ಪರಿಶುದ್ಧ ಭಕ್ತಿ ಮಾಡಿದವರ ಕಷ್ಟ ಪರಿಹರಿಸುತ್ತಾನೆ ಭಗವಂತ : ಸಹಜಾನಂದಶ್ರೀ
God solves the problems of those who practice pure devotion: Sahajanandashree
ಮಹಾಲಿಂಗಪುರ 07: ಕಷ್ಟಗಳು ಬರುವುದು ಸರ್ವೇ ಸಾಮಾನ್ಯ ಆದರೆ ಅದನ್ನು ಪರಿಹರಿಸುವುದು ಸುಲಭವಿಲ್ಲ ಸಂಕಟ ಬಂದಾಗ ವೆಂಕಟರಮಣ ಎಂದರೆ ದೇವರು ಕರುಣೆ ತೋರುವುದಿಲ್ಲ ಯಾರು ಭಗವಂತನಲ್ಲಿ ಪರಿಶುದ್ಧ ಭಕ್ತಿ ಇಟ್ಟು ದೇವರನ್ನು ನೆನೆಯುತ್ತಾರೆ ಅವರ ಕಷ್ಟಗಳನ್ನು ಭಗವಂತ ಪರಿಹರಿಸುತಾನೆ ಎಂದು ಸ್ಥಳೀಯ ಸಿದ್ದಾರೂಢ ಬ್ರಹ್ಮ ವಿದ್ಯಾಶ್ರಮದ ಸಹಜಾನಂದ ಸ್ವಾಮೀಜಿ ಹೇಳಿದರು.
ನಗರದ ಬನಶಂಕರಿ ಸಾಂಸ್ಕೃತಿ ಭವನದಲ್ಲಿ ನಡೆಯುತ್ತಿರುವ ಬಸವಾನಂದ ಮಹಾಸ್ವಾಮಿಗಳ 52 ನೇ ಪುಣ್ಯಾರಾಧನೆ ಕಾರ್ಯಕ್ರಮದ ಮೊದಲ ದಿನದ ವೇದಾಂತ ಪರಿಷತ್ತಿನ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿ ಭಗವಂತನಲ್ಲಿ ಬರಿ ಭಕ್ತಿ ಮಾಡಿದರೆ ಸಾಲದು ನಾವು ಮಾಡುವ ಭಕ್ತಿ ಭಗವಂತನ ಪ್ರೀತಿಗೆ ಪಾತ್ರವಾದರೆ ಮಾತ್ರ ಭಕ್ತರ ಕಷ್ಟಗಳಿಗೆ ಪರಿಹಾರ ಕರುಣಿಸುತ್ತಾನೆ. ಅದಕ್ಕೆ ನಾವು ಮಾಡುವ ಭಕ್ತಿ ಪರಿ ಶುದ್ಧವಾದಾಗ ಮಾತ್ರ ದೇವರು ಒಲಿಯುತ್ತಾನೆ ಎಂದರು.
ನಂತರ ಮಾತನಾಡಿದ ಕಲಬುರಗಿಯ ಪೂರ್ಣ ಪ್ರಜ್ಞ ಯೋಗಾಶ್ರಮದ ಮಾತೋಶ್ರೀ ಲಕ್ಷ್ಮಿದೇವಿಯವರು ಶಿವ ಶಿವ ಎಂದರೆ ಭಯವಿಲ್ಲ ಶಿವನಾಮಕ್ಕೆ ಸಾಟಿ ಬೆರಿಲ್ಲ ಎಂಬ ನಂಬಿಕೆ ನಮ್ಮೆಲ್ಲರದ್ದು ಪರ ಶಿವ ಎಲ್ಲಾ ಕಷ್ಟಗಳನ್ನು ಪರಿಹರಿಸುವ ದೇವರು. ಶಿವಾರಾಧನೆಯಿಂದ ಬದುಕಿನ ಕಷ್ಟಗಳು ದೂರಾಗುತ್ತವೆ. ಯಶಸ್ಸಿನ ಹಾದಿಗಿದ್ದ ಅಡೆತಡೆಗಳು ದೂರವಾಗುತ್ತವೆ. ಎಂಬುದು ನಂಬಿಕೆ ಎಂದರು.
ನಂತರ ಸಿದ್ದರಾಮ ಶಿವಯೋಗಿ, ಕಲಬುರಗಿಯ ನೀಲಮ್ಮಾ ತಾಯಿ, ಶಂಕರೆಮ್ಮಾ ತಾಯಿ, ಮಾತನಾಡಿದರು. ವಿಜಯಪುರದ ರಾಮಕೃಷ್ಣ ದೇವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಮುಖಂಡರಾದ ಸಿದ್ದಗಿರಿ ಕಾಗಿ ಬಿ ಡಿ ಸೋರಗಾಂವಿ, ಪ್ರಭು ಬೆಳಗಲಿ, ಈಶ್ವರ ವಂದಾಲ, ಬಸವರಾಜ್ ಪಶ್ಚಾಪುರ, ಕಲ್ಲಪ್ಪ ಚಿಂಚಲಿ, ಅಲ್ಲಪ್ಪ ಗುಂಜಿಗಾಂವಿ, ಚನ್ನಪ್ಪ ಪಟ್ಟಣಶೆಟ್ಟಿ, ಮಲ್ಲಪ್ಪ ಕಟಗಿ, ಶಂಕರ ನಿಲಾರಿ, ಮೆಹಬೂಬ ಸನದಿ, ಶ್ರೀಶೈಲ ಉಳ್ಳಾಗಡ್ಡಿ, ಶಂಕರೆಪ್ಪ ಹಣಗಂಡಿ, ಸೇರಿ ಹಲವರು ಇದ್ದರು. ಎಸ್ ಕೆ ಗಿಂಡೆ ಗುರುಗಳು ಸ್ವಾಗತಿಸಿದರು, ಹುಮಾಯಿನ ಸುತಾರ ನಿರೂಪಿಸಿ ವಂದಿಸಿದರು. ಪ್ರಸಾದ ದಾನಿಗಳಾದ ಬಸವಾನಂದ ಜಿಟ್ಟಿ ಅವರನ್ನು ಗೌರವಿಸಲಾಯಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 