ಸನಾ ಮುಜಾವರಗೆ ಗೋಲ್ಡ್ ಮೆಡಲ್ ಪ್ರದಾನ

ಲೋಕದರ್ಶನ ವರದಿ

ವಿಜಯಪುರ 26: ನಗರದ ಸಿಕ್ಯಾಬ ಬಾಲಕರ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾಥರ್ಿನಿ ಸನಾ ದಾದಾಪೀರ ಮುಜಾವರ ಅವರು 2018ನೆಯ ಸಾಲಿನ ದ್ವಿತೀಯ ಪಿಯುಸಿ ವಾಷರ್ಿಕ ಪರೀಕ್ಷೆಯಲ್ಲಿ 600ಕ್ಕೆ 580 ಅಂಕಗಳನ್ನು ಪಡೆದುಕೊಂಡು ಉದರ್ು ಮಾಧ್ಯಮದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಕ್ಕೆ ಅವರಿಗೆ ಕಲಬುಗರ್ಿಯ 'ಅಂಜುಮನ್ ತರಕ್ಕಿ-ಏ-ಉದರ್ು ಹಿಂದ್ ಗುಲಬಗರ್ಾ ವತಿಯಿಂದ 'ಅಂಜುಮನ್ ಉದರ್ು ಗೋಲ್ಡ್ಮೆಡಲ್ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗಿದೆ.

ಕಲಬುಗರ್ಿಯಲ್ಲಿ ಎಂ.ಎಲ್.ಸಿ. ಇಕ್ಬಾಲಅಹ್ಮದ ಸರಡಗಿ, ಡಾ. ವಹಾಬ ಅಂದ್ಲೀಬ್, ಡಾ. ನಾಸೀರ ಬಿನ್ ಅಲಿ ಜನಾಬ ಅಮಜದ್ ಜಾವೀದ ಮತ್ತಿತರ ಗಣ್ಯರ ಸಮ್ಮುಖದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.  

ದ್ವಿತೀಯ ಪಿಯು ಪರೀಕ್ಷೆಯಲ್ಲಿ ಪ್ರತಿಮ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾಥರ್ಿನಿ ಸನಾ ಮುಜಾವರ ಅವರನ್ನು ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಎ. ಪುಣೇಕರ, ಗೌರವ ಕಾರ್ಯದಶರ್ಿ ಎ.ಎಸ್.ಪಾಟೀಲ, ಪ್ರಾಚಾರ್ಯ  ಎನ್.ಎಸ್.ಭೂಸನೂರ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿಯವರು ಅಭಿನಂದಿಸಿದ್ದಾರೆ.