್‌ ಹಾರೂಗೇರಿ ವಲಯ ಪ್ರಧಾನ ಕಾರ್ಯದರ್ಶಿ ಸರದಾರ ಜಮಾದಾರ, ಮತ್ತು ಸರಕಾರಿ ಶಾಲೆಗೆ ದೇಣಿಗೆ ನೀಡಿದ ಸಮಾಜ ಸೇವಕರಾದ ಡಾ. ಶ್ರೀಶೈಲ ಪಡೇದಾರ, ಪ್ರದ್ಯುಮ್ನಕುಮಾರ ಬದ್ನಿಕಾಯಿ, ಸಕ್ಕುಬಾಯಿ ಕುರಿ ಅವರನ್ನು ಸತ್ಕರಿಸಿ ಗೌರವಿಸಲಾಯಿತು. ನಂತರ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳು ನಡೆದವು. ಮುಖ್ಯಾಧ್ಯಾಪಕಿ ಆರ್‌.ಬಿ.ಖೇಮಲಾಪೂರ ಮುಖ್ಯೋಪಾಧ್ಯಾಯರಾದ ಎಸ್‌.ಎಸ್‌. ಹಣಸಿ ಸಿ.ಎಂ.ಮುಂಡರಗಿ ಎಸ್‌.ಆರ್‌.ಕದಮ್ ಸಿ.ಟಿ.ಬನಾಜ ಪಿ.ಎಚ್‌.ಕೋಟಿ ಪಿ.ಎ.ತೇರದಾಳ ಎಂ.ಜಿ.ಜೀವಣೆ ಎ.ಎಸ್‌.ಕಾಂಬಳೆ ಸುನೀಲ ಹಾಡಕಾರ ಭಾರತಿ ಜೋಗನ್ನವರ ವೀನಾ ಗಸ್ತಿ ಲಕ್ಕವ್ವ ದೊಡ್ಡಣ್ಣವರ ಶಿವಾನಿ ನೀಲವಾಣಿ ಮತ್ತಿತರ ಶಿಕ್ಷಕರು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.