ಲೋಕದರ್ಶನ ವರದಿ
ಗಂಗಾವತಿ 12: ದೆಹಲಿಯ ಮುಖ್ಯರಸ್ತೆಯಲ್ಲೊಂದಾದ ತುಘಲಕ್ ರಸ್ತೆಯಲ್ಲಿರುವ ಕಾಂಗ್ರೆಸ್ ನೇತಾರರೊಬ್ಬರ ಮನೆಗೆ ಇಡೀ ದೇಶದ ಭ್ರಷ್ಟಾಚಾರದ ಹಣ ಹರಿದು ಹೋಗುತ್ತಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿಗೆ ಪ್ರಧಾನಿ ಮೋದಿ ಪರೋಕ್ಷ ಟಾಂಗ್ ನೀಡಿದರು.
ಗಂಗಾವತಿ ನಗರದ ಕನಕಗಿರಿ ರಸ್ತೆಯಲ್ಲಿ ನಿಮರ್ಿಸಲಾಗಿದ್ದ ಬೃಹತ್ ವೇದಿಕೆಯಲ್ಲಿ ಅವರು, ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯಥರ್ಿ ಸಂಗಣ್ಣ ಕರಡಿ ಪರ ಮತಯಾಚನೆ ಮಾಡಿ ಮಾತನಾಡಿದರು.
ಮಧ್ಯಪ್ರದೇಶದಲ್ಲಿ ಇತ್ತೀಚೆಗಷ್ಟೆ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಸಕರ್ಾರದ್ದ ಬಹುದೊಡ್ಡ ಲಂಚಬುರುಕ ಕೈ, ಅಗಸ್ತಾ ಹಗರಣದಲ್ಲಿ, ರಫೇಲ್ ಡೀಲ್ ಸೇರಿದಂತೆ ಮಹರಾಷ್ಟ್ರಾ ಸಕರ್ಾರದಲ್ಲಿದ್ದ ಬಡಮಕ್ಕಳಿಗೆ ಪೌಷ್ಠಿಕ ಆಹಾರ ಪೂರೈಕೆಗಾಗಿ ಇಟ್ಟಿದ್ದ ಹಣ ಕೂಡ ದೆಹಲಿಯ ತುಘಲಕ್ ರಸ್ತೆಯ ಆ ಕಾಂಗ್ರೆಸ್ ನಾಯಕನ ಮನೆ ಸೇರಿದೆ. ಈ ಐದು ವರ್ಷದಲ್ಲಿ ಕಾಂಗ್ರೆಸ್ ಎಷ್ಟು ಹಸಿದಿದೆ ಎಂದರೆ, ಈ ಬಾರಿ ಅದೇನಾದರೂ ದೆಹಲಿ ಅಧಿಕಾರ ಗದ್ದುಗೆ ಹಿಡಿದರೆ, ಇಡೀ ದೇಶವನ್ನೇ ಆಪೋಷಣ ತೆಗೆದುಕೊಳ್ಳಲಿದೆ ಎಂದರು.
ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಶ್ರೀರಾಮುಲು, ಕನಕಗಿರಿ ಶಾಸಕ ಬಸವರಾಜ ದಡೆಸೂಗೂರು, ಯಲಬುಗರ್ಾ ಶಾಸಕ ಹಾಲಪ್ಪ ಆಚಾರ್, ಶಿರಗುಪ್ಪ ಶಾಸಕ ಸೋಮಲಿಂಗಪ್ಪ, ಸೇರಿದಂತೆ ಸುರಪುರ ಶಾಸಕ ರಾಜೂಗೌಡ, ರಾಯಚೂರು ಕ್ಷೇತ್ರದ ಅಭ್ಯಥರ್ಿ ರಾಜಾ ಅಮರೇಶನಾಯಕ, ಬಳ್ಳಾರಿ ಅಭ್ಯಥರ್ಿ ದೇವೇಂದ್ರಪ್ಪ, ರಾಯಚೂರು, ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯಥರ್ಿಗಳು ಹಾಗೂ ವಿವಿಧ ಮೋಚರ್ಾದ ಮುಖಂಡರು, ಬಿಜೆಪಿ ಹಿರಿಯ ನಾಯಕರು ಉಪಸ್ಥಿತರಿದ್ದರು.
ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯಥರ್ಿ ಕರಡಿ ಸಂಗಣ್ಣ ಪ್ರಾಸ್ತಾವಿಕಮಾತುಗಳನ್ನಾಡಿದರೆ, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಸ್ವಾಗತಿಸಿದರು. ಮೋದಿ ಭಾಷನ ಆಲಿಸಲು ಮೂರು ಲೋಕಸಭಾ ಕ್ಷೇತ್ರರದಿಂದ ಲಕ್ಷಾಂತರ ಜನ ಆಗಮಿಸಿದ ಹಿನ್ನಲೆಯಲ್ಲಿ, ಸಮಾವೇಶದ ಸ್ಥಳ ತುಂಬಾ ಕಿರಿದ್ದಾಗಿದ್ದರಿಂದ ಜನತೆ ದೂರದಿಂದ ನಿಂತು ಮೋದಿ ಮಾತುಗಳನ್ನ ಆಲಿಸಿದರು.