ನಾಳೆ ತಾಳಿಕೋಟಿಗೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರ್ಪ ಭೇಟಿ
ತಾಳಿಕೋಟಿ 16: ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರ್ಪನವರು ಜನವರಿ 18ರಂದು ಪಟ್ಟಣಕ್ಕೆ ಆಗಮಿಸಲಿದ್ದಾರೆ ಎಂದು ಬಿಜೆಪಿ ಮುಖಂಡ ಪುರಸಭೆ ಸದಸ್ಯ ಮುದುಕಪ್ಪ ಬಡಿಗೇರ ತಿಳಿಸಿದ್ದಾರೆ. ಪತ್ರಿಕೆಯೊಂದಿಗೆ ಮಾತನಾಡಿದ ಅವರು ಮಾಜಿ ಉಪ ಮುಖ್ಯಮಂತ್ರಿ ಈಶ್ವರ್ಪನವರು ಬಾಗೇವಾಡಿ ತಾಲೂಕಿನಲ್ಲಿ ಫೆ. 4ರಂದು ನಡೆಯಲಿರುವ ರಾಯಣ್ಣ ಬಿಗ್ರೇಡ್ ಸಮಾವೇಶದ ಸಿದ್ಧತೆ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಲು ಜನವರಿ 18ರಂದು ಆಗಮಿಸುತ್ತಿದ್ದು, ಅವರು ತಮ್ಮ ಕುಲ ದೇವತೆಯಾದ ಪಟ್ಟಣದ ದ್ಯಾಮವ್ವ ದೇವಿಯ ದೇವಸ್ಥಾನಕ್ಕೆ ಬೆಳಿಗ್ಗೆ 10 ಗಂಟೆಗೆ ಭೇಟಿ ನೀಡಲಿದ್ದು ತಾಯಿಯ ದರ್ಶನ ಪಡೆಯಲಿದ್ದಾರೆ. ಪಕ್ಷದ ಮುಖಂಡರು ಕಾರ್ಯಕರ್ತರು ಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರಬೇಕೆಂದು ಕೋರಲಾಗಿದೆ.