ಗದಗ 12: ಗದಗ ಜಿಲ್ಲೆಯಲ್ಲಿ ಬೇಸಿಗೆ ಸಂಭ್ರಮ ಸ್ವಲ್ಪ ಓದು ಸ್ವಲ್ಪ ಮೋಜು ಆಧಾರಿತ ಶೈಕ್ಷಣಿಕ ಕಾರ್ಯಕ್ರಮದ ಅನುಷ್ಟಾನ ಕುರಿತು ಕಚೇರಿಯಲ್ಲಿಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ ಅಧ್ಯಕ್ಷತೆಯಲ್ಲಿಂದು ಪೂರ್ವಭಾವಿ ಸಭೆ ಅವರ ಕಚೇರಿಯಲ್ಲಿಂದು ಜರುಗಿತು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿಗಳು ಮತ್ತು ಶಿಕ್ಷಕರುಗಳು ಬೇಸಿಗೆ ಸಂಭ್ರಮ ಶಿಬಿರದಲ್ಲಿ ಪಾಲ್ಗೊಳ್ಳುವಂತೆ 6 ಹಾಗೂ 7ನೇ ತರಗತಿ ಮಕ್ಕಳನ್ನು ಪ್ರೇರೇಪಿಸಬೇಕು. ಜಿಲ್ಲೆಯ ಎಲ್ಲ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಪಿ.ಡಿ.ಓ, ಹಾಗೂ ಗ್ರಾ. ಪಂ. ವ್ಯಾಪ್ತಿಯ ಸಿಬ್ಬಂದಿಯವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮಂಜುನಾಥ ಚವ್ಹಾಣ ನುಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಎನ್.ಎಚ್. ನಾಗೂರ ಮಾತನಾಡಿ ಸರ್ಕಾರದಿಂದ ಘೋಷಣೆ ಮಾಡಲ್ಪಟ್ಟ ಬರಪೀಡಿತ ಪ್ರದೇಶದ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ಯೋಜನೆಯನ್ನು ಜೊತೆಗೆ ಬೇಸಿಗೆ ಸಂಭ್ರಮ ಶಿಬಿರವನ್ನು ಡಯಟ್ ಮಾಹಿತಿ ಆಧರಿಸಿ 150 ಕ್ಕಿಂತ ಹೆಚ್ಚು ದಾಖಲಾತಿಯಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಏರ್ಪಡಿಸಲಾಗುವುದು ಎಂದರು. 5,6,ನೇ ತರಗತಿ ಓದಿ ಉತ್ತೀರ್ಣರಾಗಿರುವ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವರು. 25 ಮಕ್ಕಳಿಗೆ ಒಬ್ಬರು ಶಿಕ್ಷಕರಂತೆ ಎಪ್ರಿಲ್ 24 ರಿಂದ ಮೇ 28 ರವರೆಗೆ ಮುಂಜಾನೆ 10-00 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಶಿಬಿರ ನಡೆಸಲಾಗುವುದು. ನಯೀತಾಲೀಮ್ ಬೇಸಿಗೆ ಶಿಬಿರದಲ್ಲಿ ಗುಂಪು ಚಟುವಟಿಕೆಗಳು ನಡೆಯುವವು. ಓದು, ಅಂಕ ಗಣಿತ ಜೊತೆಯಲ್ಲಿ ಅನೇಕ ಚಟುವಟಿಕೆ ಮೂಲಕ 5 ವಾರಗಳ ಕಾಲ ಈ ಶಿಬಿರ ನಡೆಯಲಿದೆ. ಕುಟುಂಬ, ನೀರು, ಆಹಾರ, ಆರೋಗ್ಯ, ನೈರ್ಮಲ್ಯ, ಪರಿಸರ ವಿಷಯಗಳ ಕುರಿತು ವಾರಕ್ಕೆ ಒಂದು ವಿಷಯದಂತೆ ಮಕ್ಕಳಿಗೆ ಮಾಹಿತಿ ನೀಡಲಾಗುತ್ತಿದೆ. ಪ್ರತಿ ವಾರದ ಆರನೇ ದಿನ ಮುಕ್ತ ದಿನ ಎಂದು ಗುರುತಿಸಿದ್ದು, ಹಾಡು, ಆಟ, ಕಥೆ ಹೇಳುವುದು, ಭಾಷಣ ನೃತ್ಯ ಪ್ರದರ್ಶನ, ಚಿತ್ರಕಲೆ ಮತ್ತು ನಾಟಕ, ಪೇಪರ್ ಕ್ರಾಫ್ಟರ್ ತರಕಾರಿಗಳಿಂದ ಕಲೆ ಇತ್ಯಾದಿ, ಸ್ಥಳೀಯ ಜಾನಪದ ಕಲಾವಿದರಿಂದ ಜಾನಪದ ನೃತ್ಯ ಹಾಗೂ ಗೀತೆಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಾವಿದರಿಂದ ಹೇಳಿಸಿ ಮಕ್ಕಳಿಗೆ ಜಾನಪದ ಕಲೆಗಳನ್ನು ಪರಿಚಯಿಸಲಾಗುವುದು. ಗದಗ ಜಿಲ್ಲೆಯಲ್ಲಿ ಒಟ್ಟು 230 ಬೇಸಿಗೆ ಶಿಬಿರವನ್ನು ನಡೆಸಲಾಗುತ್ತಿದ್ದು 6 ನೇ ವರ್ಗ 7763 , 7 ನೇ ವರ್ಗದ 8321 ಒಟ್ಟು 16084 ವಿದ್ಯಾಥರ್ಿಗಳು ಶಿಬಿರದಲ್ಲಿ ಭಾಗವಹಿಸಲಿದ್ದು 460 ಶಿಕ್ಷಕರು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಎನ್.ಎಚ್. ನಾಗೂರ ಸಭೆಗೆ ತಿಳಿಸಿದರು.
ಡಯಟ್ನ ಪ್ರಾಂಶುಪಾಲ ಎಚ್.ಎಂ. ಖಾನ್ ಹಾಗೂ ಉಪಪ್ರಾಚಾರ್ಯರು, ಉಪನ್ಯಾಸಕರು, ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಅಕ್ಷರ ದಾಸೋಹ ಅಧಿಕಾರಿಗಳು, ಸಂಪನ್ಮೂಲ ಅಧಿಕಾರಿಗಳು, ಸಮನ್ವಯಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.