ಅರಳು ವಿಶೇಷ ಅಗತ್ಯತೆಯುಳ್ಳ ಬುದ್ದಿಮಾಂಧ್ಯ ಮಕ್ಕಳ ವಸತಿರಹಿತ ಶಾಲೆಯ ಮಕ್ಕಳಿಗೆ ಶನಿವಾರ ಉಚಿತ ವಿಶೇಷ ಆರೋಗ್ಯ ತಪಾಸಣೆ ಶಿಬಿರ

Free special health checkup camp on Saturday for Aralu special needs mentally retarded homeless sch

ಅರಳು ವಿಶೇಷ ಅಗತ್ಯತೆಯುಳ್ಳ ಬುದ್ದಿಮಾಂಧ್ಯ ಮಕ್ಕಳ ವಸತಿರಹಿತ ಶಾಲೆಯ ಮಕ್ಕಳಿಗೆ ಶನಿವಾರ ಉಚಿತ ವಿಶೇಷ ಆರೋಗ್ಯ ತಪಾಸಣೆ ಶಿಬಿರ 

ಶಿರಹಟ್ಟಿ 15 : ಲಕ್ಷ್ಮೇಶ್ವರ ಪಟ್ಟಣದ ಅರಳು ವಿಶೇಷ ಅಗತ್ಯತೆಯುಳ್ಳ ಬುದ್ದಿಮಾಂಧ್ಯ ಮಕ್ಕಳ ವಸತಿ  ರಹಿತ ಶಾಲೆಯ ಮಕ್ಕಳಿಗೆ ಹುಬಳ್ಳಿ ರೌಂಡ್ ಟೇಬಲ್ 35 ಹಾಗೂ ಹುಬ್ಬಳ್ಳಿ ಲೇಡೀಸ್ ಸರ್ಕಲ್ 45 ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಪಟ್ಟಣದ ಸೋಮೇಶ್ವರ ಸ್ಪಿನಿಂಗ್ ಮಿಲ್ ಆವರಣದಲ್ಲಿರುವ ಅರಳು ವಿಶೇಷ ಅಗತ್ಯತೆಯುಳ್ಳ ಬುದ್ದಿಮಾಂಧ್ಯ ಮಕ್ಕಳ ವಸತಿರಹಿತ ಶಾಲೆಯ ಮಕ್ಕಳಿಗೆ ಶನಿವಾರ ಉಚಿತ ವಿಶೇಷ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.  

ಹುಬಳ್ಳಿ ರೌಂಡ್ ಟೇಬಲ್ 35 ಹಾಗೂ ಹುಬ್ಬಳ್ಳಿ ಲೇಡೀಸ್ ಸರ್ಕಲ್ 45 ಇವರ ಸಹಯೋಗದೋಂದಿಗೆ ಈ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಮಕ್ಕಳ ನರರೋಗ ತಜ್ಞ ಡಾ.ರಾಘವೇಂದ್ರ ಅಮೋಘಿಮಠ ಮಾತನಾಡಿ ಮಗುವಿನ ಜನನದ ನಂತರ ಅವುಗಳಿಗೆ ಇರುವ ಸಣ್ಣ ಪುಟ್ಟ ದೋಷಗಳನ್ನು ನಿವಾರಿಸುವ ನಿಟ್ಟಿನಲ್ಲಿ ತಜ್ಞ ವೈದ್ಯರನ್ನು ಬೇಟಿ ಮಾಡಿ ಆರಂಭದ ಹಂತದಲ್ಲಿಯೇ ಅವುಗಳನ್ನು ನಿಯಂತ್ರಿಸಬಹುದಾಗಿದೆ. ನರಗಳ ಸರಿಯಾದ ಬೆಳವಣಿಗೆಯಾಗದೆ ಇರುವ ಹಿನ್ನಲೆಯಲ್ಲಿ ಬುದ್ದಿಮಾಂದ್ಯತೆ ಉಂಟಾಗಬಹುದಾಗಿದೆ. ಇವುಗಳಿಗೆ ಸರಿಯಾದ ಚಿಕಿತ್ಸೆ ದೊರೆತಲ್ಲಿ ಮಕ್ಕಳು ಸುಧಾರಣೆ ಕಾಣಬಹುದು, ಬುದ್ಧಿಮಾಂಧ್ಯ ಮಕ್ಕಳಲ್ಲಿ ವಿಶೇಷ ಅಗತ್ಯತೆ ಉಳ್ಳ ಮಕ್ಕಳ ಹೆಚ್ಚು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಅವರಲ್ಲಿರುವ ಸಮಸ್ಯೆಗಳನ್ನು ತಿಳಿದುಕೊಂಡು ಆರೈಕೆ ದೊರಕಿಸಿದಲ್ಲಿ ಹಂತ ಹಂತವಾಗಿ ಸ್ವಲ್ಪಮಟ್ಟಿನ ಸುಧಾರಣೆ ಕಾಣಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಸಂಸ್ಥೆಯ ಕಾರ್ಯದರ್ಶಿ ಹಾಗೂ ಮುಖ್ಯೋಪಾಧ್ಯಾಯನಿ ನೀಲಮ್ಮ ದಾಸಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆ ನಡೆದುಬಂದ ದಾರಿಯನ್ನು ವಿವರಿಸಿದರು.  ಶಿಬಿರದಲ್ಲಿ ದಂತ ವೈಧ್ಯರಾದ ಜೆನ್ಸಿ, ಽ ಅರ್ಚನಾ, ಕಿಶನ್‌ಅಭಿದ್, ಈಶ್ವರ, ಲಿಂಗರಾಜ ಪುಟ್ಟಣ್ಣವರ, ವಿಶೇಷ ಶಿಕ್ಷಕರಾದ  ಲಲಿತಾ ದಾಸಪ್ಪನವರ, ನೇತ್ರಾ, ಪ್ರಶಾಂತ ಎಸ್‌ಬಿ, ಅಕ್ಕಮ್ಮ ಕೊರದಾಳ, ಹೇಮಾವತಿ ಅಣ್ಣಿಗೇರಿ ಸಿಬ್ಬಂದಿಗಳು ಹಾಜರಿದ್ದರು. 57 ವಿಶೇಷ ಮಕ್ಕಳು ಹಾಗೂ ಪಾಲಕರು ಶಿಬಿರದ ಲಾಭ ಪಡೆದರು.