ಲೋಕದರ್ಶನ ವರದಿ
ಇಂಡಿ 18: ಮಹಾತ್ಮಾ ಗಾಂಧಿಜೀ ರಾಮರಾಜ್ಯದ ಕನಸು ನನಸಾಗಬೇಕಾದರೆ ಹಳ್ಳಿಗಳು ಅಭಿವೃದ್ದಿಯಾದಾಗ ಮಾತ್ರ ಸಾಧ್ಯವಾಗುತ್ತದೆ ಎಂದು ಶಾಸಕ ಯಶವಂತ್ರಾಯಗೌಡ ಪಾಟೀಲ ಹೇಳಿದರು.
ತಾಲೂಕಿನ ಸಾತಲಗಾಂವ ಪಿ.ಆಯ್ ಗ್ರಾಮದಲ್ಲಿ ಹಮ್ಮಿಕೊಂಡ ಜಿಲ್ಲಾ ಪಂಚಾಯತ ವಿಜಯಪೂರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ವಿಜಯಪೂರ ಇವರ ಸಂಯೋಗದಲ್ಲಿ ಇಂಡಿ ತಾಲೂಕಿನ ಬುಂಯ್ಯಾರ ಇತರೆ 11 ಗ್ರಾಮಗಳಿಗೆ ಬಹುಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈ ಭಾಗದಲ್ಲಿ ಕುಡಿಯುವ ನೀರಿನ ತೊಂದರೆಯನ್ನು ಪರಿಗಣಿಸಿ ಸುಮಾರು 31.58.24 ಲಕ್ಷಗಳ ಬಹುಹಳ್ಳಿಕುಡಿಯುವ ನೀರಿನ ಯೋಜನೆ 11 ಗ್ರಾಮಗಳಿಗೆ ಅನುಕೂಲವಾಗಲಿ ಎಂದು ಈ ಯೋಜನೆ ಮಂಜೂರಾತಿ ತರಲಾಗಿದೆ. ಈಗಾಗಲೆ ಹೋತರ್ಿ ಭಾಗದ ಬೇಸಿಗೆ ಬಂತೆಂದರೆ ಸಾಕು ಅಲ್ಲಿನ ಜನರ ಪರಿಸ್ಥಿತಿ ಹೇಳತೀರದಾಗಿತ್ತು ಇದನ್ನು ಕಂಡು ನಾನು ಅಣಚಿ ಪ್ಯಾಕೇಜ ಮುಖಾಂತರ ಭಿಮಾನದಿಯಿಂದ ನೀರು ಲಿಪ್ಟ ಮಾಡಿ ಬಹು ಹಳ್ಳಿಗಳಿಗೆ ಶುದ್ದ ಕುಡಿಯುವ ನೀರು ಒದಗಿಸಲಾಗಿದೆ. ಅಲ್ಪ ಪ್ರಮಾಣದಲ್ಲಿ ಆ ಭಾಗದ ಜನರಿಗೆ ಅನುಕೂಲವಾಗಿದೆ. ಇಂದು ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗೆ ಭೂಮಿಯನ್ನು ದಾನಮಾಡಿರುವ ಕಟಕದೊಂಡ ಕುಟುಂಬಕ್ಕೆ ಎಷ್ಟು ಹೊಗಳಿದರೂ ಸಾಲದು ಮನುಷ್ಯನಲ್ಲಿ ದಾನ ಧರ್ಮ ಮಾಡುವ ಗುಣ ಬೆಳೆಸಿಕೊಳ್ಳಬೇಕು.
ಭೂಧಾನ ಮಾಡಿದ ಮಹನೀಯರು ಒಂದು ರೀತಿಯ ದೈಹಿಕವಾಗಿ ಅಂಗವಿಕಲನಾಗಿದ್ದರೂ ಸಹಿತ ಮನಸ್ಸು ಮಾತ್ರ ಹೃದಯ ಶ್ರೀಮಂತಿಕೆಯುಳ್ಳದ್ದು ಇಂತಹವರಿರುವರಿಂದಲೇ ಪುಣ್ಯದ ಕಾರ್ಯಗಳು ನಡೆಯುತ್ತವೆ. ಕೇವಲ ಸರಕಾರಗಳಿಂದಲೆ ಎಲ್ಲವು ಆಗುತ್ತವೆ ಎನ್ನುವದು ತಪ್ಪು ಜನರು ಸಹಿತ ಸಹಕಾರ ನೀಡಬೇಕು ಎಂದರು. ಇಂದು ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಇರುವದರಿಂದ ರೈತರ ಸಾಲ ಮನ್ನಾ ಮಾಡುವ ಕುರಿತು ಮುಖ್ಯ ಮಂತ್ರಿಗಳು ಹಾಗೂ ನಮ್ಮ ವರಿಷ್ಠರ ಚಿಂತನೆ ಇರುವದರಿಂದ ರೈತರಿಗೆ ಒಳ್ಳೆಯದಾಗಲಿ ಎಂಬ ಆಶಾಭಾವ ಹೊಂದಲಾಗಿದೆ. ಈ ಸರಕಾರದಲ್ಲಿ ಹಿಂದಿನಂತೆ ಮತಕ್ಷೇತ್ರಕ್ಕೆ ಅನುಧಾನ ತರುತ್ತೆನೆ ಎಂಬ ವಿಶ್ವಾಸ ಬೇಡ ಆದಷ್ಟು ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಭರವಸೆ ನೀಡಿದರು.
ಗೋಳಸಾರದ ಅಭಿನವ ಪುಂಡಲಿಂಗ ಶ್ರೀಗಳು, ಮದ್ದಾನೆ ಮಹಾರಾಜರು, ಈರಯ್ಯಾ ಶ್ರೀಗಳು ಸಾನಿಧ್ಯವಹಿಸಿದರು.
ತಾ.ಪಂ ಅಧ್ಯಕ್ಷ ಶೇಖರ ನಾಯಕ, ಎಸ್.ಎಸ್.ಚನಗೊಂಡ, ಜೀತಪ್ಪ ಕಲ್ಯಾಣಿ, ಸಿದ್ದನಗೌಡ ಬಿರಾದಾರ, ಮಹಾದೇವ ಗುಡ್ಡಡಗಿ, ಹಣಮಂತ ಖಂಡೆಕಾರ, ಸಿದ್ದಪ್ಪ ತಳವಾರ, ಪಿ.ಎಸ್.ಆಯ್ ಎಂ.ಎನ.ಸಿಂಧೂರ, ಸದಾಶಿವ ಪ್ಯಾಟಿ, ತಮ್ಮಣ್ಣಾ ಪೂಜಾರಿ, ಶಿವಯ್ಯಾ ಮಠಪತಿ, ಧನರಾಜ ಮುಜಗೊಂಡ, ಕಾಂತು ಲಿಂಗದಳ್ಳಿ, ಸಾಯಬಣ್ಣ ಪಾಟೀಲ, ಗುತ್ತಿಗೆದಾರ ಏಕನಾಥ ಲಾಡಗೆ, ಬಿ.ಎಫ್.ನಾಯ್ಕರ, ಸಂಗಮೇಶ ಹೋಸೂರ, ವೇದಿಕೆಯಲ್ಲಿದ್ದರು. ತಮ್ಮಣ್ಣಾ ತಡ್ಲಗಿ, ವಿರೂಪಾಕ್ಷ ಪಠಪತಿ, ಅಲ್ಲಾಹಿನ ಮುಲ್ಲಾ, ಬುಡ್ಡೆಸಾಬ ಕಾರಜೋಳ, ಮಲ್ಲು ಪಾಟೀಲ, ಗೌಡಪ್ಪಗೌಡ ಪಾಟೀಲ, ಕೆಂಚು ಪಡಗಾನೂರ ಸೇರಿದಂತೆ ಅನೇಕ ಗ್ರಾಮಸ್ಥರು ಇದ್ದರು.