ಗಂಗಾವತಿ: ಭಾರತ ಮಾತೆಯ ಜಯ: ಬಿಜೆಪಿ ವಿಜಯೋತ್ಸವ

ಲೋಕದರ್ಶನ ವರದಿ

ಗಂಗಾವತಿ 24: ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಸಾಧಿಸಿರುವದು ಭಾರತ ಮಾತೆಗೆ ಸಂದ ಜಯವಾಗಿದೆ ಎಂದು ಬಿಜೆಪಿ ಮುಖಂಡ ಕೆಲೋಜಿ ಸಂತೋಷಜಿ ತಿಳಿಸಿದರು. ಗುರುವಾರ ಬಿಜೆಪಿ ಕಾರ್ಯಕರ್ತರೊಂದಿಗೆ ವಿಜಯೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷ ಧೂಳಿಪಟವಾಗಲು ಮುಸ್ಲಿಂರ ತುಷ್ಟೀಕರಣ ಕಾರಣವಾಗಿದೆ. ದೇಶದಲ್ಲಿನ ಮುಸ್ಲಿಂ ಜನಾಂಗವನ್ನು ಕೇವಲ ಓಟ್ ಬ್ಯಾಂಕ್ ಆಗಿ ಪರಿಗಣಿಸಿದ್ದ ಕಾಂಗ್ರೆಸ್ ಪಕ್ಷಕ್ಕೆ ಮತದಾರ ಬುದ್ದಿ ಕಲಿಸಿದ್ದಾನೆ ಎಂದು ಹೇಳಿದರು. ಕಳೆದ 70 ವರ್ಷಗಳಿಂದ ದೇಶವನ್ನಾಳಿದ ಕಾಂಗ್ರೆಸ್ ಪಕ್ಷ ಮುಸ್ಲಿಂರನ್ನು ಕತ್ತಲಲ್ಲಿಟ್ಟು ಅವರನ್ನು ಶಿಕ್ಷಣ ವಂಚಿತರನ್ನಾಗಿ ಮಾಡಿದ್ದಾರೆ. 

ಇದರಿಂದ ಮುಸ್ಲಿಂ ಜನಾಂಗ ಸಹ ಈ ಚುನಾವಣೆಯಲ್ಲಿ ಬಿಜೆಪಿ ಮತ ಹಾಕಿರುವ ಸಾಧ್ಯತೆಗಳಿವೆ ಎಂದು ಹೇಳಿದರು. ಬಿಜೆಪಿ ನಗರ ಮಂಡಲ ಅಧ್ಯಕ್ಷ ವೀರೇಶ್ ಬಲಕುಂದಿ, ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಸಿಂಗನಾಳ ವಿರುಪಾಕ್ಷಪ್ಪ, ನಗರಸಭೆ ಸದಸ್ಯ ರಾಚಪ್ಪ ಸಿದ್ದಾಪುರ, ವಾಸುದೇವ ನವಲಿ ಪಾಲ್ಗೊಂಡಿದ್ದರು.