ಲೋಕದರ್ಶನ ವರದಿ
ಮೂಡಲಗಿ 16: ಶಿಕ್ಷಣ ಮತ್ತು ಸಾಮಾಜಿಕ ಕಳಕಳಿ ಹೊಂದಿದ ಈ ವೇದಿಕೆಯು ಪ್ರತಿಭಾವಂತ ವಿದ್ಯಾಥರ್ಿಗಳಿಗೆ ಜ್ಞಾನಾರ್ಜನೆಯ ಇಮ್ಮಡಿಗೊಳಿಸುವಂತಹ ರಾಜ್ಯದ ಇತಿಹಾಸ ಹೊಂದಿದ ಪುಸ್ತಕಗಳನ್ನು ನೀಡುವದು ನಿಜವಾದ ಪ್ರಾಮಾಣಿಕ ಸೇವೆಯಾಗಿದೆ ಎಂದು ಸೌ ಸುಮಿತ್ರಾದೇವಿ ಪಾಟೀಲ್ ಪ್ರೌಡ ಶಾಲೆಯ ಮುಖ್ಯೋಪಾಧ್ಯಾಯ ಜಿ.ಜೆ ಈಡನ್ನವರ ಹೇಳಿದರು.
ಅವರು ಸಮೀಪದ ಹಳ್ಳೂರ ಗ್ರಾಮದ ಸೌ ಸುಮಿತ್ರಾದೇವಿ ಪಾಟೀಲ್ ಪ್ರೌಡ ಶಾಲೆ ಮತ್ತು ಹಿರಿಯ ಪ್ರಾಥಮಿಕಯಲ್ಲಿ ಸ್ಥಳಿಯ ಶುಭೋದಯ ಸ್ವಾಭಿಮಾನಿ ಕನ್ನಡ ಸಂರಕ್ಷಣಾ ವೇದಿಕೆಯಿಂದ ಪರಿಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿಧ್ಯಾಥರ್ಿಗಳಿಗೆ ಉಚಿತ ಪುಸ್ತಕ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಮಕ್ಕಳಲ್ಲಿ ಸೊಕ್ತವಾದ ಜ್ಞಾನ ಅಡಿಗಿದೆ ಅದನ್ನು ಭಾಹ್ಯ ಪ್ರಂಪಚಕ್ಕೆ ಪರಿಚಯಿಸುವಂತ ಕಾರ್ಯವನ್ನು ಶಿಕ್ಷಕರು ಮಾಡುತ್ತಿದ್ದು ಇದಕ್ಕೆ ಸಂಘ ಸಂಸ್ಥೆಗಳ ಪ್ರೋತ್ಸಾಹ ಅತ್ಯಗತ್ಯವಾಗಿದೆ ಎಂದರು.
ಶುಭೋದಯ ಸ್ವಾಭಿಮಾನಿ ಕನ್ನಡ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಸುಭಾಸ ಕಡಾಡಿ ಮಾತನಾಡಿ, ಕನ್ನಡ ಮಾಧ್ಯಮದಲ್ಲಿ ಕಲಿತ ಮಕ್ಕಳು ವೀದೇಶದಲ್ಲಿ ಸಾಧನೆ ಮಾಡಿದ್ದಾರೆ ಇತ್ತಿಚಿನ ದಿನಗಳಲ್ಲಿ ಬೆಂಗಳೂರಿನ ಮಹಾನಗರ ಪಾಲಿಕೆ ಕಡ್ಡಾಯವಾಗಿ ವ್ಯಾಪಾರ ಮಳಿಗೆಗಳಿಗೆ ಕನ್ನಡದಲ್ಲಿಯೇ ನಾಮ ಫಲಕಗಳನ್ನು ಇರಬೇಕೆಂದು ವ್ಯಾಪಾರಸ್ಥರಿಗೆ ಆಜ್ಞೇ ಹೋರಡಿಸಿದ್ದಾರೆ ಇದು ಒಳೆಯ ಬೆಳವಣಿಗೆ, ರಾಜ್ಯದ ಎಲ್ಲಾ ಮಹಾನಗರ ಪಾಲಿಕೆ, ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯತ ಮತ್ತು ಗ್ರಾಮ ಪಂಚಾಯತಗಳಲ್ಲಿಯೋ ಈ ಆದೇಶ ಜಾರಿಯಾಗಬೇಕು ಎಂದರು. ಶಿಕ್ಷಕರಾದ ಎ.ಎಮ್ ಹೆಗ್ಗಾಣಿ, ಕೆ.ಕೆ ಗುಳೆದ, ವಿ ಆಯ್ ಹಳ್ಳಿ, ಎಮ್.ಎಮ್ ಅಟಮಟ್ಟಿ, ಸಿ.ಎಸ್ ಸಪ್ತಸಾಗರ, ವೇಧಿಕೆಯ ಶಿವಬಸು ಗಾಡವಿ ಮತ್ತು ಬಸವರಾಜ ಮುಧೋಳ ಉಪಸ್ಥಿತರಿದ್ದರು.