ಭಾರತ ಸೇರಿದಂತೆ ಐದು ದೇಶಗಳು 2027 ಏಷ್ಯಾಕಪ್ ಫುಟ್ಬಾಲ್ ಆಯೋಜಿಸಲು ಉತ್ಸುಕ


ನವದೆಹಲಿ, ಜುಲೈ 2: ಭಾರತ ಸೇರಿದಂತೆ ಐದು ಫುಟ್ಬಾಲ್ ಸಂಘಗಳು ಏಷ್ಯನ್ ಫುಟ್ಬಾಲ್ ಕಾನ್ಫೆಡರೇಶನ್ (ಎಎಫ್‌ಸಿ) ಏಷ್ಯಾ ಕಪ್ 2027 ಅನ್ನು ಆಯೋಜಿಸುವ ಇಚ್ಛೆಯನ್ನು ವ್ಯಕ್ತಪಡಿಸಿವೆ ಎಂದು ಎಎಫ್‌ಸಿ ಬುಧವಾರ ಈ ಮಾಹಿತಿಯನ್ನು ನೀಡಿದೆ.

  ಈ ಫುಟ್ಬಾಲ್ ಸಂಘಗಳಲ್ಲಿ ಭಾರತ, ಇರಾನ್, ಕತಾರ್, ಸೌದಿ ಅರೇಬಿಯಾ ಮತ್ತು ಉಜ್ಬೇಕಿಸ್ತಾನ್ ಸೇರಿವೆ ಎಂದು ಎಎಫ್‌ಸಿ ವರದಿ ಮಾಡಿದೆ. ಈ ಐದು ಫುಟ್ಬಾಲ್ ಸಂಘಗಳಲ್ಲಿ 1956 ರಿಂದ ಎರಡು ಬಾರಿ ಈ ಪಂದ್ಯಾವಳಿಯನ್ನು ಆಯೋಜಿಸಿವೆ. ಕತಾರ್ 1988 ಮತ್ತು 2011 ರಲ್ಲಿ ಎಎಫ್‌ಸಿ ಏಷ್ಯನ್ ಕಪ್‌ಗೆ ಆತಿಥ್ಯ ವಹಿಸಿದರೆ, ಇರಾನ್ ಪಂದ್ಯಾವಳಿಯನ್ನು 1968 ಮತ್ತು 1976 ರಲ್ಲಿ ಆಯೋಜಿಸಿತ್ತು.

  ಭಾರತ ಮತ್ತು ಉಜ್ಬೇಕಿಸ್ತಾನ್ ಮತ್ತು ಸೌದಿ ಅರೇಬಿಯಾಗಳಿಗೆ ಆತಿಥ್ಯ ವಹಿಸಲು ಇನ್ನೂ ಅವಕಾಶ ಸಿಕ್ಕಿಲ್ಲ. 2022 ಎಎಫ್‌ಸಿ ಮಹಿಳಾ ಏಷ್ಯಾಕಪ್‌ಗೆ ಆತಿಥ್ಯ ವಹಿಸಲು ಭಾರತಕ್ಕೆ ಇತ್ತೀಚೆಗೆ ಅಧಿಕಾರ ನೀಡಲಾಗಿದೆ. ಕಳೆದ ವರ್ಷ ಎಎಫ್‌ಸಿ 19 ವರ್ಷದೊಳಗಿನವರ ಆತಿಥ್ಯ ವಹಿಸಲು ಉಜ್ಬೇಕಿಸ್ತಾನ್‌ಗೆ ಅವಕಾಶ ಸಿಕ್ಕಿತ್ತು.

  "ನಮ್ಮ ಆಟಗಾರರು, ತಂಡಗಳು, ಅಧಿಕಾರಿಗಳು ಮತ್ತು ಅಭಿಮಾನಿಗಳಿಗಾಗಿ ವಿಶ್ವಮಟ್ಟದ ವೇದಿಕೆಯನ್ನು ಆಯೋಜಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಕ್ಕಾಗಿ ಏಷ್ಯನ್ ಫುಟ್ಬಾಲ್ ಕುಟುಂಬದ ಪರವಾಗಿ ನಮ್ಮ ಎಲ್ಲ ಸದಸ್ಯ ಸಂಘಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ" ಎಂದು ಎಎಫ್‌ಸಿ ಅಧ್ಯಕ್ಷ ಶೇಖ್ ಸಲ್ಮಾನ್ ಹೇಳಿದ್ದಾರೆ.