ಉಚಿತ ಸಾಮೂಹಿಕ ವಿವಾಹ : ಅದ್ದೂರಿ ಮೆರವಣಿಗೆ, ಸಂಭ್ರಮಿಸಿದ ವಧು-ವರರು

Free Mass Wedding: A grand procession, a celebrated bride and groom

ಉಚಿತ ಸಾಮೂಹಿಕ ವಿವಾಹ : ಅದ್ದೂರಿ ಮೆರವಣಿಗೆ, ಸಂಭ್ರಮಿಸಿದ ವಧು-ವರರು

ರಾಣಿಬೆನ್ನೂರು 23: ಸಮಾಜದಲ್ಲಿ ಬಡವರು ಶ್ರೀಮಂತರು ಎಲ್ಲರೂ ಇದ್ದಾರೆ. ಆದರೆ ದಾನ ಧರ್ಮದ ಗುಣಗಳನ್ನು ಅಳವಡಿಸಿಕೊಂಡವರು ಕೆಲವೇ ಜನರು ಮಾತ್ರ ಅಂತಹ ಪ್ರಾಣಿಗಳಲ್ಲಿ ಕಾಕಿ ಶ್ರೀನಿವಾಸ್ ಕುಟುಂಬವು ಒಂದಾಗಿದೆ ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು.       ಅವರು ರವಿವಾರ ಸಂಜೆ, ಸಿದ್ದೇಶ್ವರ ನಗರದ ಕಾಕಿ ಜನಸೇವಾ  ಸಂಸ್ಥೆಯ ಅರಮನೆ ಆವರಣದಲ್ಲಿ ಆಯೋಜಿಸಲಾಗಿದ್ದ, ವಿವಾಹ ಪೂರ್ವ ವಧು-ವರರ ಸಾರೋಟ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.ಇಂದಿನ ಆಧುನಿಕ ದಿನಮಾನಗಳಲ್ಲಿ ಜನಸಾಮಾನ್ಯರು ಮದುವೆ ಮಾಡುವುದೇ ಒಂದು ದೊಡ್ಡ ಸವಾಲು. ಇಂತಹ ಸಂದರ್ಭದಲ್ಲಿ ಉಚಿತ  ಸಾಮೂಹಿಕ ವಿವಾಹಗಳು ಅತ್ಯಂತ ಅಗತ್ಯ ಮತ್ತು ಸಹಕಾರಿಯಾಗಿವೆ ಎಂದರು.  

     ತಾವು ಕಂಡಂತೆ  ಕಾಕಿ ಕುಟುಂಬದ ಹಿರಿಯರಾದ, ದಿ, ದೊಡ್ಡ ನಾಗಪ್ಪ ತಿ. ಕಾಕಿ ಸಣ್ಣ ನಾಗಪ್ಪ ತಿ. ಕಾಕಿ ಅವರುಗಳು ತಮ್ಮ ಬದುಕಿನುದ್ದಕ್ಕೂ  ಬಡವರು, ದಿನದಲಿತರು. ಸಣ್ಣ ಸಣ್ಣ ವ್ಯಾಪಾರಸ್ಥರಿಗೆ, ಅತಿ ಕಡಿಮೆ ಬೆಲೆಯಲ್ಲಿ ಕಂತಿನಲ್ಲಿ ನಿವೇಶನ ಒದಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು. 5ನೇ ವರ್ಷದ ಸಾಮೂಹಿಕ ವಿವಾಹ ನೋಡಿದಾಗ, ಇವರೆಲ್ಲರೂ ಸೌಭಾಗ್ಯವಂತರು. ತಮ್ಮ ಮಗಳು ಮದುವೆ ಸಹ ಇದೇ ಸಾಮೂಹಿಕ ವಿವಾಹದಲ್ಲಿ ಮಾಡಬೇಕೆನ್ನುವ ಸಂಕಲ್ಪ ಮಾಡಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು.  

      ಮಾಜಿ ಶಾಸಕ ಅರುಣಕುಮಾರ ಪೂಜಾರ್ ಮಾತನಾಡಿ, ಕಾಕಿ ಕುಟುಂಬ ನಗರ ಜಿಲ್ಲೆ ರಾಜ್ಯಕ್ಕೆ ಹೆಮ್ಮೆ. ಕುಟುಂಬದ ಬಗ್ಗೆ ಮಾತನಾಡದವರು ಯಾರು ಇಲ್ಲ. ಅದಕ್ಕೆ ಕಾರಣ  ಅವರು ಮಾಡುವ  ಜನಪರ ಸೇವೆ ಜನಪರ ಸೇವೆ ಪ್ರಮುಖವಾಗಿದೆ ಎಂದು ಅವರು ಅಭಿನಂದಿಸಿದರು. 

         ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ಕಾಕಿ ಅವರು, ಹಿರಿಯರು ಹಾಕಿ ಕೊಟ್ಟಿರುವ ಮಾರ್ಗದರ್ಶನದಲ್ಲಿ ಸಾಗಿದ್ದೇವೆ. ಇದರಲ್ಲಿ ನನ್ನದೇನು ಇಲ್ಲ.ಎಲ್ಲವೂ ಭಗವಂತನ ಆಶೀರ್ವಾದ ಅಷ್ಟೇ ಎಂದ ಅವರು, ಸಮಾಜ ಸೇವೆಯಲ್ಲಿ ನಮ್ಮ ಕಾಕಿ ಮನೆತನದ ಕುಟುಂಬವು, ಆತ್ಮ ಸಂತೃಪ್ತಿಯನ್ನು ಪಡೆಯುತ್ತಿದ್ದೇವೆ. ಇದಕ್ಕೆ ಸರ್ವರ ಸಹಕಾರ ಅಗತ್ಯವಿದೆ ಎಂದರು.   

     ವೇದಿಕೆಯಲ್ಲಿ ಅಧ್ಯಕ್ಷ ರೂಪಾ, ವರ್ತಕ ಮಲ್ಲೇಶಪ್ಪ ಅರಿಕೇರಿ, ಶ್ರೀನಿವಾಸ ಕಾಕಿ,ಕುರುವಿನ ಶೆಟ್ಟಿ ಸಮಾಜದ ಮುಖಂಡರಾದ, ಹನುಮಂತಪ್ಪ ಅಮಾಸಿ, ಶಿವಾನಂದ ಸಾಲಗೇರಿ, ವೆಂಕಟೇಶ ಕಾಕಿ, ಲಕ್ಷ್ಮಣ ಹನುಮಂತಪ್ಪ ಕಾಕಿ, ಶಿವಾನಂದ ಬಾಗಾದಿ, ಶಿವಶಂಕರ್ ಕೆ, ಮಂಜುನಾಥ ಗೌಡ ಶಿವಣ್ಣನವರ, ನಾಗರಾಜ್ ಅಡ್ಮಿನಿ, ಮಂಜುನಾಥ ಹೊಸಪೇಟೆ, ಕೊಟ್ರೇಶಪ್ಪ ಎಮ್ಮಿ, ಪ್ರಭುಲಿಂಗಪ್ಪ ಹಲಗೇರಿ, ನಿತ್ಯಾನಂದ ಕುಂದಾಪುರ, ಶ್ರೀನಿವಾಸ್ ಸುರಹೊನ್ನಿ, ಶಿವಕುಮಾರ ಜಾದವ,ಕೆ. ಎಸ್‌. ನಾಗರಾಜ, ಸೇರಿದಂತೆ ಮತ್ತಿತರ ಗಣ್ಯರು, ಸಮಾಜದ ಮುಖಂಡರು, ವಧು-ವರರು ಮತ್ತು ಬಂಧು ಬಳಗದವರು ಉಪಸ್ಥಿತರಿದ್ದರು. ನೀಲಕಂಠೇಶ್ವರ ದೇವಸ್ಥಾನ ಸಭಾಂಗಣದಿಂದ ಹೊರಟ ಅದ್ದೂರಿ ಸಾರೂಟ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಹುಣಸಿಕಟ್ಟಿ ರಸ್ತೆಯ ಜೆಸಿವಾಣಿ ಅರಮನೆ, ಕಲ್ಯಾಣ ಮಂಟಪಕ್ಕೆ ಸಾಂಗತ್ಯ ಗೊಂಡಿತು.