ಗದಗ ಜಿಲ್ಲಾ ವಕೀಲರ ಸಂಘದ ಸನ್ 2025-27 ರ ಪದಾಧಿಕಾರಿಗಳ ಚುನಾವನೆಯ ಅಂತಿಮ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಗದಗ 6:- ಜಿಲ್ಲೆಯ ಪ್ರತಿಷ್ಟಿತ ನ್ಯಾಯವಾದಿಗಳ ಸಂಘವಾದ ಗದಗ ಜಿಲ್ಲಾ ವಕೀಲರ ಸಂಘದ ಪ್ರಸಕ್ತ 2025-27 ನೇ ಸಾಲಿನ ಪದಾಧಿಕಾರಿಗಳ ಚುನಾವಣಾ ಪ್ರಕ್ರಿಯೆಗೆ ಈಗಾಗಲೇ ಅಧಿಕೃತವಾಗಿ ಚಾಲನೆ ನೀಡಲಾಗಿರುತ್ತದೆ. ಉತ್ಸಾಹಿ ವಕೀಲ ಭಾಂದವರು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದು ಅದರಲ್ಲಿ ಪ್ರಮುಖವಾಗಿ ಅಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ಅಂಗಡಿ ವಿಜಯಲಕ್ಷ್ಮಿ ರಾಚಪ್ಪ, ರಾಜಶೇಖರ್ ಗಂಗಪ್ಪ ಕಲ್ಲೂರ್, ಎಮ್ ಎ ಮೌಲ್ವಿ, ಉಪಾಧ್ಯಕ್ಷ ಸ್ಥಾನಕ್ಕೆ ಕಳಕನಗೌಡ ರಾಯನಗೌಡ ಚೆನ್ನಪ್ಪಗೌಡರ, ಮುದಕಪ್ಪ ಅಂದಪ್ಪ ಸಂಗನಾಳ, ಗೀರೀಶ್ ಮಾರ್ತಾಠಪ್ಪ ಸಂಶಿ, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಮಹಾಂತೇಶ ಅಯ್ಯಪ್ಪ ನಾಯ್ಕರ್, ಮಂಜುನಾಥ್ ಬಸಪ್ಪ ಮತ್ತೂರ, ಜೋಸೆಫ್ ಅಂತೋನಿ ಉಧೋಜಿ, ಬಸವರಾಜ ಶಿವಪ್ಪ ಬಳ್ಳಾರಿ, ಸಹ ಕಾರ್ಯದರ್ಶಿ ಸ್ಥಾನಕ್ಕೆ ಚನ್ನಾರೆಡ್ಡಿ ಬಸವರಾಜ ಗೂಳರೆಡ್ಡಿ, ಅಂದನಪ್ಪ ಈಶ್ವರ್ಪ ಬಂಕಾಪೂರ, ಬಸವರಾಜ ತಿಪ್ಪಣ್ಣ ಬೀರಳ್ಳಿ, ಗುದ್ದೀನ ಮಂಜುನಾಥ್ ಚಂದ್ರಶೇಖರ, ಖಜಾಂಚಿ ಸ್ಥಾನಕ್ಕೆ ಮಹಿಳಾ ವಕೀಲರಾದ ಶ್ರೀಮತಿ ಮಂಜುಳಾ ನೀಲಕಂಠಯ್ಯ ದೇಸಾಯಿಮಠ, ಹಾಗೂ ಶ್ರೀಮತಿ ಶೈಲಜಾ ಬಸಯ್ಯ ಹಿರೇಮಠ ರವರು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿರುತ್ತಾರೆ ಎಂದು ಚುನಾವಣಾ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿರುತ್ತದೆ
ಇದೇ ದಿನಾಂಕ 26/04/2025 ರಂದು ಬೆಳಿಗ್ಗೆ 09 ಘಂಟೆಯಿಂದ ಸಾಯಂಕಾಲ 04 ಘಂಟೆಯವರೆಗೆ ಮತದಾನ ಜರುಗುವದು. ಸದರ ಚುನಾವಣೆಯ ಮತ ಎಣಿಕೆ ಹಾಗೂ ಚುನಾವಣೆ ಫಲಿತಾಂಶವನ್ನು ಅಂದಿನ ದಿನವೇ ಸಾಯಂಕಾಲ 5 ಘಂಟೆಯ ನಂತರ ಪ್ರಕಟಿಸಲಾಗುವದು. ಎಂದು ಗದಗ ಜಿಲ್ಲಾ ವಕೀಲರ ಸಂಘದ ಚುನಾವಣಾ ಅಧಿಕಾರಿಗಳಾದ ಎಮ್ ಎ ಬಿಜಾಪೂರ ವಕೀಲರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.