44ನೇ ಬಿ.ಎನ್ ಇಂಡೋ ಟಿಬೇಟಿಯನ್ ಬಾರ್ಡರ ಪೊಲೀಸ್ ಪ್ರಾರಂಗಣದಲ್ಲಿ ಉಚಿತ ಕಾನೂನು ಸೇವಾ ಶಿಬಿರ

ಲೋಕದರ್ಶನ ವರದಿ

ಬೆಳಗಾವಿ 14: 44 ನೇ ಬಿ.ಎನ್ ಇಂಡೋ ಟಿಬೇಟಿಯನ್ ಬಾರ್ಡರ ಪೊಲೀಸ್ ಫೋರ್ಸ, ಅಲೈನ್ಸ ಅಂತರಾಷ್ಟ್ರೀಯ ಸೇವಾ ಸಂಸ್ಥೆ ಕೆ.ಎಲ್. ಬಿ.ವ್ಹಿ. ಬೆಲ್ಲದ ಕಾನೂನು ಮಹಾವಿದ್ಯಾಲಯ ಮತ್ತು ಜಿಲ್ಲಾ  ಕಾನೂನು ಸೇವಾ ಪ್ರಾಧಿಕಾರ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ದಿ: 13-10-2018 ರಂದು ಹಾಲಭಾವಿಯ .ಟಿ.ಬಿ.ಪಿ ಕ್ಯಾಂಪ ನ್ಯೂ ವಂಟಮೂರಿಯಲ್ಲಿರುವ 44 ನೇ ಬಿ.ಎನ್ ಇಂಡೋ ಟಿಬೇಟಿಯನ್ ಬಾರ್ಡರ ಪೊಲೀಸ್ ಇವರ ಪ್ರಾರಂಗಣದಲ್ಲಿ ಉಚಿತ ಕಾನೂನು ಸೇವಾ ಶಿಬಿರ ಏರ್ಪಡಿಸಲಾಯಿತು.

       ಅಂದಿನ ಸಮಾರಂಭದ ಮುಖ್ಯ ಅತಿಥಿಗಳಾಗಿ 6 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾದೀಶರು ಆದ ಶ್ರೀ. ಎಂ.ಜಿ.ಶಿವಳ್ಳಿಯವರು ಆಗಮಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಸಿವ್ಹಿಲ್ ನ್ಯಾಯಾಧೀಶ ಹಾಗೂ ಕಾರ್ಯದಶರ್ಿ, ಜಿಲ್ಲಾ  ಕಾನೂನು ಸೇವಾ ಪ್ರಾಧಿಕಾರ ಬೆಳಗಾವಿ ಶ್ರೀ. ಕಿರಣ ಕಿಣಿ ಅವರು ವಹಿಸಿದ್ದರು. 44 ನೇ ಬಿ.ಎನ್ ಇಂಡೋ ಟಿಬೇಟಿಯನ್ ಬಾರ್ಡರ ಪೊಲೀಸ್ದ ಡೆಪ್ಯೂಟಿ ಕಮಾಂಡೆಂಟರಾದ ರಾಕೇಶ ದತ್ತಾ ಅವರು ವ್ಯಾಸ ಪೀಠದಲ್ಲಿ ಅತಿಥಿಗಳಾಗಿದ್ದರು ಪ್ರಾರಂಭದಲ್ಲಿ ರಾಜೇಶ ಕುಮಾರರವರು ಸ್ವಾಗತ ಭಾಷಣ ಮಾಡಿ ಅತಿಥಿಗಳ ಪರಿಚಯ ಮಾಡಿ ಪುಷ್ಪ ಗುಚ್ಚ ನೀಡಿದರು.

       ಉಪನ್ಯಾಸಗಳ ವಿಷಯಗಳ ಬಗ್ಗೆ ಅಲೈನ್ಸ ಅಂತರಾಷ್ಟ್ರೀಯ ಸೇವಾ ಸಂಸ್ಥೆ ನಿದರ್ೆಶಕರು ಆದ ದಿನಕರ ಶೆಟ್ಟಿಯವರು ಸವರ್ೊಚ್ಛ ನ್ಯಾಯಾಲಯದ ತೀಪರ್ಿನಲ್ಲಿ ಅಂದರೆ "ಶ್ರೇಯಾ ಸಿಂಗಲ್ ವಿರುದ್ಧ "ಭಾರತ ಸರಕಾರ" ಮತ್ತು ಅಂದಿನ ಸವರ್ೊಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾದೀಶರಾಗಿದ್ದ  ತೀರಥ್ ಸಿಂಗ್ ಠಾಕೋರ ನಡೆಸಿದ 2015 ಒಂದು ಮಹತ್ವ ಪೂರ್ಣ ಭಾರತ ನೋಡಿದಂತಹ ಅಂತರಾಷ್ಟ್ರೀಯ ಸಮ್ಮೇಳನ  ಸೈಬರ ಲಾ, ಸೈಬರ ಕ್ರೈಮ್ ಮತ್ತು ಸೈಬರ ಸೆಕ್ಯೂರಿಟಿ ಇವುಗಳಲ್ಲಿ ಭಾರತದ ಪ್ರತಿನಿಧಿಗಳಲ್ಲದೆ ಹೊರ ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಅದಲ್ಲದೆ ಸವರ್ೊಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿದ್ದ ದೀಪಕ ಮೀಶ್ರಾರವರು ಎಲ್ಲಾ ರಾಜ್ಯದ ಹೈಕೋರ್ಟ ಮತ್ತು ಪೋಕ್ಸೊ ಕೇಸ್ ನಡೆಸುವ ನ್ಯಾಯಾಲಯಗಳು ಮತ್ತು ಹೆಣ್ಣು ಮಕ್ಕಳ ಮೇಲೆ ನಡೆದ ಲೈಂಗಿಕ .ದೌರ್ಜನ್ಯವನ್ನು ಕಡಿಮೆ ಮಾಡಲು ಇಬ್ಬರು ನ್ಯಾಯಾದೀಶರುಗಳಾದ .ಎಂ.ಕನವಿಲ್ಕರ, ಡಿ.ವಾಯ್ ಚಂದ್ರಚೂಡರವರನ್ನು ನೇಮಿಸಿ ಯಾವುದೆ  "ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮೇಲಿನ ತೀಪರ್ುಗಳನ್ನು ಯಾವುದೆ ರಾಜ್ಯ ಹೈಕೊರ್ಟ ಮತ್ತು ಕೆಳಗಿನ  ನ್ಯಾಯಾಲಯಗಳು ಇಂತಹ ಪ್ರಕರಣಗಳನ್ನು ಅತಿ ಶೀಘ್ರದಲ್ಲಿ ನಡೆಸಿ ಯಾವುದೇ ಒಂದು ಮುದ್ದತ್ತನ್ನು ನೀಡದೆ, ಮತ್ತು "ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ (12 ವರ್ಷದ ಒಳಗೆ) ಜರುಗಿದರೆ ಅಂತವರಿಗೆ ಗಲ್ಲು ಶಿಕ್ಷೆ ನೀಡಬೇಕೆಂಬ ಮಹತ್ವದ ತೀರ್ಪನ್ನು ಕೂಡ ನೀಡಿದರು ಅದಕ್ಕೆ ಭಾರತ ಸರಕಾರವು ತನ್ನ ಒಪ್ಪಿಗೆಯನ್ನು ನೀಡಿತು ಎಂದು ಸೈನಿಕರನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.

                ಸಮಾರಂಭದ ಉಪನ್ಯಾಸಕರಾಗಿ "ಸೈಬರ ಲಾ" ಮತ್ತು "ಸೈಬರ ಕ್ರೈಮ" ವಿಷಯಗಳ ಮೇಲೆ ಹಿರಿಯ ನ್ಯಾಯವಾದಿ ಅನಿಲ ಗುರುಪಾದಯ್ಯ ಮುಳವಾಡಮಠ ಸೈನಿಕರನ್ನು ಉದ್ದೇಶಿಸಿ ಭಾಷಣ ಮಾಡಿದರು. ಅಂದರಂತೆಯೇ "ಮಾನವ ಹಕ್ಕು" ವಿಷಯದ ಮೇಲೆ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕರಾದ  ವಿಜಯ ಮೂದರ್ುಂಡೆ ಅವರು ಅಲ್ಲದೆ "ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ವಿಷಯಗಳ ಮೇಲೆ ಕೆ.ಎಲ್. ಕಾಲೇಜ ಆಫ್ ಎಜ್ಯೂಕೇಶನ್ ಇದರ ಉಪನ್ಯಾಸಕರು ಆದ ಸುಜಾತಾ ಪೈ ಮತ್ತು ರವೀಂದ್ರ ತೋಟಗೇರ ವಕೀಲರು ವಿವರವಾಗಿ ವಿಭಿನ್ನ ರೀತಿಯ ಭಾಷಣದ ಮೂಲಕ ಸೈನಿಕರನ್ನು ಉದ್ದೇಶಿಸಿ ಮಾತನಾಡಿದರು.

       ಸಂದರ್ಭದಲ್ಲಿ ವಿಶೇಷ ಅಹ್ವಾನಿತರಾಗಿ ಜಿಲ್ಲಾ ಗವರ್ನರ ಕೆ.ಎಲ್. ಕುಂದರಗಿ, ಉಪ ಜಿಲ್ಲಾ ಗವರ್ನರ ಬಿ..ಚವ್ಹಾಣ, ಸರಕಾರಿ ವಕೀಲರು ಅಥಣಿ ರವರುಗಳು ಆಗಮಿಸಿದ್ದರು. ಸುಮಾರು 400 ಕ್ಕೂ ಹೆಚ್ಚು ಆಯ್.ಟಿ.ಬಿ.ಪಿಯ ಸೈನಿಕ ಪೊಲೀಸರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಕೊನೆಯಲ್ಲಿ ರಾಕೇಶ ದತ್ತಾ ಸ್ಟೇಷನ್ ಎಡಜ್ಯೂಟೆಂಟ್ ರವರು ವಂದನಾರ್ಪಣೆ ಮಾಡಿದರು.

       ಅಲೈನ್ಸ ಕ್ಲಬ್ ವತಿಯಿಂದ ಪ್ರತಿ ವರ್ಷವೂ ಆಟ್.ಟಿ.ಬಿ.ಪಿ ಪೋಲಿಸರಿಗೆ ಕಾನೂನು ನೆರವು ಶಿಬಿರ ವ್ಯವಸ್ಥೆಯನ್ನು ಬೇರೆ ಬೇರೆ ವಿಷಯದಲ್ಲಿ ಬೇರೆ ಬೇರೆ ನ್ಯಾಯಾಧೀಶರು ರಾಜ್ಯ ಹೈಕೊಟರ್ು ಮತ್ತು ಅಧಿನ ನ್ಯಾಯಾಲಯ ಮೂಲಕ ಏರ್ಪಡಿಸುವುದು ಅಲೈನ್ಸ ಕ್ಲಬ್ ಬೆಳಗಾವಿ ವತಿಯಿಂದ ಮಾಡುತ್ತಿದ್ದಾರೆ.