ರಾಂಚಿ, ಡಿ 16 ಜಾರ್ಖಂಡ್ ನಲ್ಲಿ ನಾಲ್ಕನೇ ಹಂತದ ವಿಧಾನಸಭಾ
ಚುನಾವಣೆಗೆ ಮತದಾನ ಪ್ರಗತಿಯಲ್ಲಿದೆ. ನಾಲ್ಕು
ಜಿಲ್ಲೆಗಳ 15 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ನಕ್ಸಲ್ ಬಾಧಿತ ಐದು ಕ್ಷೇತ್ರಗಳಲ್ಲಿ ಬೆಳಗ್ಗೆ 7 ಕ್ಕೆ
ಮತದಾನ ಆರಂಭವಾಗಿದ್ದು ಮಧ್ಯಾಹ್ನ 3 ಕ್ಕೆ ಮುಕ್ತಾಯವಾಗಲಿದೆ. ಉಳಿದ 10 ಕ್ಷೇತ್ರಗಳಲ್ಲಿ ಸಂಜೆ 5
ರವರೆಗೆ ಮತದಾನಕ್ಕೆ ಅವಕಾಶವಿದೆ. 22 ಮಹಿಳೆಯರು
ಸೇರಿದಂತೆ ಒಟ್ಟು 221 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇಬ್ಬರು ಜಾರ್ಖಂಡ್ ಸಚಿವರಾದ ರಾಜ್ ಪಾಲಿವರ್
ಮತ್ತು ಅಮರ್ ಬೌರಿ, ಏಳು ಮಾಜಿ ಸಚಿವರು, 14 ಹಾಲಿ ಶಾಸಕರು ಕಣದಲ್ಲಿರುವ ಪ್ರಮುಖರಾಗಿದ್ದಾರೆ. ಶಾಂತಿಯುತ ಮತದಾನಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದ್ದು ಅಗತ್ಯ
ಭದ್ರತಾ ಪಡೆ ನಿಯೋಜಿಸಲಾಗಿದೆ. ಕೆಲವೆಡೆ ಹೆಲಿಕಾಫ್ಟರ್ ಗಳೂ ಆಕಾಶದಲ್ಲಿ ಗಸ್ತು ಹೊಡೆಯುತ್ತಿವೆ. ಎಲ್ಲ ಹಂತಗಳ ಮತ ಎಣಿಕೆ ಡಿ 23 ರಂದು ನಡೆಯಲಿದ್ದು ಎಲ್ಲ
ಅಭ್ಯರ್ಥಿಗಳ ಹಣೆಬರಹ ಅಂದೇ ನಿರ್ಧಾರವಾಗಲಿದೆ.