ಪ್ರವೀಣ್ ಘೋರ್ಪಡೆ
ತಾಳಿಕೋಟೆ, 9: ದೊಡ್ಡ ಕತ್ತಲೆಯ ಆಗಸಕ್ಕೆ ದೀಪ ಹಚ್ಚುವ ತವಕ ಈ ಯುವಕರಿಗೆ ಅಷ್ಟೇ ಏಕೆ... ಯಾರಿಗೂ ಬಲು ಪ್ರೀಯ. ತಾರೆಗಳ ಕಾರ್ಗತ್ತಲ ತೋಟದ ಬಾನಿಗೆ ಮಿಣುಕು ದೀಪ ಹಚ್ಚುವ ತವಕ.
ದೀಪಾವಳಿ ಈ ದಿನಗಳಲ್ಲಿ ಗಲ್ಲಿ ಗಲ್ಲಿಗಳಲ್ಲಿ ಪಡ್ಡೆ ಹುಡುಗರ ಮೋಜು ಚಕಾಕಾರದ ಬಣ್ಣ ಹಾಳೆಗಳನ್ನು ಹಚ್ಚಿ ಒಳಗೆ ಹೊಗೆ ತುಂಬಿ, ಎಣ್ಣೆ ಮುಳಗಿಸಿದ ಕಕ್ಕಡಕ್ಕೆ ದೀಪ ಹಚ್ಚಿ ಮೇಲಕೆತ್ತಿ ಹಿಡಿದಾಗ ಯುವಕರಿಗೆ ಗಾಳಿಯಲ್ಲಿ ತೇಲಾಡಿದ ಅನುಭವ....
ಹಾಗೆ ಹೋ.... ಎಂಬ ಉದ್ಗಾರ.... ಗ್ರಾಮೀಣ ಪ್ರದೇಶಗದಲ್ಲಿ ಹೊಸ ಸೊಗಡನ್ನು ಕಾಪಿಟ್ಟುಕೊಂಡು ಬಂದ ಸಂಪ್ರದಾಯದ ಬನಿ ಇದು. ದೀಪಗಳ ಹಬ್ಬದಲ್ಲಿ ಕತ್ತಲೆಯನ್ನು ಬೇದಿಸಲು. ದೀಪದ ಬೆಳಕಿನೊಂದಿಗೆ ಆಟವಾಡುವ ಪರಿಯಿದು.
ಭರಮನ ಹಬ್ಬದಿಂದ ಆರಂಭವಾದ ದೀಪಾವಳಿ ಪರ್ವ ಅಮವಾಸ್ಯೆ ಪ್ರತಿಪದೆ ಹೀಗೆ ಸಾಗುತ್ತಲೇ ಇರುವಾಗ ಸಿಹಿ ಊಟ ದೇಹಕ್ಕಾದರೆ ಮನಸ್ಸಿನ ಮುದಕ್ಕಾಗಿ ಆಗಸದೆತ್ತರಕ್ಕೆ ಹಾರಿ ಬಿಡುವ ತವಕ.
ತಾಳಿಕೋಟೆಯ ಗಲ್ಲಿ ಗಲ್ಲಿಗಳಲ್ಲಿ ಈ ಸಂಭ್ರಮ ಮನೆ ಮಾಡಿದೆ. ಒಂದೊಂದು ಓಣಿಯಲ್ಲಿ ಒಂದಿಷ್ಟು ಹುಡಗರ ಗುಂಪು ಮದ್ಯಾಹ್ನದ ಹೊತ್ತಿನಲ್ಲಿ ಆಕಾಶ ಬುಟ್ಟಿ ಸಿದ್ದಪಡಿಸಿಕೊಳ್ಳುತ್ತಾರೆ. ಸೂರ್ಯ ಕಂತಿ ಸಂಜೆಯ ಮಬ್ಬುಗವಿಯುತ್ತಲೇ ಹುಡುಗರ ದಂಡು ಮನೆಯಿಂದ ಹೊರಬೀಳುತ್ತದೆ.
ಲೋಬಾನ ಹಾಕಿಯೋ ಇಲ್ಲವೇ ಬೆಂಕಿ ಮಾಡಿ ಹಸಿ ತಪ್ಪಲು ಹಾಕಿ ಅದೇ ಹೊಗೆಯನ್ನು ತುಂಬಿಸಿಯೋ ಆ ಆಕಾಶ ಬುಟ್ಟಿಯನ್ನು ತುಂಬಿಸುತ್ತಾರೆ ಅದು ಹಾಗೇ ಮೇಲಕ್ಕೆ ಎತ್ತಿ ಹಿಡಿದವರಿಗೆ ತಾವೇ ಆಗಸದಕ್ಕೆ ಬಿಟ್ಟೆವೆಂಬ ಹಮ್ಮು. ಕೆಳಗೆ ಕುಳಿತವನೊಬ್ಬ ಜೋಪಾನದಿಂದ ಹಾಳೆಗಳಿಗೆ ಉರಿ ತಾಕದಂತೆ ಒಳಗೆ ಹಾಕಿದ ಅರಿವೆ ಸುತ್ತಿದ ಉಕ್ಕಡಕ್ಕೆ ಬೆಂಕಿ ತಗುಲಿಸಿದ್ದೇ ತಡ ಆಗಸಕ್ಕೇರುವ ತವಕದಲ್ಲೂ ಆಕಾಶ ಬುಟ್ಟಿ ಹೈಕಳುಗಳ ಕೈಯಿಂದ ಬಿಡಿಸಿಕೊಂಡು ಮೇಲಕ್ಕೇರುತ್ತಲೇ ಸಾಗುತ್ತದೆ.
ಈ ಉಡ್ಡಯನದ ಸಂದರ್ಬ ಮಕ್ಕಳಿಗಷ್ಟೇ ಏಕೆ... ಎಲ್ಲರಿಗೂ ಮೋಜು. ಅಷ್ಟೇ ಕುತುಹಲ. ಬಾನಿಗೆ ಹಾರಿ ಹೋದ ದೀಪದ ಆಕಾಶ ಬುಟ್ಟಿ ಚಿಕ್ಕದಾಗುತ್ತಲೇ ಸಾಗುತ್ತದೆ. ಕೆಲವರು ಆ ದೃಶ್ಯವನ್ನು ಕಣ್ತುಂಬಿಕೊಳ್ಳಲು ಓಡೋಡಿ ಹೋಗುವದುಂಟು.
ಎರಡು ಅಡಿಯಿಂದ ಎಂಟು ಅಡಿಯವರೆಗೂ ದೊಡ್ಡದಾದ ಆಕಾಶಬುಟ್ಟಿ ಮಾಡಿ ಹಾರಿ ಬಿಡುತ್ತಾರೆ. ಹಗಲಿಗಿಂತ ಕತ್ತಲೆಯೇ ದೊಡ್ಡದಾಗುವೀ ದಿನಗಳಲ್ಲಿ ಬಾನೆತ್ತರಕ್ಕೆ ಹಾರಿ ಬಿಡುವ ಸಾಂಪ್ರದಾಯಗಳು ದೇಶದೆಲ್ಲಡೆ ಕಾಣುತ್ತೇವೆ ಗ್ರಾಮೀಣ ಪ್ರದೇಶದಲ್ಲೂ ಈ ಮೋಜು ಇದೆ. ಧಾವಂತ ಬಧುಕಿನಲ್ಲಿ ಕಳೆದು ಹೋಗುತ್ತಿರುವ ಈ ದಿನಗಳಲ್ಲಿ ಇಂತಹ ಮೋಜು ಎಲ್ಲರಿಗೂ ಸಂತಸ ನೀಡುತ್ತದೆ ಎನ್ನುತ್ತಾರೆ ಛಾಯಾಗ್ರಾಹಕ ರಾಜು ಅಲ್ಲಾಪೂರ.
ಅಪಾಯವೂ ಇದೆ. ಬೆಂಕಿ ಹಚ್ಚುವಾಗಲೇ ಆಕಾಶಬುಟ್ಟಿಗೆ ಬೆಂಕಿ ತಗುಲಿ ಸುಟ್ಟು ಹೋಗುವ ಸಂದರ್ಬಗಳೂ ಇಲ್ಲದಿಲ್ಲ. ಪಡ್ಡೆ ಹೈಕಳ ಕೈಯ್ಯಿಂದ ಬಿಡುಗಡೆಗೊಂಡು ಉಡ್ಡಯನಗೊಂಡ ಆಕಾಶ ಬುಟ್ಟಿ ಗಾಳಿಗೆ ಓಲಾಡುತ್ತಲೇ ಸಾಗಿ ಬಣವಿಗಳ ಮೇಲೆ ಬಿದ್ದಿರುವ ಉದಾಹರಣೆಗಳೂ ಇವೆ.
ಏನೇ ಆದರೆ ಅಪಾಯಕ್ಕಿಂತ ಕಣ್ಣಿಗೆ ಹಬ್ಬವನ್ನುಂಟು ಮಾಡುವ ಆಕಾಶಬುಟ್ಟಿಯೊಳಗೆ ದೀಪ ಹಚ್ಚಿ ಉಡ್ಡಯಿಸುವ ರೋಮಾಂಚಕಾರಿ ದೃಶ್ಯ ಕಾತರ್ಿಕ ಮಾಸದುದ್ದಕ್ಕೂ ನಡೆದೇ ಇರುತ್ತದೆ.