ಲೋಕದರ್ಶನ ವರದಿ
ಗಜೇಂದ್ರಗಡ 13: ಹೊಳೆಯಾಗಿ ಹರಿಯುತ್ತಿರುವ ಮಂಗಳಗುಡ್ಡ ಜನತಗೆ ನೇರವಾದ ಗಜೇಂದ್ರಗಡ ಯುವಕರು.
ನಮ್ಮ ಜಿಲ್ಲೆಯಲ್ಲಿ ಇಂತಹ ಸಂಗತಿ ಬಂದಿದ್ದು ನಿಜಕ್ಕೂ ಮನಃಕಲಕುವಂತಹ ಸಂಗತಿ ಯಾಗಿದೆ ಇಂತಹ ಪರಿಸ್ಥಿತಿಯನ್ನು ಕಂಡು ನಮ್ಮ ಗೆಳೆಯರ ಬಳಗದಿಂದ ನೇರೆ ಸಂತ್ರಸ್ತರಿಗೆ ನೆರವಿಗೆ ಬಂದಿದ್ದು ಖುಷಿ ತಂದಿದೆ ಎಂದು ಶ್ರೀಕಾಂತ ಕಂಬಾರ ಹೇಳಿದರು.
ಗದಗ ಜಿಲ್ಲೆಯ ನರಗುಂದ, ರೋಣ ತಾಲೂಕು ಸೇರಿದಂತೆ 27 ಗ್ರಾಮಗಳ ಜನರು ಪ್ರವಾಹಕ್ಕೆ ಸಿಲುಕಿ ತಮ್ಮ ನೆಲೆಯನ್ನ ಕೆಳೆದುಕೊಂಡಿದ್ರು. ಅದರಲ್ಲಿ ಗ್ರಾಮಗಳ ಗಂಜಿ ಕೇಂದ್ರಗಳಲ್ಲಿ ಇರುವ ಸುಮಾರು 500 ನಿರಾಶ್ರಿತರಿಗೆ ಚಾದಾರ, ಚಾಪಿ, ಬೆಡಸಿಟ್ಗಳನ್ನು ವಿತರಣೆ ಮಾಡಿ ಮಾನವೀಯತೆ ಮೆರೆದ್ರು. ಮಂಗಳಗುಡ್ಡ ಹಿರಿಯರು ಮಾತನಾಡಿ ಗಜೇಂದ್ರಗಡದ ಯುವಕರು ವತಿಯಿಂದ ನಮಗೆ ಅತಿ ಹೆಚ್ಚು ಸಹಾಯವಾಗಿದೆ ಬೆಲ್ಲ,ಅಕ್ಕಿ ರೊಟ್ಟಿ, ಎಣ್ಣೆ, ಚದರ, ಸ್ವೆಟರ್ ಹಾಗೂ ಮುಂತಾದವುಗಳನ್ನು ನಮಗೆ ಒದಗಿಸಿಕೊಟ್ಟಿದ್ದಾರೆ ಹಾಗೆ ಅವರಿಗೆ ಆ ದೇವರು ಚೆನ್ನಾಗಿ ಇಡಲಿ ಎಂದು ಗ್ರಾಮಸ್ಥರ ಪರವಾಗಿ ಕೇಳಿಕೊಳ್ಳುತ್ತೇನೆ. ಶ್ರೀಕಾಂತ,ಸುರೇಶ್, ಶಂಕರ್, ವಿನಾಯಕ, ಚಂದ್ರು, ಶಿವು, ರಮೇಶ್, ಸುನಿಲ್, ಕಿರಣ್, ಅರುಣ್, ಗಣೇಶ್, ನಾರಾಯಣ್ ಉಪಸ್ಥಿತರಿದ್ದರು.