ರೈತರಿಗೆ ಬೀಜ ಗೊಬ್ಬರ ಒದಗಿಸುವಂತೆ ಒತ್ತಾಯ

ಲೋಕದರ್ಶನ ವರದಿ

ರಾಣೇಬೆನ್ನೂರು10: ಪ್ರಸಕ್ತ ಸಾಲಿನ ಮುಂಗಾರ ಹಂಗಾಮಿಗಾಗಿ ರೈತರಿಗೆ ಸಮರ್ಪಕವಾಗಿ ಬೀಜ ಗೊಬ್ಬರವನ್ನು ವಿತರಿಸಬೇಕು ಎಂದು ಒತ್ತಾಯಿಸಿ, ರಾಜ್ಯ ರೈತ ಸಂಘದ ತಾಲೂಕಾ ಪದಾಧಿಕಾರಿಗಳು ಮತ್ತು ರೈತರು ಇಲ್ಲಿನ ಸಹಾಯಕ ಕೃಷಿ ನಿದರ್ೇಶಕರಿಗೆ ಮನವಿ ಸಲ್ಲಿಸಿದರು. 

   ಅಧಿಕಾರಗಳು ಬೀಜ ಗೊಬ್ಬರ ಮಾರಾಟಗಾರ ಮೇಲೆ ಹದ್ದಿನ ಕಣ್ಣಿಟು ಕಳಪೆ ಬೀಜ ವಿತರಣೆ ಮಾಡದಂತೆ ಮುಂಜಾಗೃತ ಕ್ರಮ ಕೈಗೊಳ್ಳಬೇಕು, ಈಗಾಗಲೆ ಕಳೆದ 4 ವರ್ಷಗಳಿಂದ ಸಮರ್ಪಕ ಮಳೆಯಾಗದೆ ರೈತರು ತೊಂದರೆ ಅನುಭವಿಸುತ್ತಿದ್ದಾರೆ.

 ಕಳಪೆ ಬೀಜದಿಂದ ಮತ್ತಷ್ಟು ತೊಂದರೆಗೆ ಈಡಾಗದಂತೆ ನೋಡಿಕೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

   ತಾಲೂಕಾ ಅಧ್ಯಕ್ಷ ಹನುಮಂತಪ್ಪ ಕಬ್ಬಾರ, ರಾಯಣ್ಣ ಮಾಕನೂರ, ಬಸವರಾಜ ಹುಲ್ಲತ್ತಿ, ಭರಮಪ್ಪ ಪೂಜಾರ, ಎಂ.ಆರ್.ಪಾಟೀಲ, ಬಿ.ಕೆ. ರಾಜನಹಳ್ಳಿ, ಮಂಜಪ್ಪ ಬಾಕರ್ಿ, ನಾಗರಾಜ ಬಣಕಾರ, ಪ್ರಶಾಂತ, ಮಹಾದೇವಪ್ಪ ಸೇರಿದಂತೆ ಮತ್ತಿತರರು ಇದ್ದರು.