ಲೋಕದರ್ಶನ ವರದಿ
ನಿಪ್ಪಾಣಿ-09: ಕೆಎಲ್ಇ ಸಂಸ್ಥೆಯ ಸ್ಥಳೀಯ ಜಿ.ಐ.ಬಾಗೇವಾಡಿ ಮಹಾವಿದ್ಯಾಲಯದ ಎನ್ಸಿಸಿ, ಎನ್ಎಸ್ಎಸ್, ರೆಡ್ ರಿಬ್ಬನ್ ಘಟಕ ಮತ್ತು ಸ್ಥಳೀಯ ಕೆಎಲ್ಇ ಅಂಗಸಂಸ್ಥೆಗಳು ಹಾಗೂ ಕೆಎಲ್ಇ ರಕ್ತ ಭಂಡಾರದ ಸಹಯೋಗದಲ್ಲಿ ತ್ಯಾಗವೀರ ಸಿರಸಂಗಿ ಲಿಂಗರಾಜರ 158ನೇ ಜಯಂತಿ ಆಚರಣೆಯ ನಿಮಿತ್ತವಾಗಿ ಬುಧವಾರದಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು.
ಸುಮಾರು 50 ಜನ ವಿದ್ಯಾಥರ್ಿಗಳು ಮತ್ತು ಪ್ರಾಧ್ಯಾಪಕರು ರಕ್ತದಾನ ಮಾಡಿದರು. ಸಸಿಗೆ ನೀರೆರೆಯುವುದರ ಮೂಲಕ ಕೆಎಲ್ಇ ಉಪಕಾಯರ್ಾಧ್ಯಕ್ಷ ಅಶೋಕ ಬಾಗೇವಾಡಿ ಶಿಬಿರಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಪದವಿ ಪ್ರಾಚಾರ್ಯ ಡಾ.ಎಮ್.ಬಿ.ಕೋಥಳೆ, ಪ.ಪೂ ಪಾಚಾರ್ಯ ಡಾ. ಎಸ್. ಬಿ. ಸೊಲಬನ್ನವರ, ಡಾ.ಡಿ.ವ್ಹಿ.ಬಡಿಗೇರ, ಪ್ರಾ. ಪಿ.ಆಯ್.ಪಾಟೀಲ, ಪ್ರಾ. ಶಮರ್ಿಷ್ಠಾ ರಾಯ್, ಪ್ರಾ. ಬಿ.ಎಚ್. ಪರಮನಟ್ಟಿ, ಡಾ. ಎಸ್. ಎಮ್. ರಾಯಮಾನೆ, ಪ್ರೊ. ಕೆ. ಎನ್. ಶಂಕರಮೂತರ್ಿ, ಸಿದ್ದು ಉದಗಟ್ಟಿ ಸೇರಿದಂತೆ ಮಹಾವಿದ್ಯಾಲಯದ ವಿದ್ಯಾಥರ್ಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.