ಮಾಜಿ ಪ್ರಧಾನಿ ವಾಜಪೇಯಿ ಜನ್ಮ ಶತಮಾನೋತ್ಸವ ಆಚರಣೆ

Former Prime Minister Vajpayee birth centenary celebrations

ಮಾಜಿ ಪ್ರಧಾನಿ ವಾಜಪೇಯಿ ಜನ್ಮ ಶತಮಾನೋತ್ಸವ ಆಚರಣೆ

ತಾಳಿಕೋಟಿ 25: ಭಾರತದ ಮಾಜಿ ಪ್ರಧಾನಿ, ಮುತ್ಸದ್ಧಿ ರಾಜಕಾರಣಿ ಧೀಮಂತ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವ ದಿನವನ್ನು ಬಿಜೆಪಿ ನಗರ ಘಟಕದ ವತಿಯಿಂದ ಆಚರಿಸಲಾಯಿತು. 

ಅಟಲ್ ಜಿ ಜನ್ಮ ಶತಮಾನೋತ್ಸವ ದಿನದ ಅಂಗವಾಗಿ ಬುಧವಾರ ನಗರ ಘಟಕದ ಪದಾಧಿಕಾರಿಗಳು ಪಟ್ಟಣದ ವಾರ್ಡ್‌ ಸಂಖ್ಯೆ 22ರಲ್ಲಿರುವ ಕಾರ್ಯಕರ್ತ ಗುರುರಾಜ್ ಮಾನೆ ಇವರ ಮನೆಯ ಒಂದನೇ ಅಂತಸ್ತಿನಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪಕ್ಷದ ಧ್ವಜ ಹಾರಿಸಿ ಜನ್ಮ ಶತಮಾನೋತ್ಸವವನ್ನು ಆಚರಿಸಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ರವೀಂದ್ರ ಕಟ್ಟಿಮನಿ ಮಾತನಾಡಿ ಅಟಲ್ ಜಿ ಅವರು ದೇಶ ಕಂಡ ಧೀಮಂತ ನಾಯಕ,ಶ್ರೇಷ್ಠ ಕವಿ ರಾಜಕಾರಣದಲ್ಲಿ ಸದಾ ರಾಜ ಧರ್ಮ ಪಾಲಿಸಿದ ರಾಜಕಾರಣಿ, ಬಿಜೆಪಿ ಪಕ್ಷಕ್ಕೆ ಅವರ ಕೊಡುಗೆ ಮೂಲಭೂತವಾದದ್ದು, ಅವರು ಆರಂಭಿಕ ವರ್ಷಗಳಲ್ಲಿ ಪಕ್ಷವನ್ನು ಬೆಳೆಸಿದರು ಸವಾಲುಗಳು ಹಿನ್ನಡೆಗಳು ಮತ್ತು ಗೆಲುವುಗಳ ಮೂಲಕ ಅದನ್ನು ಮುನ್ನಡೆಸಿದರು. ಸಿದ್ಧಾಂತ ಮತ್ತು ಅಧಿಕಾರದ ನಡುವೆ ಆಯ್ಕೆ ಇದ್ದಾಗೆಲೆಲ್ಲಾ ಅವರು ಸಿದ್ಧಾಂತವನ್ನೇ ಆರಿಸಿಕೊಂಡರು.ವಾಜಪೇಯಿ ಅವರ 100ನೇ ಜನ್ಮ ವಾರ್ಷಿಕೋತ್ಸವ ದಿನವಾದ ಇಂದು ಅವರ ಬದುಕಿನ ಆದರ್ಶಗಳನ್ನು ಸಾಕಾರ ಗೊಳಿಸಲು ಮತ್ತು ಭಾರತಕ್ಕಾಗಿ ಅವರ ಕನಸು ನನಸಾಗಿಸಲು ನಮ್ಮನ್ನು ಅರ​‍್ಿಸುವ ಪ್ರತಿಜ್ಞೆ ಮಾಡೋಣ ಎಂದರು. ಕಾರ್ಯಕ್ರಮದಲ್ಲಿ ಬಿಜೆಪಿ ನಗರ ಘಟಕ ಅಧ್ಯಕ್ಷ ರಾಘವೇಂದ್ರ ಚವಾಣ್,ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಶೆಟ್ಟಿ,ಜಿಲ್ಲಾ ಮಹಿಳಾ ಘಟಕದ ಉಪಾಧ್ಯಕ್ಷೆ ಸುವರ್ಣಾ ಬಿರಾದಾರ, ಪುರಸಭೆ ಸದಸ್ಯ ಅಣ್ಣಾರಾವ್ ಜಗತಾಪ, ಮುದುಕಪ್ಪ ಬಡಿಗೇರ,ರಾಮು ಜಗತಾಪ,ಯುವ ಮೋರ್ಚಾ ಸದಸ್ಯ ರಾಘು ಮಾನೆ,ಈಶ್ವರ ಹೂಗಾರ,ಗುರುರಾಜ ಮಾನೆ, ಸಂತೋಷ ಡಿಸಲೆ,ವಿಠಲ ಮೋಹಿತೆ,ಪಾಂಡು ಕದಂ,ಲಂಕೇಶ ಪಾಟೀಲ,ನಾಗರಾಜ ಪತ್ತಾರ, ಆದಪ್ಪ ಕೋರಿ,ಕುಲಭೂಷಣ ಹುಬ್ಬಳ್ಳಿ, ನವೀನ ಡಿಸಲೆ, ಸಂಗು ಪಾಟೀಲ ಮತ್ತಿತರರು ಇದ್ದರು.