ಹೂಗಾರರ ಸಮುದಾಯ ಸಂಘಟಿತಗೊಳ್ಳಲಿ: ಸಂಸದ ಜಗದೀಶ ಶೆಟ್ಟರ
Florist community should organize: MP Jagadish Shetty
ಹೂಗಾರರ ಸಮುದಾಯ ಸಂಘಟಿತಗೊಳ್ಳಲಿ: ಸಂಸದ ಜಗದೀಶ ಶೆಟ್ಟರ
ಸವದತ್ತಿ, 16 ; ಸಮುದಾಯ ಸಂಘಟನೆಯಾದಾಗ ಮಾತ್ರ ಬೇಡಿಕೆಗಳು ಈಡೇರುತ್ತವೆ. ಈ ನಿಟ್ಟಿನಲ್ಲಿ ಹೂಗಾರ ಸಮುದಾಯ ಸಂಘಟಿಸಿ ಶಕ್ತಿ ಪ್ರದರ್ಶಿಸಬೇಕು ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.ಪಟ್ಟಣದ ಮಾಮಾನಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹೂಗಾರ ಮಾದಯ್ಯ ಜಯಂತಿ ಹಾಗೂ ಜಿಲ್ಲಾ ಹೂಗಾರ ಸಮುದಾಯ ಸಮಾವೇಶದಲ್ಲಿ ಮಾತನಾಡಿದರು.
ಕಾಯಕದ ಮೂಲಕ ಮಾದಯ್ಯನವರು ದೇವರಾಗಿದ್ದಾರೆ. ಸಮುದಾಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಸಮಾಜದ ಮುನ್ನೆಲೆಗೆ ತರವ ಕೆಲಸ ಮಾಡಬೇಕು. 2ಎ ಜಾತಿ ಪ್ರಮಾಣ ಪತ್ರ ಹಂಚಿಕೆಯಲ್ಲಿ ಸಮುದಾಯದವರಿಗೆ ತೊಂದರೆ ಆದಲ್ಲಿ ನನ್ನ ಗಮನಕ್ಕೆ ತನ್ನಿ. ಸಂಬಂಧಿಸಿದವರಿಗೆ ಮಾರ್ಗದರ್ಶನ ಮಾಡುತ್ತೇನೆ. ನನ್ನ ಗೆಲೂವಿನಲ್ಲಿ ಹೂಗಾರ ಸಮುದಾಯದ ಪಾತ್ರ ದೊಡ್ಡದಿದೆ ಎಂದರು.ಸಾನ್ನಿಧ್ಯ ವಹಿಸಿದ್ದ ಕಾಗವಾಡ ಗುರುದೇವಾಶ್ರಮದ ಯತೀಶ್ವರಾನಂದ ಸ್ವಾಮೀಜಿ ಮಾತನಾಡಿ, ಶಿಕ್ಷಣ. ಮತ್ತು ರಾಜಕೀಯದಿಂದ ಸಮುದಾಯ ಮುನ್ನಲೆಗೆ ಬರಲು ಸಾಧ್ಯ ಹಾಗಾಗಿ ಮಕ್ಕಳಿಗೆ ಗುಣಮಟ್ಟದಲ್ಲಿ ಶಿಕ್ಷಣ ನೀಡಬೇಕು. ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಸಮಾಜದ ಎಲ್ಲರೊಂದಿಗೆ ಪ್ರೀತಿಯಿಂದ ಬೇರೆಯಬೇಕು ಎಂದು ತಿಳಿಸಿದರು.ಹರ್ಷ ಕಾರ್ಖಾನೆ ನಿರ್ದೇಶಕ ಮೃಣಾಲ್ ಹೆಬ್ಬಾಳ್ಕರ್ ಮಾತನಾಡಿ, ಹೂಗಾರ ಸಮುದಾಯ ಅಭಿವೃದ್ಧಿಗೆ ಹೆಬ್ಬಾಳ್ಕರ್ ಕುಟುಂಬ ಸದಾ ಬದ್ಧವಾಗಿದೆ ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ವಿರೂಪಾಕ್ಷ ಮಾಮನಿ ಮಾತನಾಡಿ, ಸದಾ ಹೂಗಾರ ಸಮುದಾಯದ ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದು ತಿಳಿಸಿದರು. ಚಿಂಚೊಳ್ಳಿಯ ಆನಂದ ಆಶ್ರಮದ ಬಸವ ಶರಣರು, ತಾಲೂಕಾಧ್ಯಕ್ಷ ಶಿವಾನಂದ ಹೂಗಾರ ಮಾತನಾಡಿದರು. ಬೆಳಗ್ಗೆ ಎಪಿಎಂಸಿಯಲ್ಲಿ 300 ಕುಂಭ, ವಿವಿಧ ಕಲಾ ರೂಪಕಗಳು, ವಾದ್ಯಮೇಳದೊಂದಿಗೆ ಮಾದಯ್ಯನವರ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಿತು. ಸಮುದಾಯದ ಜಿಲ್ಲಾಧ್ಯಕ್ಷ ಶಿವಾನಂದ ಹೂಗಾರ, ಪ್ರಧಾನ ಕಾರ್ಯದರ್ಶಿ ಮೋಹನ ಹೂಗಾರ, ಕಾರ್ಯದರ್ಶಿ ಮಾರುತಿ ಗುರವ, ಖಜಾಂಚಿ ಬಸವರಾಜ ಹೂಗಾರ, ತಾಲೂಕು ಪದಾಧಿಕಾರಿಗಳಾದ ಬಸವರಾಜ ಹೂಗಾರ, ನಾಗಪ್ಪ ಹೂಗಾರ, ಮಲ್ಲಪ್ಪ ಹೂಗಾರ, ಮಾರುತಿ ಹೂಗಾರ ಇತರರು ಇದ್ದರು.ಬಾಕ್ಸ್-1
ಪವಿತ್ರ ಸಮುದಾಯದವರಾದ ಹೂಗಾರರು ಭಗವಂತನಿಗೆ ಹತ್ತಿರವಾದವರಯ. ಹೂಗಾರ ಸಮುದಾಯ ಸಂಘಟಿತವಾಗಿ ಗಟ್ಟಿಗೊಳ್ಳಬೇಕು. ಸಮಯದಾಯ ಜನರ ಬೆನ್ನೆಲುಬಾಗಿ ಅವರ ಕೆಲಸದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತೇನೆ. ಸರ್ಕಾರ ಮಟ್ಟದಲ್ಲಿ ಸಮುದಾಯಕ್ಕೆ ಅನುಕೂಲ ಕಲ್ಪಿಸುವ ಕೆಲಸ ಮಾಡುತ್ತೇನೆ.ವಿಶ್ವಾಸ ವೈದ್ಯಶಾಸಕ-
ಬಾಕ್ಸ್-2
ಹೂಗಾರ ಸಮಯದಾಯ ಜಿಲ್ಲೆಯಲ್ಲಿ ಅಂದಾಜು 2 ಲಕ್ಷ ಜನಸಂಖ್ಯೆ ಹೊಂದಿದೆ. ರಾಜಕೀಯ, ಶೈಕ್ಷಣಿಕ, ಆರ್ಥಿಕವಾಗಿ ಸಮುದಾಯ ಹಿಂದೆ ಉಳಿದಿದೆ. ಹೂಗಾರರ ಅಭಿವೃದ್ಧಿಗೆ ಇರುವ ನಿಗಮ ಕಾಗದಕ್ಕೆ ಮಾತ್ರ ಸೀಮಿತಗೊಂಡಿದ್ದು, 2ಎ ಜಾತಿ ಪ್ರಮಾಣ ಪತ್ರ ಪಡೆಯುವಲ್ಲಿ ಸಮುದಾಯದವರು ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕರ ಸಮುದಾಯಕ್ಕೆ ವಿಶೇಷ ಯೋಜನೆ ನೀಡುವ ಮೂಲಕ ಮುನ್ನೆಲೆಗೆ ತರುವ ಕೆಲಸ ಮಾಡಬೇಕು.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 