ಜಿಲ್ಲಾಡಳಿತ ಭವನದಲ್ಲಿ ಗಣರಾಜ್ಯೋತ್ಸವ ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್ ಅವರಿಂದ ಧ್ವಜಾರೋಹಣ

Flag Hoisting by District Collector C.N. Sridhar on Republic Day at District Administration House

ಜಿಲ್ಲಾಡಳಿತ ಭವನದಲ್ಲಿ ಗಣರಾಜ್ಯೋತ್ಸವ  ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್ ಅವರಿಂದ ಧ್ವಜಾರೋಹಣ 

ಗದಗ  26: ನಗರದ ಜಿಲ್ಲಾಡಳಿತ ಭವನದಲ್ಲಿ  76 ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ರವಿವಾರ ಜಿಲ್ಲಾಧಿಕಾರಿ ಸಿ.ಎನ್‌. ಶ್ರೀಧರ್ ಅವರು ಧ್ವಜಾರೋಹಣ ನೆರವೇರಿಸಿದರು.  

ನಂತರ ಮಾತನಾಡಿದ ಅವರು ರಾಜ್ಯದಲ್ಲಿ 7 ಕೋಟಿ ಸಾರ್ವಜನಿಕರಿದ್ದು ಇದರಲ್ಲಿ 5 ರಿಂದ 6 ಲಕ್ಷ ಜನಕ್ಕೆ ಮಾತ್ರ ಸರ್ಕಾರಿ ನೌಕರಿ ದೊರೆಯುತ್ತದೆ.  ನಾವೆಲ್ಲ ಸಾರ್ವಜನಿಕರ ಸೇವೆಯಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುವವರಾಗಿದ್ದು ಸರ್ಕಾರದ ಹಾಗೂ ಸಂವಿಧಾನದ ಆಶಯ ಈಡೇರಿಕೆಗೆ ಶ್ರಮಿಸೋಣ ಎಂದರು. ಸಂವಿಧಾನದ ಅಡಿಯಲ್ಲಿ ನಾವೆಲ್ಲ ಸೇವೆ ಸಲ್ಲಿಸಬೇಕು. ಸಾರ್ವಜನಿಕರಿಗೆ ಸೌಲಭ್ಯ ಕಲ್ಪಿಸುವುದು ನಮ್ಮ ಧ್ಯೇಯವಾಗಿರಬೇಕು. ಗಡಿಯಲ್ಲಿನ ಸೇನೆಯಲ್ಲಿ ಸೇವೆ ಮಾಡುವಂತೆ ನಾವೂ ಸಹ ಸಾರ್ವಜನಿಕರ ಸೇವೆಯಲ್ಲಿ ತೊಡಗಿಕೊಳ್ಳೋಣ. ಸಾರ್ವಜನಿಕರ ಕೆಲಸ ಮಾಡುವ ಮೂಲಕ ಖುಷಿ ಪಡುವ ಮನೋಭಾವ ಬೆಳೆಸಿಕೊಳ್ಳೋಣ ಎಂದರು.     ಭಾರತ ದೇಶದ ಸಂವಿಧಾನ ರಚನೆಯ ಹಿಂದೆ ತುಂಬ ಶ್ರಮವಿದ್ದು ಇದನ್ನು ಪ್ರತಿಯೊಬ್ಬರು ಪಾಲಿಸುವ ಮೂಲಕ ಸಂವಿಧಾನಕ್ಕೆ ಗೌರವ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್ ಕರೆ ನೀಡಿದರು. ಈ ಸಂದರ್ಭದಲ್ಲಿ  ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ., ಉಪವಿಭಾಗಾಧಿಕಾರಿ ಗಂಗಪ್ಪ ಎಂ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗೆಳ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.