ಕುಂಟೋಜಿ ಗ್ರಾಮದಲ್ಲಿ ಉಚಿತ ವೈದ್ಯಕೀಯ ಶಿಬಿರ

Free medical camp at Kuntoji village


ಕುಂಟೋಜಿ ಗ್ರಾಮದಲ್ಲಿ ಉಚಿತ ವೈದ್ಯಕೀಯ ಶಿಬಿರ 

ಗಜೇಂದ್ರಗಡ 08: ಪ್ರತಿ ಗ್ರಾಮದಲ್ಲಿ ಜನರಿಗೆ ಅನಕೂಲವಾಗುವ ಆರೋಗ್ಯ ತಪಾಸಣೆ ಹಾಗೂ ಇತರೆ ಕಾರ್ಯಕ್ರಮಗಳು ನಡೆಯಬೇಕು ಆಗ ಊರು ಉದ್ದಾರವಾಗುತ್ತದೆ ಎಂದು ಗ್ರಾಮದ ಹಿರಿಯ ಮುದಿಯಪ್ಪ ಕರಡಿ ಹೇಳಿದರು. 

  ಗಜೇಂದ್ರಗಡ ಸಮೀಪದ ಕುಂಟೋಜಿ ಗ್ರಾಮದಲ್ಲಿ ದಿ. ಶಂಕ್ರ​‍್ಪ ನಾ. ಮಾಳೋತ್ತರ ಅವರ ಸ್ಮರಣಾರ್ಥವಾಗಿ ಎಸ್‌ಡಿಎಂ ನಾರಾಯಣ ಹೃದಯ ಚಿಕಿತ್ಸಾಲಯ ಧಾರವಾಡ, ವಾಸನ ಕಣ್ಣಿನ ಆಸ್ಪತ್ರೆ ಹುಬ್ಬಳ್ಳಿ, ಡಾ. ಆಶಾದೇವಿ ಎಸ್‌. ನಾಯಕ ದಂತ ತಪಾಸಣೆ, ಡಾ. ಶಿಲ್ಪಾ ಡಿ ಚಿಕಿತ್ಸಾಲಯ ಇವರ ಆಶ್ರಯದಲ್ಲಿ ಈಚೆಗೆ ಉಚಿತ ವೈದ್ಯಕೀಯ ಶಿಬಿರ ನಡೆಯಿತು. 

  ತಂದೆಯವರ ಪುಣ್ಯ ಸ್ಮರಣೆಯ ಅಂಗವಾಗಿ ಧಾರವಾಡ ಹಾಗೂ ವಿವಿಧ ಕಡೆಯಿಂದ ವೈದ್ಯರ ತಂಡಗಳನ್ನು ಆಹ್ವಾನಿಸಿ ಜನರ ಆರೋಗ್ಯ ಕಾಳಜಿ ಮಾಡಿದ್ದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ. ಇಂತಹ ಅನೇಕ ಕಾರ್ಯಗಳು ನಮ್ಮ ಊರಿನಲ್ಲಿ ಹಮ್ಮಿಕೊಂಡರೆ ನಾವೆಲ್ಲರೂ ಸಹಕಾರ ನೀಡುತ್ತೇವೆ ಎಂದರು. 

  ಹೋಮಿಯೋಪತಿ ವೈದ್ಯೆ ಡಾ. ಶಿಲ್ಪಾ ಡಿ ಮಾತನಾಡಿ, ಮನುಷ್ಯನ ಜೀವನದಲ್ಲಿ ಆರೋಗ್ಯವು ಬಹುದೊಡ್ಡ ಸಂಪತ್ತಾಗಿದ್ದು ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ಆರೋಗ್ಯಕರ ಸಮಾಜ ನಿರ್ಮಿಸಲು ಮುಂದಾಗಬೇಕು ಎಂದರು. ಇಂದಿನ ಒತ್ತಡದ ಜೀವನದಲ್ಲಿ ನಿತ್ಯ ಕಾರ್ಯ ನಿರ್ವಹಿಸುತ್ತಿದ್ದರಿಂದ ಮಾನಸಿಕ ಕಾಯಿಲೆಗಳು ಹಾಗೂ ಅನೇಕ ರೀತಿಯ ರೋಗಗಳು ಮನುಷ್ಯನನ್ನು ಕಾಡುತ್ತಿವೆ. ದೇಶದ ಜನರ ಸವಾಂರ್ಗೀಣ ಅಭಿವದ್ಧಿಗೆ ಆರೋಗ್ಯ ಅತ್ಯಂತ ಅವಶ್ಯಕವಾಗಿದೆ. ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಸೂಕ್ತ ಕಾಳಜಿ ವಹಿಸಬೇಕು. ನಿತ್ಯ ಸ್ವಲ್ಪಮಟ್ಟಿಗೆ ಯೋಗ, ವ್ಯಾಯಾಮ ಸೇರಿದಂತೆ ಇತರೆ ಕ್ರಿಯಾಶೀಲ ಚಟುವಟಿಕೆಯಲ್ಲಿ ಪಾಲ್ಗೊಂಡು ಕಾಯಕದ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದರು.  

  ಈ ವೇಳೆ ಕುಂಟೋಜಿ ಹಾಗೂ ವಿವಿಧ ಗ್ರಾಮದ 300ಕ್ಕೂ ಹೆಚ್ಚಿನ ಜನರು ಶಿಬಿರ ಲಾಭ ಪಡೆದರು. ಸರ್ಕಾರಿ ವೈದ್ಯೆ ಆಶಾದೇವಿ ಎಸ್‌. ನಾಯಕ, ಎಸ್‌ಡಿಎಂ ನಾರಾಯಣ ಹೃದಯ ಚಿಕಿತ್ಸಾಲಯದ ವೀರಯ್ಯ ಎನ್‌. ಎಚ್, ವಾಸನ ಕಣ್ಣಿನ ಆಸ್ಪತ್ರೆಯ ಮಾರುತಿ ಎನ್‌. ನಾಗರಹಳ್ಳಿ, ನೀಲಪ್ಪ ಮಾಳೋತ್ತರ, ಅಶೋಕ ಕಲ್ಲಿಗನೂರ, ಮುತ್ತಯ್ಯ ಕಾರಡಗಿಮಠ, ಬಾಲಪ್ಪ ಕರಡಿ, ಈರಣ್ಣ ಕಾರಡಗಿ, ತುಳಸಿನಾಥ ಮಾಳೋತ್ತರ, ಮಂತಿ ಮಾಳೋತ್ತರ, ಅಶೋಕ ಹಡಪಡ, ನಾನಪ್ಪ ಮಾಳೋತ್ತರ, ಆನಂದ ಬಂಕದ, ಮುದಕಪ್ಪ ದೊಣೆಗುಡ್ಡ, ಯಮನೂರ​‍್ಪ ಜೂಲಗುಡ್ಡ, ರಂಗನಾಥ ಡೊಳ್ಳಿ, ಗ್ರಾಮ ಪಂಚಾಯ್ತಿ ಚುನಾಯಿತ ಪ್ರತಿನಿಧಿಗಳು, ಸರ್ಕಾರಿ ಶಾಲೆಯ ಸಿಬ್ಬಂದಿಗಳು ಇದ್ದರು.