ವೀರಶೈವ ಲಿಂಗಾಯತ ಹೋರಾಟಕ್ಕೆ ಬೆಂಬಲಿಸಿದ್ದಕ್ಕೆ ತಮ್ಮನ್ನು ಖಳನಾಯಕನೆಂದರು: ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು 27: ಜಗತ್ತಿನಲ್ಲಿ ಪ್ರಜಾಪ್ರಭುತ್ವದ ಮೊದಲ ಬೀಜ ಬಿತ್ತಿದವರೇ ಬಸವವಾದಿ ಶರಣರು, ಅಲ್ಲಿಯವರೆಗೂ ಇದರ ಪರಿಕಲ್ಪನೆ ಯಾರಿಗೂ ಇರಲಿಲ್ಲ, ಬಸವ ಧರ್ಮ ಎಂಬುದು ಸ್ವತಂತ್ರ ಧರ್ಮ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ  

   ಶನಿವಾರ ನಗರದ ಗಾಂಧೀ ಭವನದಲ್ಲಿ ನಡೆದ ಶರಣ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಪ್ರೊ.ಜಿ.ಎಸ್ ಸಿದ್ದರಾಮಯ್ಯ ರಚಿಸಿರುವ "ಲಿಂಗಾಯತ ಕನ್ನಡ ವಚನ ಧರ್ಮ ಹಾಗೂ "ವಚನ ಧರ್ಮ ಅರಿವಿನ ಬೆರಗು" ಪುಸ್ತಕಗಳ ಬಿಡುಗಡೆ ಮಾತನಾಡಿದ ಅವರು, ವೈದಿಕ ಪರಂಪರೆಯ ಪಯರ್ಾಯ ಧರ್ಮವೇ ಲಿಂಗಾಯತ ಧರ್ಮ. ಜಗತ್ತಿನಲ್ಲಿ ಇಂದಿಗೂ ಗುಲಾಮಗಿರಿ ಮುಂದುವರೆದಿದ್ದು ಅದರ  ನಿಮರ್ೂಲನೆಯಾಗಲು ಪುಸ್ತಕಗಳ ಅಧ್ಯಯನ ಮಾಡಬೇಕು. ಬಸವಣ್ಣನವರು ಅಂದೇ ಮೌಡ್ಯಗಳ ವಿರುದ್ಧ ಹಾಗು ಗುಲಾಮಗಿರಿ  ವಿರುದ್ಧ ಹೋರಾಟ ನಡೆಸಿದರು ಎಂದು ಹೇಳಿದರು.  

   ತಾವು ಮುಖ್ಯಮಂತ್ರಿಯಾಗಿದ್ದಾಗ ಸಕರ್ಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಸಲು ತೀಮರ್ಾನಿಸಿದ್ದಕ್ಕಾಗಿ ಹಾಗೂ ವಿಜಯಪುರ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಹೆಸರಿಟ್ಟ ಕಾರಣಕ್ಕಾಗಿ ಅಂದು ತಮಗೆ ಸನ್ಮಾನ ಮಾಡಿದ್ದರು ಎಂದು ಅವರು ಸ್ಮರಿಸಿದರು. 

   ಬಸವಣ್ಣ ಅವರು ಇನ್ನಷ್ಟು ಕಾಲ ಬದುಕಬೇಕಿತ್ತು. ಅಂತಹ ಮಹಾನುಭಾವರಿಗೆ ಹೆಚ್ಚಿನ ಆಯಸ್ಸು ಇರುವುದಿಲ್ಲ. ಸಮಾಜದಲ್ಲಿ ಜಾತಿ ವ್ಯವಸ್ಥೆ ಜಡತ್ವದಿಂದ ಕೂಡಿದ್ದು ,ಜಾತಿ ನಿಮರ್ೂಲನೆಯಾಗ ಹೊರತು ಸಮಾಜಿಕ ವ್ಯವಸ್ಥೆ ಬದಲಾಗುವುದಿಲ್ಲ ಎಂದು ಅವರು ಹೇಳಿದರು.  ತಾವು ಮುಖ್ಯಮಂತ್ರಿ ಆಗಿದ್ದ ವೇಳೆ ವೀರಶೈವ ಲಿಂಗಾಯತ ಧರ್ಮಕ್ಕಾಗಿ ಶಿವಶಂಕರಪ್ಪ ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಮಾತೆ ಮಹಾದೇವಿ ಸೇರಿದಂತೆ ವಿವಿಧ ಮಠಾಧೀಶರು ಮನವಿ ಮಾಡಿದ್ದರು. ಹೀಗಾಗಿ ಎಲ್ಲರೂ ಒಟ್ಟಾಗಿ  ಬರುವಂತೆ ತಾವು ಸೂಚಿಸಿದ್ದು ಆದರೆ ಪ್ರತ್ಯೇಕ ಮನವಿಗಳನ್ನು ಸಲ್ಲಿಸಿದರು. ಧರ್ಮದ ವಿಚಾರವಾಗಿದ್ದರಿಂದ ನಿವೃತ್ತ ನ್ಯಾಯಮೂತರ್ಿ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿಯನ್ನು ಪಡೆಯಲಾಯಿತು. ಬಳಿಕ ಸಂಪುಟದಲ್ಲಿ ವರದಿ ಇಟ್ಟು ಲಿಂಗಾಯತ ಧರ್ಮದ ಮಾನ್ಯತೆ ನೀಡುವಂತೆ ಕೇಂದ್ರ ಸಕರ್ಾರಕ್ಕೆ ಶಿಫಾರಸ್ಸು ಮಾಡಲಾಯಿತು. ಇಷ್ಟೆಲ್ಲಾ ಹೋರಾಡಿದ ತಮ್ಮನ್ನೇ ಖಳನಾಯಕನನ್ನಾಗಿ ಮಾಡಿಬಿಟ್ಟರು ಎಂದು ಅಸಮಾಧಾನ ವ್ಯಕ್ತಪಡಿಸಿದರು. 

   ನಿವೃತ್ತ ಐಎಎಸ್ ಅಧಿಕಾರಿ ಎಸ್ ಎಂ ಜಾಮದಾರ್ ಮಾತನಾಡಿ, ಲಿಂಗಾಯತ ಧರ್ಮದ ಹೋರಾಟಕ್ಕೆ ಹೊಸ ರೂಪು ಕೊಟ್ಟವರು ಸಿದ್ದರಾಮಯ್ಯ ಅವರು, ಲಿಂಗಾಯತ ಎನ್ನುವುದು ಸ್ವತಂತ್ರ ಧರ್ಮವಾಗಬೇಕಿತ್ತು. ಇದಕ್ಕೆ ವಚನಕ್ಕಿಂತ ಬೇರೆ ಪುರಾವೆಗಳು ಬೇಕಾಗಿರಲಿಲ್ಲ. ಲಿಂಗಾಯತ ಧರ್ಮವನ್ನು ಸ್ವತಂತ್ರ  ಧರ್ಮವೆಂದು ಘೋಷಿಸಲು ಬಸವಣ್ಣನವರ ವಚನಗಳೇ ಸಾಕು. ಆದರೆ ನಮ್ಮ ಸಮುದಾಯದ ಸ್ವಾಮೀಜಿಗಳೇ ಅದಕ್ಕೆ ಬದ್ಧತೆ ತೋರಿಸಿಲ್ಲ ಎಂದು ಅವರು ಆರೋಪಿಸಿದರು. 

   ಪೇಜಾವರ ಶ್ರೀಗಳು ಜು. 29 ರಂದು ಧಾಮರ್ಿಕ ವಿಚಾರಗಳ ಸಮಸ್ಯೆ ಕುರಿತ ಪರಿಹಾರ ಸಭೆ ಕರೆದಿದ್ದು, ನಾವು ಆ ಸಭೆಗೆ ಹಾಜರಾಗುವುದಿಲ್ಲ. ಪೇಜಾವರ ಶ್ರೀಗಳ ಸಭೆಗೆ ನಾವೇಕೆ ಹೋಗಬೇಕು. ಅವರ ಕಾಲಿಗೆ ಬಿದ್ದು ನಮಸ್ಕರಿಸಲು ಹೋಗಬೇಕೆ ಎಂದು ಅವರು ಪ್ರಶ್ನಿಸಿದರು.  

   ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಅಡಿಪಾಯ ಹಾಕಿಕೊಟ್ಟವರೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು. ಇಂದು ಲಿಂಗಾಯತ  ಹೆಸರು ಹೇಳಿ ಚುನಾವಣೆಗಳಲ್ಲಿ ಗೆದ್ದವರು ಬಳಿಕ ಬಸವಣ್ಣನನ್ನು ಮರೆತಿದ್ದಾರೆ. ಲಿಂಗಾಯತ ತತ್ವಗಳನ್ನು ಮರೆತವರ ಕಾಲಿಗೆ ಬಿದ್ದು ಆಶೀವರ್ಾದ ಪಡೆಯುತ್ತಾರೆ. ಜೊತೆಗೆ ಪ್ರಮಾಣ ವಚನವನ್ನೂ ಪಡೆಯುತ್ತಾರೆ ಎಂದು ಪರೋಕ್ಷವಾಗಿ ಬಿ ಎಸ್  ಯಡಿಯೂರಪ್ಪ ಅವರಿಗೆ ಜಮಾದಾರ್ ಟಾಂಗ್ ನೀಡಿದರು. 

   ಕಾರ್ಯಕ್ರಮದಲ್ಲಿ ಸ್ವಪ್ನ ಬುಕ್ ಹೌಸ್ ವ್ಯವಸ್ಥಾಪಕ ನಿದರ್ೆಶಕ ನಿತಿನ್ ಷಾ, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅಪ್ಪಾರವ್ ಅಕ್ಕೋಣಿ, ವಿಮರ್ಶಕಿ ಪ್ರೊ.ಎಂ.ಎಸ್ ಆಶಾದೇವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಕೃತಿ ರಚನಾಕಾರ ಪ್ರೊ.ಎಸ್.ಜಿ ಸಿದ್ದರಾಮಯ್ಯ ಉಪಸ್ಥಿತರಿದ್ದರು.