ವಿಶ್ವದಲ್ಲಿಯೇ ಪ್ರಶಂಸೆಗೆ ಪಾತ್ರವಾದ ಗ್ಯಾರಂಟಿ ಯೋಜನೆ : ಮಣಕಟ್ಟಿ
ಶಿಗ್ಗಾವಿ 20 : ವಿಶ್ವದಲ್ಲಿಯೇ ಪ್ರಶಂಸೆಗೆ ಪಾತ್ರವಾದ ಯೋಜನೆ ಎಂದರೆ ಗ್ಯಾರಂಟಿ ಯೋಜನೆ ಎಂದು ಗ್ಯಾರಂಟಿ ಯೋಜನೆ ತಾಲೂಕ ಅಧ್ಯಕ್ಷ ಎಸ್.ಎಫ್.ಮಣಕಟ್ಟಿ ಹೇಳಿದರು. ಪಟ್ಟಣದ ಪ್ರವಾಸಿಮಂದಿರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು ಭಾಜಪ ನಿಕಟಪೂರ್ವ ಅಧ್ಯಕ್ಷ ಶಿವಾನಂದ ಮ್ಯಾಗೇರಿಯವರು ಪತ್ರಿಕಾ ಹೇಳಿಕೆಯಲ್ಲಿ ಗೃಹಲಕ್ಷ್ಮೀಗೆ 6 ತಿಂಗಳಿಂದ ಹಣ ಹಾಕಿಲ್ಲ ಎಂದು ತಪ್ಪು ಮಾಹಿತಿಯನ್ನು ನೀಡಿದ್ದಾರೆ. 6 ತಿಂಗಳು ಗೃಹಲಕ್ಷ್ಮೀ ಹಣ ಖಾತೆಗೆ ಜಮಾ ಆಗಿಲ್ಲ ಎಂದು ಹೇಳಿಕೆ ನೀಡಿದ್ದು ಸ್ಪಷ್ಟಿಕರಿಸಿದ ಗ್ಯಾರಂಟಿ ಅಧ್ಯಕ್ಷ ಮಣಕಟ್ಟಿ ಅವರು 3 ತಿಂಗಳು ಹಣ ಖಾತೆಗೆ ಜಮಾ ಆಗಿಲ್ಲ ಕಾರಣ ರಾಜ್ಯ ಮಟ್ಟದಲ್ಲಿ ಒಂದೇ ಖಾತೆವಿರುವ ಕಾರಣ ಅದನ್ನು ತಾಲೂಕ ಮಟ್ಟಕ್ಕೆ ವಿಕೇಂದ್ರೀಕರಣ ಮಾಡಲು ಪ್ರಯತ್ನಿಸುತ್ತಿರುವ ಕಾರಣ ತಡವಾಗಿದೆ ಶೀಘ್ರದಲ್ಲೇ ಖಾತೆಗೆ ಹಣ ಜಮಾ ಮಾಡಲಿದ್ದಾರೆ. ಅಲ್ಲದೇ ಅನ್ನಬಾಗ್ಯ ಯೋಜನೆ ಹಣದ ಬದಲಾಗಿ 10 ಕೆ.ಜಿ.ಅಕ್ಕಿ ಪಡಿತರ ದಾಸ್ತಾನು ಮಾಡುತ್ತೇವೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಸ್ಪಷ್ಟಿಕರಿಸಿದ್ದಾರೆ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಮಂಜುನಾಥ ತಿಮ್ಮಾಪೂರ, ಚಂದ್ರು ಹೆಬ್ಬಾಳ, ಯಲ್ಲಪ್ಪ ನರಗುಂದ, ಗದಿಗೆಪ್ಪ ಬಳ್ಳಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.