ಸಮಾಜದಲ್ಲಿರುವ ಲಿಂಗ ತಾರತಮ್ಯವನ್ನು ಹೋಗಲಾಡಿಸಬೇಕಿದೆ
ಬೆಳಗಾವಿ 10: ಸಮಾಜದಲ್ಲಿರುವ ಲಿಂಗ ತಾರತಮ್ಯವನ್ನು ಹೋಗಲಾಡಿಸಿ, ಸಮಸಮಾಜವನ್ನು ನಿರ್ಮಿಸಲು ಪ್ರಯತ್ನಿಸಬೇಕಾಗಿದೆ. ಸ್ತ್ರಿಯೊಬ್ಬಳು ಎಲ್ಲ ಅಡೆತಡೆಗಳನ್ನು ಮುರಿದು ಮುಂದೆ ಸಾಗಿದಾಗ ಮಾತ್ರ ಯಶಸ್ಸು ದೊರೆಯುತ್ತದೆ. ಅದಕ್ಕಿಂತ ಮುಖ್ಯವಾಗಿ ಆತ್ಮ ವಿಶ್ವಾಸ ಹಾಗೂ ಸಮಾನ ಅವಕಾಶಗಳನ್ನು ಸೃಷ್ಟಿಸುವ ಅಗತ್ಯವಿದೆ. ಧೈರ್ಯ ಮತ್ತು ಪರಿಶ್ರಮವು ಸವಾಲುಗಳನ್ನು ದೃಢಸಂಕಲ್ಪದಿಂದ ಎದುರಿಸಲು ಸಹಾಯ ಮಾಡುತ್ತದೆ ಎಂದು ಬ್ಲೇಡ್ ರನ್ನರ ಶಾಲಿನಿ ಸರಸ್ವತಿ ಅವರಿಂದಿಲ್ಲಿ ಹೇಳಿದರು. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕೆಎಲ್‌ಇ ಸಂಸ್ಥೆಯ ಸ್ವಶಕ್ತಿ ಮಹಿಳಾ ಸಬಲೀಕರಣ ಘಟಕವು ಏರಿ್ಡಸಿದ್ದ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಲಿಂಗಬೇಧ ತಾರತಮ್ಯ ಅಧಿಕಗೊಳ್ಳುತ್ತಿದೆ. ಅದು ತಪ್ಪಬೇಕಾದರೆ ಸುಶಿಕ್ಷಿತ ಸಮಾಜ ನಿರ್ಮಾಣ ಮಾಡಬೇಕಾಗಿದೆ. ಹೆಣ್ಣು ಮನೆಯ ಬೆಳಕು ಎಂಬುದನ್ನು ಅರಿತುಕೊಳ್ಳಬೇಕು. ಸ್ತ್ರೀ ಇಲ್ಲದ ಸಮಾಜವನ್ನು ಉಹಿಸಿಕೊಳ್ಳುವದು ಅಸಾಧ್ಯ ಎಂದು ಅವರು ತಿಳಿಸಿದರು. ಭಾರತದ ಮೊದಲ ಮಹಿಳಾ ಬ್ಲೇಡ್ ಓಟಗಾರ್ತಿ ಶಾಲಿನಿ, ಚೀನಾದ ಹ್ಯಾಂಗ್ಝೌನಲ್ಲಿ 2023ರಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿ, ವೇಗದ ಬ್ಲೇಡ್ ಓಟಗಾರ್ತಿ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಕೆಎಲ್‌ಇಯ ಮಹಿಳಾ ಸ್ವಶಕ್ತಿ ಸಬಲೀಕರಣ ಕೋಶದ, ಡಾ. ಪ್ರೀತಿ ಕೆ. ದೊಡವಾಡ ಅತಿಥಿಗಳನ್ನು ಸತ್ಕರಿಸಿದರು. ಕಾರ್ಯದರ್ಶಿ ಡಾ. ನೇಹಾ ಧಡೇದ ಸ್ವಾಗತಿಸಿದರು. ಮಹಿಳಾ ದಿನಾಚರಣೆ ಅಂಗವಾಗಿ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಏರಿ್ಡಸಲಾದ ಚಿತ್ರಕಲೆ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.