ಜಾನಪದ ಕೋಗಿಲೆ ಸುಕ್ರಜ್ಜಿ ಇನ್ನಿಲ್ಲ
ಕಾರವಾರ 13 : ಜನಪದ ಹಾಡುಗಾರ್ತಿ, ಜನಪದ ಕೋಗಿಲೆ ಎಂದೇ ಪ್ರಸಿದ್ಧಿ ಪಡೆದಿದ್ದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಬಡಗೇರಿ ನಿವಾಸಿ ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮು ಗೌಡ(88)ಅನಾರೋಗ್ಯ ಕಾರಣ ಗುರುವಾರ ಬೆಳಗ್ಗೆ ನಿಧನರಾದರು. ಸುಕ್ರಿ ಬೊಮ್ಮ ಗೌಡ ಅನಾರೋಗ್ಯದ ಕಾರಣ ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಸುಕ್ರಿ ಬೊಮ್ಮ ಗೌಡರಿಗೆ ಹಲವು ದಿನಗಳಿಂದ ಅನಾರೋಗ್ಯ ಹಿನ್ನಲೆಯಲ್ಲಿ ಹಲವು ಬಾರಿ ಚಿಕಿತ್ಸೆ ಕೂಡ ನೀಡಲಾಗುತ್ತಿತ್ತು. ಸುಸ್ಥಿರವಾಗಿದ್ದ ಅವರ ಆರೋಗ್ಯದ ಸ್ಥಿತಿ ಒಂದೇ ಸಮನೆ ಹದಗೆಟ್ಟಿತ್ತು. ಉಸಿರಾಟದ ಸಮಸ್ಯೆ ಅವರನ್ನು ಕಾಡಿತ್ತು.ದೇಶದ ಪ್ರತಿಷ್ಠಿತ ಗೌರವ ಪದ್ಮಶ್ರೀ ವನ್ನು 2017 ರಲ್ಲಿ ಕೇಂದ್ರ ಸರಕಾರ ಸುಕ್ರಜ್ಜಿಯವರಿಗೆ ನೀಡಿ ಗೌರವಿಸಲಾಗಿತ್ತು. ಅದರಂತೆ 1999 ರಲ್ಲಿ ಹಂಪಿ ವಿವಿಯಿಂದನಾಡೋಜ, 2007 ರಾಜ್ಯೋತ್ಸವ, 1998 ರಲ್ಲಿ ಜಾನಪದ ಶ್ರೀ ಪ್ರಶಸ್ತಿಯನ್ನು ಕೂಡ ಸುಕ್ರಜ್ಜಿಯು ಪಡೆದುಕೊಂಡಿದ್ದಾರೆ. ಜಾನಪದ ಹಾಡುಗಳ ಮೂಲಕ ಸಮುದಾಯದ ಮಹಿಳೆಯ ಪರಿಚಯಿಸುವ ಕಾರ್ಯ ನಿರ್ವಹಿಸಿದ್ದ ಸುಕ್ರಜ್ಜಿ,ಅನೇಕ ಹೋರಾಟಗಳ ಮೂಲಕವೂ ಮುಂಚೂಣಿ ಯಲ್ಲಿ ಇರುತ್ತಿದ್ದರು 90ರ ದಶಕದಲ್ಲಿ ಸಿಪಿಐ ಯಾಗಿದ್ದ ಶ್ರೀಧರ್. ಎಸ್. ಆರ್. ಜೊತೆಗೆ ಅಂಕೋಲಾ ತಾಲೂಕಿನಲ್ಲಿ ಕಳ್ಳಭಟ್ಟಿ ಸಾರಾಯಿ ಸಂಪೂರ್ಣವಾಗಿ ತೊಡೆದುಹಾಕುವ ನಿಟ್ಟಿನಲ್ಲಿ ಅವರ ಸಹಾಯ ಪಡೆದು ಆಂದೋಲನದಲ್ಲಿ ಭಾಗಿಯಾಗಿದ್ದರು .