ಶರಣರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಸಾಗಿ ಸಪ್ತ ಸೂತ್ರಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಿ ಶಾಂತಭೀಷ್ಮ ಶ್ರೀಗಳು

Follow the path laid down by the surrendered people and adopt the seven sutras in real life Mr. Sha

ಶರಣರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಸಾಗಿ ಸಪ್ತ ಸೂತ್ರಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಿ ಶಾಂತಭೀಷ್ಮ ಶ್ರೀಗಳು  

ಕಂಪ್ಲಿ 01: ಅಜ್ಞಾನದ ಅಂಧಕಾರವನ್ನು ಹೊಡೆದೊಡಿಸಿ ಸುಜ್ಞಾನದ ಬೆಳಕಿನತ್ತ ಸಾಗುವಂತೆ ಮಾಡಿ, ಅಧ್ಯಾತ್ಮದ ನಿಜ ತಿರುಳನ್ನು ಮಾನವ ಕುಲಕ್ಕೆ ಸರಳವಾಗಿ ಮುಟ್ಟುವಂತೆ ದೇಶಾದ್ಯಂತ ಸಾರಿದವರು ಅಂಬಿಗರ ಚೌಡಯ್ಯನವರು ಎಂದು ಶ್ರೀನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠ ಸುಕ್ಷೇತ್ರ ನರಸೀಪುರದ ಪೀಠಾಧ್ಯಕ್ಷರಾದ ಪೂಜ್ಯ ಜಗದ್ಗುರು ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ತಿಳಿಸಿದರು. ಅವರು ಕಂಪ್ಲಿ ತಾಲ್ಲೂಕು ರಾಮಸಾಗರ ಗ್ರಾಮದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಯುವಕರ ಸಂಘ ಏರಿ​‍್ಡಸಿದ್ದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶರಣರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಸಾಗಿ ಸಪ್ತ ಸೂತ್ರಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಬದುಕು ಸಂದರವಾಗಿರುತ್ತದೆ. ಮೂಢನಂಬಿಕೆ, ಅಜ್ಞಾನ ತೊಳೆಯುವಲ್ಲಿ, ಸತ್ಯದ ನಡೆಗೆ, ನಂಬಿಕೆಗೆ ಹೆಸರಾದ ಮತ್ತೊಂದು ಹೆಸರೇ ಅಂಬಿಗನಾಗಿದ್ದು, ಅಂತಹ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾನೆ ಮಾಡಿರುವುದು ಅತ್ಯಂತ ಸಂತಸ ಸಂಗತಿಯಾಗಿದ್ದು,ಸಮುದಾಯದವರು ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರಗಳನ್ನು ಕಲಿಸಬೇಕೆಂದರು. ಕಳೆದ ಹಲವಾರು ದಶಕಗಳಿಂದ ನಮ್ಮ ಸಮುದಾಯದವರು ಸೂಕ್ತ ಮೀಸಲಾತಿಗಾಗಿ ನಿರಂತರ ಹೋರಾಟ ಮಾಡುತ್ತಿದ್ದಾರೆ. ಆದರೆ ಇದುವರೆಗೂ ಅದು ಸಿಗದೇ ಇರುವುದು ನೋವಿನ ಸಂಗತಿಯಾಗಿದ್ದು, ಮುಂದಿನ ದಿನಗಳಲ್ಲಿ ಮೀಸಲಾತಿಗಾಗಿ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದ ಅವರು ಮಹಾತ್ಮರ ಆದರ್ಶಗಳನ್ನು ಅಳವಡಿಸಿಕೊಳ್ಳಲು, ನೆನಪಿಗಾಗಿ ಪುತ್ತಳಿ, ವೃತ್ತ ನಿರ್ಮಾನ ಅಗತ್ಯವಾಗಿದೆ ಎಂದರು. ಅಂಬಿಗರ ಚೌಡಯ್ಯ ಮಹಾಸಭಾದ ರಾಜ್ಯಾಧ್ಯಕ್ಷೆ ಅಂಬಿಕಾ ಜಾಲಗಾರ ಮಾತನಾಡಿ ನಾಯಕ ಮತ್ತು ಬೆಸ್ತರು ದ್ರಾವಿಡ ಸಂಸ್ಕೃತಿಯ ಎರಡು ಕಣ್ಣುಗಳಿದ್ದಂತೆ, ನಮ್ಮನ್ನು ರಾಜಕೀಯ ಶಕ್ತಿಗಾಗಿ ಪರಿಶಿಷ್ಟ ಪಂಗಡಕ್ಕೆ ಸೇರಿಸಿ, ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ಒಗಿಸುವಂತೆ ಶಾಸಕರಲ್ಲಿ ಮನವಿ ಮಾಡಿದರಲ್ಲದೆ, ಕೆಳ ಸಮುದಾಯದ ಅಭಿವೃದ್ಧಿಗಾಗಿ ಶೀಘ್ರವಾಗಿ ಜಾತಿ ಗಣತಿ ವರದಿ ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಶಾಸಕ ಜೆ.ಎನ್‌.ಗಣೇಶ್ ಮಾತನಾಡಿ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಗಂಗಾಮತಸ್ಥರು ವಿವಿಧ ಕ್ಷೇತ್ರಗಳಲ್ಲಿ ಹಿಂದುಳಿದಿದ್ದಾರೆ. ಸಮುದಾಯವನ್ನು ಎಸ್ಟಿಗೆ ಸೇರಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು, ಜನಸಂಖ್ಯೆನುಗುಣವಾಗಿ ಮೀಸಲಾತಿ ಕೇಳುವುದರಲ್ಲಿ ತಪ್ಪಿಲ್ಲ. ನಿಜಶರಣ ಅಂಬಿಗರ ಚೌಡಯ್ಯನವರ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನಕ್ಕಾಗಿ ಅಧಿವೇಷನದಲ್ಲಿ ಪ್ರಸ್ತಾಪ ಮಾಡಿ ಸುಮಾರು 50ಕೋಟಿ ರೂ 2ಕೋಟಿ ರೂ ಸಮುದಾಯ ಭವನಕ್ಕೆ ಅನುದಾನ ನೀಡುವದಾಗಿ ಭರವಸೆಯನ್ನು ನೀಡಿದರು ಕಾರ್ಯಕ್ರಮದಲ್ಲಿ ಟಿ.ರಾಮಚಂದ್ರ​‍್ಪ, ದತ್ತಾತ್ರೇಯರೆಡ್ಡಿ ಸೇರಿದಂತೆ ಇತರರು ಮಾತನಾಡಿದರು. ಕೋತಿ ಶಿವಕುಮಾರ್, ಹೆಚ್‌.ಶಿವಶಂಕರಗೌಡ, ಜಗನ್ನಾಥಗೌಡ, ಪಿ.ಐ.ವಾಸುಕುಮಾರ್,ರೇಣುಕರಾಜ ಸುಣಗಾರ, ಎಲಿಗಾರ ನಾಗರಾಜ, ಕಾರೇಕಲ್ ಪ್ರಕಾಶ್, ಬಿ.ಸಿದ್ದಪ್ಪ, ಮೆಟ್ರಿ ನೇಣಕಿ ಗೀರೀಶ್, ಕಾರೇಕಲ್ ಮನೋಹರ್,ಚಿದಾನಂದಪ್ಪ, ದೇವಸಮುದ್ರ ಷಣ್ಮುಖಪ್ಪ,ಕಟ್ಟೆ ವಿಜಯಮಹಾಂತೇಶ್, ತಳಕಲ್ ಭೀಮೇಶ್, ಕಟ್ಟೆ ಸಣ್ಣ ದುರುಗಪ್ಪ,ಭರತ್ ಬಿ.ಸಿ., ಬೆಳಗೋಡು ರಾಮಣ್ಣ, ಕೋತಿ ಜಂಬಣ್ಣ, ಬಿ.ನಾರಾಯಣಪ್ಪ ಸೇರಿದಂತೆ ವಿವಿಧ ಗ್ರಾಮಗಳ ಗಂಗಾಮತ ಸಮುದಾಯದವರು ಭಾಗವಹಿಸಿದ್ದರು. 

ಫೆ.2ರಾಮಸಾಗರ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಅಂಬಿಗರ ಚೌಡಯ್ಯನವರ ಪೀಠದ ಪೀಠಾಧ್ಯಕ್ಷರಾದ ಪೂ. ಜಗದ್ಗುರು ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಉದ್ಘಾಟಿಸಿದರು.