7 ಲಕ್ಷ ರೂ ಮೌಲ್ಯದ ಬಂಗಾರದ ಆಭರಣ ವಶ
ರಾಣೇಬೆನ್ನೂರ 12 : ನಗರದಲ್ಲಿ ಇತ್ತೀಚೆಗೆ ಮನೆ ಕಳ್ಳತನವಾದ ಬಗ್ಗೆ ಆರೋಪಿ , ಮಾಲು ಪತ್ತೆ ಹಚ್ಚಲು ಎಸ್ಪಿ ಅಂತುಕುಮಾರ ಮಾರ್ಗದರ್ಶನ ದಲ್ಲಿ ಸಿಪಿಐ ಡಾ.ಶಂಕರ ಎಸ್.ಕೆ ನೇತೃತ್ವದಲ್ಲಿ ರಚಿಸಿದ ತಂಡವು ಘಟನಾ ಸ್ಥಳದಲ್ಲಿ ದೊರೆತ ಬೆರಳು ಮುದ್ರೆ ಆಧಾರದ ಮೇಲೆ ಆರೋಪಿ ರಾಜ ಫುಕರಾಜ್ ಅ ಗೌತಂರಾಜ ಅ ಪೋತ್ ರಾಜ್ ಅ ಸದ್ದಾಂ ತಂದೆ ಚನ್ನಪ್ಪ ಹಿ ಬಾಲ ರಾಜ ವಯಾ-35 ಶಿವಮೊಗ್ಗ ಇತನನ್ನು ಬಂಧಿಸಿ ಒಂದು ಜೊತೆ ಬಂಗಾರದ ಕರಿಮಣಿ ಬಳೆ 31 ಗ್ರಾಂ 608 ಮಿಲಿ ತೂಕ, ಒಂದು ಜೊತೆ ಬಂಗಾರದ ಬಳೆ 30 ಗ್ರಾಂ, ಒಂದು ಬಂಗಾರದ ಮುತ್ತಿನ ಸರ 31 ಗ್ರಾಂ 70 ಚಲಿ, ಒಂದು ಬಂಗಾರದ ಬ್ರಾಸ್ ಲೈಟ್ 7 ಗ್ರಾಂ 400 ಮಿಲಿ , ಒಂದು ಬಂಗಾರದ ಬಳೆ 9 ಗ್ರಾಂ 800 ಮಿಲಿ. ಇವೆಲ್ಲವುಗಳ ಸೇರಿ ಒಟ್ಟು109 ಗ್ರಾಂ 87 ಮಿಲಿ ಅ:ಕಿ: 7,47,116ರೂ ಕಿಮ್ಮತ್ತಿನ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಈತನ ಮೇಲೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, 6 ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು 30 ಪ್ರಕರಣಗಳು ವಿಚಾರಣೆಯಲ್ಲಿ ಇದ್ದು ತನಿಖೆ ಮುಂದುವರೆದಿದೆ.