ಪಶ್ಚಿಮ ಘಟ್ಟಗಳ ದಟ್ಟ ಅರಣ್ಯದಲ್ಲಿ ಚಾರಣ ಪಥಕ್ಕೆ ಅರಣ್ಯ ಇಲಾಖೆ ಸಜ್ಜು

Forest Department gears up for trekking in dense forest of Western Ghats

ಪಶ್ಚಿಮ ಘಟ್ಟಗಳ ದಟ್ಟ ಅರಣ್ಯದಲ್ಲಿ ಚಾರಣ ಪಥಕ್ಕೆ ಅರಣ್ಯ ಇಲಾಖೆ ಸಜ್ಜು 

ಕಾರವಾರ, 13 : ಉತ್ತರ ಕನ್ನಡದಲ್ಲಿ ಹಾದು ಹೋಗಿರುವ ಪಶ್ಚಿಮ ಘಟ್ಟಗಳ 32 ಕಡೆ ಚಾರಣಕ್ಕೆ ಅವಕಾಶ ಕಲ್ಪಿಸಲು ಸಿದ್ಧತೆ ನಡೆದಿದೆ.ರಾಜ್ಯದಲ್ಲಿ ಅನೇಕ ಅರಣ್ಯ ಧಾಮಗಳಿವೆ. ಅರಣ್ಯ ಧಾಮಗಳಲ್ಲಿ ಟ್ರಕ್ಕಿಂಗ್ ತೆರಳಿ ಕಷ್ಟಕ್ಕೆ ಸಿಲುಕಿದವರೇ ಹೆಚ್ಚು. ಕ್ಯಾಸರಲಾಕ್ ನಲ್ಲಿ ಜೆಟ್ ಪಥನವಾದಾಗ ಅದು ಬಿದ್ದ ಸ್ಥಳ ಪತ್ತೆಗೆ ಒಂದು ದಿನ ಸಮಯ ಬೇಕಾಗಿತ್ತು. ಸಂರಕ್ಷಿತ ಅರಣ್ಯ ಘೋಷಣೆಗೆ ಮುನ್ನ ನಮ್ಮ ಬುಡಕಟ್ಟು ಜನರು ಅರಣ್ಯದಲ್ಲಿ ಪಥಗಳನ್ನು ಕಂಡುಕೊಂಡಿದ್ದರು. ಬ್ರಿಟಿಷರು ಅರಣ್ಯ ಪಥಗಳನ್ನು ಅಧಿಕೃತಗೊಳಿಸಿ, ಆ ಪಥಗಗಳಿಗೆ ಒಂದು ನಕಾಶೆ ರೂಪಿಸಿದರು.    ಬ್ರಿಟಿಷರ ನಂತರ ಅರಣ್ಯ ಮತ್ತಷ್ಟು ದಟ್ಟವಾಗಿದೆ. ಈಗ ಟ್ರಕ್ಕಿಂಗ್ ಪ್ರೀತಿ ಹೆಚ್ಚಿದೆ. ಈಗ ಅರಣ್ಯ ಪಥಗಳಿಗೆ ಅಧಿಕೃತ ಮುದ್ರೆ ಒತ್ತಲು ಸಕಲ ಸಿದ್ಧತೆಗಳನ್ನು ಇಲಾಖೆ ಮಾಡಿಕೊಂಡಿದೆ. ಹಾಗೂ ದಟ್ಟ ಅರಣ್ಯದಲ್ಲಿ  ಸುರಕ್ಷತೆಯ ದೃಷ್ಟಿಯಿಂದ ವಿಧಿಸಲಾಗಿರುವ ನಿಬಂರ್ಧಗಳಿಂದ, ರುದ್ರ ರಮಣೀಯ ನೈಸರ್ಗಿಕ ಸ್ಥಳಗಳನ್ನು ನೋಡಲಾಗದ ಪರಿಸ್ಥಿತಿ ಟ್ರಕ್ಕಿಂಗ್ ಪ್ರಿಯರಲ್ಲಿದೆ. ಇಂತಹ ನಿಬಂರ್ಧಗಳಿಗೆ ಕೊಂಚ್ ಬ್ರೇಕ್ ಹಾಕಿ, ಚಾರಣ ಪ್ರಿಯರಿಗೆ ಕಾಯ್ದಿಟ್ಟ ಅರಣ್ಯ ಸ್ಥಳಗಳ ವೀಕ್ಷಣೆ ಅವಕಾಶ ಕಲ್ಪಿಸಲು ಉತ್ತರ ಕನ್ನಡ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಮುಂದಾಗಿದೆ.ಅತಿ ಹೆಚ್ಚು ಅರಣ್ಯ ಸಂಪತ್ತು ಹೊಂದಿರುವ ಉತ್ತರ ಕನ್ನಡ ಜಿಲ್ಲೆ, ಅಣಶಿ ಘಟ್ಟ, ಜೇನು ಕಲ್ಲು ಗುಡ್ಡದ ಪಥ, ಭೀಮನ ಗುಡ್ಡ, ಕ್ಯಾಸರಲಾಕ್ ,ಡಿಗ್ಗಿ ಪಥ, ಕುಳಗಿ ಅರಣ್ಯ, ಕದ್ರಾ ವಲಯದ ಪಥ, ದೇವಿಮನೆ ಘಟ್ಟ, ಮನಮನೆ ಘಟ್ಟ, ಅರಬೈಲು ಘಟ್ಟಗಳಂಥ ರುದ್ರ ರಮಣೀಯ ತಾಣಗಳನ್ನು ಹೊಂದಿರುವ ಜಿಲ್ಲೆ ಆಗಿದೆ. ದೇಶದ ಯಾವ ಭಾಗದಲ್ಲೂ ಕಾಣದ ರುದ್ರ ರಮಣೀಯ ಅರಣ್ಯ ಉತ್ತರ ಕನ್ನಡದಲ್ಲಿದೆ. 

     ಚಾರಣ ಪ್ರಿಯರ ನೆಚ್ಚಿನ ತಾಣ :ಹೊರ ರಾಜ್ಯ ಹಾಗೂ ಹೊರ ದೇಶದಲ್ಲಿ ಚಾರಣಕ್ಕೆ ಹೋಗುವ ಅದೆಷ್ಟೋ ಟ್ರಕ್ಕಿಂಗ್ ಪ್ರಿಯರಿಗೆ ಉತ್ತರ ಕನ್ನಡ ಜಿಲ್ಲೆಯ ಆಕರ್ಷಣೀಯ ಅರಣ್ಯ ಪಥಗಳಲ್ಲಿ ಟ್ರಕ್ಕಿಂಗ್ ಮಾಡಲು ಅವಕಾಶ ಸಿಕ್ಕಿಲ್ಲ ಎಂಬ ಕಿರಗು ಇತ್ತು. ಟ್ರಕ್ಕಿಂಗ್ ಪ್ರಿಯರಿಗೆ ಅಧಿಕೃತವಾಗಿ ಅವಕಾಶ ಕಲ್ಪಿಸಿ ಕೊಡುವ ಉದ್ದೇಶದಿಂದ, ಕಳೆದ ಕೆಲವು ತಿಂಗಳ ಕಾಲ ಜಿಲ್ಲೆಯ ಮೂಲೆ ಮೂಲೆಗಳಲ್ಲಿ ಸುತ್ತಾಡಿ ಸರ್ವೇ ಮಾಡಿರುವ ಉತ್ತರ ಕನ್ನಡ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಹಾಗೂ ತಂಡದವರು, ಸುಮಾರು ಜಿಲ್ಲೆಯ 32 ಸ್ಥಳಗಳಲ್ಲಿ ಅರಣ್ಯ ಚಾರಣ ಮಾಡಲು ಸೂಕ್ತ ಎಂದು ಗುರುತಿಸಿದೆ. ಸದ್ಯ ಚಾರಣಕ್ಕೆ ಜಿಲ್ಲಾಡಳಿತದಿಂದ ಬೆಂಬಲಸಹ ಸಿಕ್ಕಿದೆ. ಇಲ್ಲಿನ 32 ಅರಣ್ಯ ಪಥ ಗಳಲ್ಲಿ ಟ್ರಕ್ಕಿಂಗ್ ಮಾಡಲು ಅಧಿಕೃತ ಅನುಮಾತಿಗಾಗಿ, ಕರ್ನಾಟಕ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಪಿಸಿಸಿಎಫ್) ಮೀನಾಕ್ಷಿ ನೇಗಿ ಅವರಿಗೆ, ಉತ್ತರ ಕನ್ನಡ ಸಿಸಿಎಫ್ ವಸಂತ ರೆಡ್ಡಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಪ್ರಸ್ತಾವನೆಗೆ ಅನುಮತಿ ಸಿಕ್ಕರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಒಂದು ಹೊಸ ಆಯಾಮ ದಕ್ಕಲಿದೆ. ಜೊತೆಗೆ ಜಿಲ್ಲೆ ಅರಣ್ಯ ಟ್ರಕ್ಕಿಂಗ್ ಹಬ್ ಆಗಲಿದೆ.32 ಟ್ರಕ್ಕಿಂಗ್ ಸ್ಥಳ ಗಳಿಗೆ ಉತ್ತರ ಕನ್ನಡ ಜಿಲ್ಲಾಡಳಿತ ಅನುಮತಿ ನೀಡಿರುವುದನ್ನ ಪರಿಸರ ಪ್ರೇಮಿಗಳು ಸ್ವಾಗತಿಸಿದ್ದಾರೆ. ಟ್ರಕ್ಕಿಂಗ್ ಗೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿರುವುದು ನಿಸರ್ಗ ಪ್ರಿಯರು ಹಾಗೂ ಅಧ್ಯಯನ ಮಾಡುವವರಿಗೆ ಪ್ರೇರಣೆ ಕೊಟ್ಟಂತಾಗುತ್ತದೆ. 

   ಟ್ರಕ್ಕಿಂಗ್ ಸಂಪೂರ್ಣವಾಗಿ ಅರಣ್ಯ ಇಲಾಖೆ ಯವರ ಮೂಲಕವೇ ನಡೆಯಬೇಕು ಎಂದಿರುವ ಪರಿಸರ ಪ್ರೇಮಿಗಳು, ಟ್ರಕ್ಕಿಂಗ್ ಪ್ಲೇಸ್ ಗಳ ಸುರಕ್ಷತೆಗೆ ಹೆಚ್ಚಿನ ಒತ್ತು ಕೊಡಬೇಕು. ಮೊಜು ಮಸ್ತಿ ಹಾಗೂ ಅನೈತಿಕ ಚಟುವಟಿಕೆಗಳ ಮೇಲೆ ಸಂಪೂರ್ಣವಾಗಿ ನಿಗಾವಹಿಸಬೇಕೆಂದು ಪರಿಸರ ಪ್ರಿಯರ ಆಗ್ರಹವಾಗಿದೆ.ಕಾಳಿ ಟೈಗರ್ ರಿಸರ್ವ್‌ ಫಾರೆಸ್ಟ್‌ ಪ್ರದೇಶದಲ್ಲಿನ ಸುಮಾರು 39 ಪ್ರದೇಶಗಳಲ್ಲಿ ಟ್ರಕ್ಕಿಂಗ್ ಗೆ ಅವಕಾಶ ಕಲ್ಪಿಸುವಂತೆ, ಅರಣ್ಯ ಅಧಿಕಾರಿಗಳು ಮನವಿ ಮಾಡಿದ್ದರು . ಈ ಬೇಡಿಕೆಗೆ ಒಪ್ಪಿಗೆ ಸಿಕ್ಕಿಲ್ಲ . ಜಿಲ್ಲೆಯ ಇತರೆ ದಟ್ಟ ಅರಣ್ಯದಲ್ಲಿ 32 ಸ್ಥಳಗಳಿಗೆ ಅವಕಾಶ ಕಲ್ಪಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.